ಕೊಡಗು: ಶಾಸಕ ಅಪ್ಪಚ್ಚು ರಂಜನ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ₹30 ಸಾವಿರಕ್ಕೆ ಶಾಸಕರ ಸ್ನೇಹಿತರ ಬಳಿ ಬೇಡಿಕೆ ಇಡಲಾಗಿದೆ ಎಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಶಾಸಕರ ಪಿಎ ರವಿ ಅವರು ದೂರು ನೀಡಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಹಲರ ಹೆಸರಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಹಣ ಕೇಳುವ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ. ಹೀಗೆ ಹಣವನ್ನು ಬೇಡಿಕೆಯಿಟ್ಟಾಗ ನಕಲಿ ಖಾತೆ ಎಂಬ ಅರಿವಿಲ್ಲದೇ ಹಣ ನೀಡಿ ಮೋಸಹೋದವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಶಾಸಕ ಅಪ್ಪಚ್ಚು ರಂಜನ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡಲಾಗಿದೆ.
ಧರ್ಮಸ್ಥಳದಲ್ಲಿ ಪರಿಸರ ದಿನ ಆಚರಿಸಿದ ಸಚಿವ ಅರವಿಂದ ಲಿಂಬಾವಳಿ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದಲ್ಲಿ ಸಚಿವ ಅರವಿಂದ ಲಿಂಬಾವಳಿ ವಿಶ್ವ ಪರಿಸರ ದಿನದಂದು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು.
ಇದನ್ನೂ ಓದಿ: ಕೊವಿಡ್ ಬಗ್ಗೆ ಪುನೀತ್ ರಾಜ್ಕುಮಾರ್ ಜಾಗೃತಿ; ಅಭಿಮಾನಿಗಳಿಗೆ ಕೊಟ್ರು ಒಂದಷ್ಟು ಟಿಪ್ಸ್
ವಿಶ್ವ ಪರಿಸರ ದಿನಾಚರಣೆ: ಕೊವಿಡ್ ಕೇರ್ ಸೆಂಟರ್ಗಳಿಗೆ ಸಸಿ ವಿತರಿಸಿದ ಧಾರವಾಡ ಅರಣ್ಯ ಇಲಾಖೆ
( Fake Facebook account in the name of MLA Appachu Ranjan Demand for 30 thousand)