Karnataka Covid Update: ಕರ್ನಾಟಕದಲ್ಲಿ ಇಂದು 13,800 ಜನರಲ್ಲಿ ಕೊವಿಡ್ ಸೋಂಕು ಪತ್ತೆ; ಪಾಸಿಟಿವಿಟಿ ಪ್ರಮಾಣ ಶೇ.10ಕ್ಕೆ ಇಳಿಕೆ
ಕಳೆದ 24 ಗಂಟೆಗಳಲ್ಲಿ 1,42, 291 ಕೊವಿಡ್ ಪರೀಕ್ಷೆಗಳನ್ನು ರಾಜ್ಯದಲ್ಲಿ ನಡೆಸಲಾಗಿದ್ದು, 13,800 ಜನರಿಗೆ ಕೊರೊನಾ ದೃಢಪಟ್ಟಿದೆ. ಅಲ್ಲದೇ ಇದೇ ಅವಧಿಯಲ್ಲಿ 25,346 ಜನರು ಕೊವಿಡ್ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ 13,800 ಜನರಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಶೇ.10ಕ್ಕೆ ಕೊರೊನಾ ಪಾಸಿಟಿವಿಟಿ ದರ ಇಳಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಏಪ್ರಿಲ್ ಬಳಿಕ ಮೊದಲ ಬಾರಿಗೆ ಕರ್ನಾಟಕದ ಕೊವಿಡ್ ಪಾಸಿಟಿವಿಟಿ ದರದಲ್ಲಿ ಇಳಿಕೆಯಾಗಿದೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 1,42, 291 ಕೊವಿಡ್ ಪರೀಕ್ಷೆಗಳನ್ನು ರಾಜ್ಯದಲ್ಲಿ ನಡೆಸಲಾಗಿದ್ದು, 13,800 ಜನರಿಗೆ ಕೊರೊನಾ ದೃಢಪಟ್ಟಿದೆ. ಅಲ್ಲದೇ ಇದೇ ಅವಧಿಯಲ್ಲಿ 25,346 ಜನರು ಕೊವಿಡ್ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದವರ ಪೈಕಿ 8,852ಜನರು ಬೆಂಗಳೂರಿನವರೇ ಆಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಇಂದಿನ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿಸಿ ರಾಜ್ಯದಲ್ಲಿ ಈವರೆಗಿನ ಕೊವಿಡ್ ಸೋಂಕಿತರ ಸಂಖ್ಯೆ 26,83,314ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 365 ಜನರ ಸಾವನ್ನಪ್ಪಿದ್ದು, ಇದುವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 31,260 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 23,83,758 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 2,68,275 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
?With 1,42,291 tests & 13,800 new cases in last 24 hours Karnataka’s positivity rate falls below 10% for the first time since April 15th.
?25,346 recoveries were reported in the state in last 24 hours including 8,852 in Bengaluru.#KarnatakaFightsBack
— Dr Sudhakar K (@mla_sudhakar) June 5, 2021
ಜಿಲ್ಲಾವಾರು ಮಾಹಿತಿ ಬಾಗಲಕೋಟೆ 175, ಬಳ್ಳಾರಿ 345, ಬೆಳಗಾವಿ 847, ಬೆಂಗಳೂರು ಗ್ರಾಮಾಂತರ 326, ಬೆಂಗಳೂರು ನಗರ 2,686, ಬೀದರ್ 23, ಚಾಮರಾಜನಗರ 340, ಚಿಕ್ಕಬಳ್ಳಾಪುರ 432, ಚಿಕ್ಕಮಗಳೂರು 378, ಚಿತ್ರದುರ್ಗ 449, ದಕ್ಷಿಣ ಕನ್ನಡ 714, ದಾವಣಗೆರೆ 529, ಧಾರವಾಡ 247, ಗದಗ 152, ಹಾಸನ 568, ಹಾವೇರಿ 88, ಕಲಬುರಗಿ 69, ಕೊಡಗು 255, ಕೋಲಾರ 424, ಕೊಪ್ಪಳ 279, ಮಂಡ್ಯ 562, ಮೈಸೂರು 1155, ರಾಯಚೂರು 110, ರಾಮನಗರ 57, ಶಿವಮೊಗ್ಗ 710, ತುಮಕೂರು 695, ಉಡುಪಿ 552, ಉತ್ತರ ಕನ್ನಡ 325, ವಿಜಯಪುರ 254, ಯಾದಗಿರಿ 54 ಹೊಸ ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.
ಇದನ್ನೂ ಓದಿ: CET 2021: ಪಿಯು ಪರೀಕ್ಷೆ ರದ್ದುಗೊಂಡರೂ ಸಿಇಟಿ ನಡೆಯಲಿದೆ: ಡಿಸಿಎಂ ಅಶ್ವತ್ಥ್ ನಾರಾಯಣ
ಕೊವಿಡ್ ಲಸಿಕೆ ಹಾಕಿಸಿಕೊಂಡ ಧ್ರುವ ಸರ್ಜಾ; ಬೈಸೆಪ್ಸ್ ನೋಡಿ ದಂಗಾದ ಫ್ಯಾನ್ಸ್ (Karnataka Covid Update 13,800 new cases and 10 percent positivity rate in Karnataka says Health minister Dr.K Sudhakar)
Published On - 7:41 pm, Sat, 5 June 21