ಹೆಚ್​.ಡಿ.ಕುಮಾರಸ್ವಾಮಿಯೇ ಸಿಡಿ ‘ಮಹಾನಾಯಕ’ ಇರಬಹುದು, ಎಸ್​ಐಟಿ ಪೊಲೀಸರು ಅವರ ತನಿಖೆ ಮಾಡಲಿ: ಕೆ.ಎನ್.ರಾಜಣ್ಣ

|

Updated on: Mar 19, 2021 | 12:52 PM

ಸಿಡಿಗೆ ಸಂಬಂಧಿಸಿದ ಮಹಾನಾಯಕ ಯಾರು ಬೇಕಾದರೂ ಆಗಿರಬಹುದು. ಅಶೋಕ್, ವಿಜಯೇಂದ್ರ ಮತ್ತೊಬ್ಬನೂ ಎಂದು ಹೇಳಬಹುದು ಅಥವಾ ಆ ಮಹಾನಾಯಕ ಹೆಚ್.ಡಿ.ಕುಮಾರಸ್ವಾಮಿಯೇ ಇರಬೇಕು. ಏಕೆಂದರೆ ಕುಮಾರಸ್ವಾಮಿಯೇ ಒಕ್ಕಲಿಗ ಸಮುಯದಾಯದ ನಾಯಕ. ಅಲ್ಲದೇ ಕುಮಾರಸ್ವಾಮಿಗೆ ಎಲ್ಲವೂ ಗೊತ್ತು ಎನ್ನಲಾಗುತ್ತಿದೆ.

ಹೆಚ್​.ಡಿ.ಕುಮಾರಸ್ವಾಮಿಯೇ ಸಿಡಿ ‘ಮಹಾನಾಯಕ’ ಇರಬಹುದು, ಎಸ್​ಐಟಿ ಪೊಲೀಸರು ಅವರ ತನಿಖೆ ಮಾಡಲಿ: ಕೆ.ಎನ್.ರಾಜಣ್ಣ
ಮಧುಗಿರಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಕೆಎನ್ ರಾಜಣ್ಣ
Follow us on

ತುಮಕೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಹಿಂದಿರುವ ‘ಮಹಾನಾಯಕ’ ಯಾರು ಎಂಬ ಪ್ರಶ್ನೆ ದಿನೇ ದಿನೇ ರಾಜ್ಯ ರಾಜಕಾರಣದಲ್ಲಿ ಹಲವು ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ಇದೀಗ ‘ಸಿಡಿ’ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಅವರ ಸುತ್ತ ತಿರುಗುತ್ತಿದೆ. ಈ ಬಗ್ಗೆ ತುಮಕೂರಿನಲ್ಲಿ ಮಾತನಾಡಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಆ ಮಹಾನಾಯಕ ಹೆಚ್.ಡಿ.ಕುಮಾರಸ್ವಾಮಿಯೇ ಇರಬಹುದು. ಕುಮಾರಸ್ವಾಮಿಯೇ ಒಕ್ಕಲಿಗ ಸಮುಯದಾಯದ ನಾಯಕ. ಇದರಲ್ಲಿ ನಾವು ಇಂಥವರೇ ಎಂದು ಹೇಳುವುದು ಕಷ್ಟ. ಏನಿದ್ದರೂ ನಮ್ಮ ನಮ್ಮ ಊಹೆಯ ಮೇಲೆ ಹೇಳುವುದಾಗಿದೆ. ಈ ಮಧ್ಯೆ ಹೆಚ್​ಡಿಕೆಗೆ ಸಿಡಿ ಬಗ್ಗೆ ಎಲ್ಲ ಗೊತ್ತಿದ್ದ ಮೇಲೆ ಎಸ್​ಐಟಿ ಅವರಿಂದಲೇ ಹೇಳಿಕೆ ಪಡೆದುಕೊಳ್ಳಲಿ. SIT ಕುಮಾರಸ್ವಾಮಿ ಅವರ ಹೇಳಿಕೆ ದಾಖಲು ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಸಿಡಿಗೆ ಸಂಬಂಧಿಸಿದ ಮಹಾನಾಯಕ ಯಾರು ಬೇಕಾದರೂ ಆಗಿರಬಹುದು. ಅಶೋಕ್, ವಿಜಯೇಂದ್ರ ಮತ್ತೊಬ್ಬನೂ ಎಂದು ಹೇಳಬಹುದು ಅಥವಾ ಆ ಮಹಾನಾಯಕ ಹೆಚ್.ಡಿ.ಕುಮಾರಸ್ವಾಮಿಯೇ ಇರಬಹುದು. ಏಕೆಂದರೆ ಕುಮಾರಸ್ವಾಮಿಯೇ ಒಕ್ಕಲಿಗ ಸಮುಯದಾಯದ ನಾಯಕ. ಅಲ್ಲದೇ ಕುಮಾರಸ್ವಾಮಿಗೆ ಎಲ್ಲವೂ ಗೊತ್ತು ಎನ್ನಲಾಗುತ್ತಿದೆ. ಹಾಗಿದ್ದ ಮೇಲೆ ಅವರಿಂದಲೇ ಎಸ್​ಐಟಿ ಹೇಳಿಕೆ ಪಡೆಯಬೇಕು. ಹೆಚ್​ಡಿಕೆ ಸಹ ಸತ್ಯ ಹೊರಗೆ ಬರಲು ಸಹಕಾರ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಾನು ಹಾಗೂ ಪಾವಗಡ ಶಾಸಕ ವೆಂಕಟರಮಣಪ್ಪ ಇಬ್ಬರೂ ರಮೇಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿದ್ದೆವು. ಅವರಿಗೆ ನೈತಿಕವಾಗಿ ಧೈರ್ಯ ತುಂಬ ಕೆಲಸ ಮಾಡಿದ್ದೇವೆ. ಪ್ರಕರಣದ ತನಿಖೆಯಾಗಲಿ. ತಪಿತಸ್ಥರಿಗೆ ಶಿಕ್ಷೆಯಾಗಲಿ. ಅದಕ್ಕೆ ‌ನಮ್ಮದೇನು ಅಡ್ಡಿಯಿಲ್ಲ. ಎಸ್​ಐಟಿ ತನಿಖೆ ಒಂದೊಂದು ದಿನ ಒಂದೊಂದು ಆಯಾಮ ಪಡೆದುಕೊಳ್ಳುತ್ತಿದೆ. ಏನೇ ಆಯಾಮ ಪಡೆದುಕೊಂಡರೂ ಎಸ್​ಐಟಿ ಆಳವಾಗಿ ತನಿಖೆ ನಡೆಸಿ ಸಂಪೂರ್ಣ ಸತ್ಯಾಂಶ ಹೊರ ತರುವ ವಿಶ್ವಾಸವಿದೆ.

ಮೇಲ್ನೋಟಕ್ಕೆ ಇದು ಬ್ಲ್ಯಾಕ್​ಮೇಲ್ ಪ್ರಕರಣ ಅನ್ನಿಸುತ್ತಿದೆ. ಬಹಳ ದಿನಗಳ ಪಿತೂರಿ ನಡೆದಿದೆ. ಅಲ್ಲದೇ, ಎಡಿಟ್ ಮಾಡಿ, ರಷ್ಯಾದಿಂದ ಅಪ್​ಲೌಡ್ ಮಾಡಿದಂತೆ ಮಾಡಿದ್ದಾರೆ. ಇದೆಲ್ಲಾ ಸಾಮಾನ್ಯ ಜನರು ಮಾಡುವಂತಹ ಕೆಲಸ ಅಲ್ಲ. ಇದಕ್ಕೆ ತಾಂತ್ರಿಕ ನೈಪುಣ್ಯತೆ, ಹಣ ಕಾಸಿನ ನೆರವು ಬೇಕು. ದೊಡ್ಡ ಷಡ್ಯಂತ್ರ ಈ ಪಿತೂರಿ ಹಿಂದಿದೆ ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ಯಾರನ್ನು ಬೇಕಾದರೂ ಮಹಾನಾಯಕ ಅನ್ನಬಹುದು. ಆದರೆ, ವಿನಾಕಾರಣ ಯಾರ ಹೆಸರನ್ನೂ ಹೇಳಬಾರದು, ತೇಜೋವಧೆ ಮಾಡಬಾರದು. ಈಗ ಹೆಚ್​.ಡಿ.ಕುಮಾರಸ್ವಾಮಿ ಎಲ್ಲಾ ಗೊತ್ತಿದೆ ಎಂದು ಹೇಳಿದ್ದಾರೆ ಎಂದ ಮೇಲೆ ಎಸ್​ಐಟಿ ಅವರಿವರನ್ನು ಕೇಳುವ ಬದಲು ಹೆಚ್​ಡಿಕೆ ಅವರನ್ನೇ ತನಿಖೆ ಮಾಡಲಿ. ಕುಮಾರಸ್ವಾಮಿ ಅವರ ಹೇಳಿಕೆ ತೆಗೆದುಕೊಳ್ಳಲಿ.‌ ಸತ್ಯ ಹೊರ ತರುವ ಕೆಲಸ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:
ಸಿಡಿ ಷಡ್ಯಂತ್ರದ ‘ಮಹಾನಾಯಕ’ ಡಿ.ಕೆ.ಶಿವಕುಮಾರ್​ ಎಂಬ ಅನುಮಾನದಲ್ಲಿ ಬಿಜೆಪಿ 

‘ಸಿಡಿ’ ಧಾರಾವಾಹಿಯ ಮಹಾನಾಯಕನನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ: ಹೆಚ್​.ಡಿ.ಕುಮಾರಸ್ವಾಮಿ

Published On - 12:18 pm, Fri, 19 March 21