ಕುಮಾರಸ್ವಾಮಿ ಮಾಡಿದಂತೆ ನೀವೂ ಸಾಲ ಮನ್ನಾ ಮಾಡಿ: BSYಗೆ ರೇವಣ್ಣ ಒತ್ತಾಯ
ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾಡಿದಂತೆ ನೀವೂ ರೈತಾಪಿ ವರ್ಗದ ಸಾಲಮನ್ನಾ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯ ಮಾಡಿದ್ದಾರೆ. ಸಾಲಾ ಮನ್ನಾ ಮಾಡದಿದ್ದರೆ ದೇವರು ನಿಮ್ಮನ್ನ ಕ್ಷಮಿಸಲ್ಲ: ಕೂಲಿ ಕಾರ್ಮಿಕರು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಾ ಮನ್ನಾ ಮಾಡಿ ನೆರವಾಗದಿದ್ದರೆ ದೇವರು ನಿಮ್ಮನ್ನ ಕ್ಷಮಿಸಲ್ಲ. ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ರೈತರ ಸಾಲ ಮನ್ನಾ ಮಾಡಿ. ರಾಜ್ಯ ಸರ್ಕಾರ 2ನೆ ಪ್ಯಾಕೇಜ್ನಲ್ಲಿ ಸಾಲಾ ಮನ್ನಾ ಮಾಡಿ ಎಂದು ಹಾಸನದಲ್ಲಿ […]
ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾಡಿದಂತೆ ನೀವೂ ರೈತಾಪಿ ವರ್ಗದ ಸಾಲಮನ್ನಾ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯ ಮಾಡಿದ್ದಾರೆ.
ಸಾಲಾ ಮನ್ನಾ ಮಾಡದಿದ್ದರೆ ದೇವರು ನಿಮ್ಮನ್ನ ಕ್ಷಮಿಸಲ್ಲ: ಕೂಲಿ ಕಾರ್ಮಿಕರು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಾ ಮನ್ನಾ ಮಾಡಿ ನೆರವಾಗದಿದ್ದರೆ ದೇವರು ನಿಮ್ಮನ್ನ ಕ್ಷಮಿಸಲ್ಲ. ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ರೈತರ ಸಾಲ ಮನ್ನಾ ಮಾಡಿ. ರಾಜ್ಯ ಸರ್ಕಾರ 2ನೆ ಪ್ಯಾಕೇಜ್ನಲ್ಲಿ ಸಾಲಾ ಮನ್ನಾ ಮಾಡಿ ಎಂದು ಹಾಸನದಲ್ಲಿ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಯಡಿಯೂರಪ್ಪನವರೇ ಕೊರೊನಾ ಸೋಂಕನ್ನು ಹಾಸನಕ್ಕೆ ಕಳಿಸಿರಬೇಕು! ಹಾಸನದಲ್ಲಿ ಕೊರೊನಾ ಪಾಸಿಟೀವ್ ಪ್ರಕರಣದ ಬಗ್ಗೆ ಮಾತನಾಡಿದ ಹೆಚ್.ಡಿ.ರೇವಣ್ಣ,ಬಹುಶಃ ಶಿವಮೊಗ್ಗದಲ್ಲಿ ಪಾಸಿಟೀವ್ ಬಂತು ಎಂದು ಯಡಿಯೂರಪ್ಪನೇ ಹಾಸನಕ್ಕೆ ಕಳಿಸಿರಬೇಕು. ಇಷ್ಟು ದಿನ ಹಾಸನ ಗ್ರೀನ್ ಜೋನ್ ಆಗಿತ್ತು. ಆದ್ರೆ ಈಗ ಜಿಲ್ಲೆಗೆ ಕೊರೊನಾ ವೈರಸ್ ಎಂಟ್ರಿಯಾಗಿದೆ. ಇದರ ಹಿಂದೆ ಯಾರಿದ್ದಾರೋ ಏನೋ ನನಗೆ ಗೊತ್ತಿಲ್ಲ. ಹೊರ ರಾಜ್ಯದಲ್ಲಿರುವ ನಮ್ಮ ಜನ ಇಲ್ಲಿಗೆ ವಾಪಸಾಗಲಿ. ಆದ್ರೆ ಬರೋರ ಅರೋಗ್ಯದ ದೃಢೀಕರಣದ ಬಳಿಕವೇ ಒಳಬರಲಿ ಎಂದು ಹಾಸನದಲ್ಲಿ ಮಾಜಿ ಸಚಿವ ರೇವಣ್ಣ ನೀಡಿದರು.