ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ಕರೆಯೋಕೆ ಕಾರಣ ಇಲ್ಲಿರುವ ಮರಗಳು. ಆದರೆ, ಇಲ್ಲಿನ ಮರಗಳಿಗೆ ಪೋಸ್ಟರ್ಗಳನ್ನು ಅಂಟಿಸಲು ನಿರಂತರವಾಗಿ ಮೊಳೆ ಬೀಳುತ್ತಿದೆ. ಇದನ್ನು ತಪ್ಪಿಸಲು ಈಗ ದೊಡ್ಡ ಮಟ್ಟದಲ್ಲಿ ಮೊಳೆ ಮುಕ್ತ ಮರ ಬೆಂಗಳೂರಿಗೆ ಕರೆ ನೀಡಲಾಗಿದೆ.
ಬೆಂಗಳೂರಿನ ರಸ್ತೆ ಬದಿ ಮರಗಳಿಗೆ ಮೊಳೆ ಹಾಗೂ ಸ್ಟಾಪಲ್ ಪಿನ್ ಹೊಡೆದು ಅನಧಿಕೃತವಾಗಿ ಜಾಹಿರಾತುಗಳನ್ನು ಪ್ರದರ್ಶಿಸಲಾಗುತ್ತಿದೆ. ಇದರಿಂದ ಮರಗಳಿಗೆ ಹಾನಿಯಾಗುತ್ತಿರುವುದಲ್ಲದೆ, ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಇದನ್ನು ತಡೆಯುವ ಕಾರ್ಯಕ್ರಮಕ್ಕೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ನಟ ಕಿರಿಕ್ ಕೀರ್ತಿ ಹಾಗೂ ನಟ ಗಣೇಶ್ ರಾವ್ ಬೆಂಬಲ ನೀಡಿದ್ದಾರೆ.
ಭಾನುವಾರ ಬೆಳಗ್ಗೆ ನ್ಯಾಷನಲ್ ಕಾಲೇಜು ಗ್ರೌಂಡ್ನಲ್ಲಿ ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕಿರಿಕ್ ಕೀರ್ತಿ ಆಗಮಿಸಲಿದ್ದಾರೆ. 11 ಗಂಟೆಗೆ 100 ಅಡಿ ರಸ್ತೆಯಲ್ಲಿರುವ ಇಂದಿರಾ ನಗರ ಕ್ಲಬ್ ಸಮೀಪ ಅಣ್ಣಾಮಲೈ ಬರಲಿದ್ದಾರೆ. ಯಶವಂತಪುರದ ಚೌಡೇಶ್ವರಿ ಬಸ್ ಸ್ಟಾಪ್ ಬಳಿ ಮಧ್ಯಾಹ್ನ 3.30ಕ್ಕೆ ಗಣೇಶ್ ರಾವ್ ಬರಲಿದ್ದು, ಮೊಳೆ ಮುಕ್ತ ಮರ ಬೆಂಗಳೂರು ಹಬ್ಬಕ್ಕೆ ಕೈ ಜೋಡಿಸಲಿದ್ದಾರೆ.