ದೇವನಹಳ್ಳಿ, ಡಿಸೆಂಬರ್ 13: ಅದು ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಕೋಟಿ ಕೋಟಿ ರೂ. ಬೆಲೆ ಬಾಳುವ ಕೃಷಿ ಜಮೀನು (Land). ಹೀಗಾಗೆ ಆ ಜಮೀನಿನ ಮೇಲೆ ಕೆಲವರು ಕಣ್ಣು ಹಾಕಿದ್ದು, ನೂನ್ಯತೆಗಳನ್ನು ಅಸ್ತ್ರವನ್ನಾಗಿಸಿಕೊಂಡು ನಕಲಿ ರಿಜಿಸ್ಟರ್ ಮಾಡಿದ್ದರು. ಆದರೆ ಇದೀಗ ಕೋಟಿ ಕೋಟಿ ರೂ. ಹಣ ಮಾಡುವ ಭರದಲ್ಲಿ ಮಾಡಿದ ತಪ್ಪಿಗೆ ಎಫ್ಐಆರ್ ದಾಖಲಾಗಿದ್ದು, ಕಂಬಿ ಎಣಿಸಲು ಮುಂದಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹನಿಯೂರು ಗ್ರಾಮದಲ್ಲಿ ರೈತ ಸುಬ್ಬಣ್ಣ ತನ್ನ ತಂದೆಗೆ ಈ ಹಿಂದೆ ದಾನವಾಗಿ ಬಂದಿದ್ದ ಎರಡು ಎಕರೆ ಕೃಷಿ ಭೂಮಿಯಲ್ಲಿ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಈ ನಡುವೆ ಸುಬ್ಬಣ್ಣಗೆ ಜಮೀನು ದಾನವಾಗಿ ಬಂದಿದೆ ಎನ್ನುವುದನ್ನು ತಿಳಿದುಕೊಂಡ ಕೆಲವರು ಕೋಟಿ ಕೋಟಿ ರೂ. ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ. ಅದಕ್ಕಾಗಿ ನಕಲಿ ವ್ಯಕ್ತಿಗಳನ್ನ ತಯಾರು ಮಾಡಿದ್ದಾರೆ.
ಇದನ್ನೂ ಓದಿ: ಪುಡಿಗಾಸಿಗಾಗಿ ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊಲೆ: ಬರೊಬ್ಬರಿ 40 ದಿನಗಳ ಬಳಿಕ ಆರೋಪಿಗಳು ಅಂದರ್
ನಕಲಿ ವ್ಯಕ್ತಿಗಳ ಮೂಲಕ ಜಮೀನು ನಮ್ಮದು ಅಂತ ಸಬ್ ರಿಜಿಸ್ಟರ್ ಕಛೇರಿಯಲ್ಲಿ ನೋಂದಣಿ ಸಹ ಮಾಡಿಸಿದ್ದು, ಆ ಮೂಲಕ ಖಾತೆ ಬದಲಾವಣೆಗೆ ಮುಂದಾಗಿದ್ದರಂತೆ. ಹೀಗಾಗಿ ವಿಚಾರ ತಿಳಿದುಕೊಂಡು ರೈತ ಸುಬ್ಬಣ್ಣ ಕುಟುಂಬಸ್ಥರು ತಮಗಾದ ಅನ್ಯಾಯದ ಬಗ್ಗೆ ರಾಜಾನುಕುಂಟೆ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ರಾಜಾನುಕುಂಟೆ ಪೊಲೀಸರು ನಖಲಿ ದಾಖಲೆ ಮಾಡಿ ಜಮೀನು ಹೊಡೆಯಲು ಹುನ್ನಾರ ನಡೆಸಿದ ಹರೀಶ್ ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತ ಹರೀಶ್ ರೈತ ಸುಬ್ಬಣ್ಣ ಜಮೀನಿನಲ್ಲಿರುವ ನೂನ್ಯತೆಗಳನ್ನ ಹುಡುಕಿ ಈ ಹಿಂದೆ ಸುಬ್ಬಣ್ಣಗೆ ದಾನಪತ್ರ ಮಾಡಿದವರ ವಿಳಾಸ ಮತ್ತು ಮಾಹಿತಿಯನ್ನ ಪಡೆದುಕೊಂಡಿದ್ನಂತೆ. ಅಲ್ಲದೆ ಅದೇ ಹೆಸರಿನ ತಂದೆ ಹೆಸರಿರುವ ಚಿಕ್ಕಮಗಳೂರು ಮೂಲದ ಓರ್ವ ಮಹಿಳೆಗೆ ಹಣ ಕೊಡುವುದಾಗಿ ಕರೆತಂದು ನಮ್ಮ ತಂದೆ ಆಸ್ತಿ ಅಂತ ಅಧಿಕಾರಿಗಳ ಜೊತೆ ಶಾಮೀಲಾಗಿ ಜಮೀನು ನೊಂದಾಣಿ ಮಾಡಿಸಿದ್ರಂತೆ. ಅಲ್ಲದೆ ಅದೇ ನೊಂದಾಣಿ ಆಧಾರದ ಮೇಲೆ ಖಾತೆ ಮಾಡಿಸಲು ಹೋದಾಗ ನಖಲಿ ಮಾಡಿರುವುದು ರೈತನ ಕುಟುಂಬಸ್ಥರ ಗಮನಕ್ಕೆ ಬಂದಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
ಇನ್ನೂ ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸರು ಹರೀಶ್ನನ್ನ ಬಂದಿಸಿದ್ದು, ಹರೀಶ್ ಜೊತೆ ಇದ್ದ ಗೌರಮ್ಮ, ರಘು, ಧನು ಮತ್ತು ಬ್ಯಾಟರಾಯನಪುರ ಸಬ್ ರಿಜಿಸ್ಟರ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್: ತಾಯಿ ಸಾವು, ಮಗುವಿನ ಸ್ಥಿತಿ ಗಂಭೀರ
ಒಟ್ಟಾರೆ ಸಬ್ ರಿಜಿಸ್ಟರ್ಗಳ ಜೊತೆಗೂಡಿ ಅಮಾಯಕ ರೈತರ ಜಮೀನನ್ನ ನಕಲಿ ಮಾಡಲು ಹೋಗಿ ಇದೀಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್ನೂ ಈ ಸಂಬಂಧ ಓರ್ವ ನನ್ನ ವಶಕ್ಕೆ ಪಡೆದ ಪೊಲೀಸರು ಉಳಿದ ಮೂವರು ಆರೋಪಿಗಳ ಬಂಧನಕ್ಕೂ ಬಲೆ ಬೀಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.