ಕಲಬುರಗಿ: ಪೊಲೀಸರು ನಡೆಸಿದ ಹಲ್ಲೆಯಿಂದ 4 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಕಲಬುರಗಿ ಜಿಲ್ಲಾಸ್ಪತ್ರೆ ಎದುರು ಬಾಲಕಿಯ ಶವವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಜೈನಾಪುರದಲ್ಲಿ ಗ್ರಾ.ಪಂ. ಚುನಾವಣೆ ಸಂಬಂಧ ರಾಜು ತಳವಾರ ಹಾಗೂ ಸಂತೋಷ ತಳವಾರ ಕುಟುಂಬದ ನಡುವೆ ಗಲಾಟೆಯಾಗಿತ್ತು. ಗಲಾಟೆಯಲ್ಲಿ ಜೇವರ್ಗಿ ಪೊಲೀಸರು ಸಂತೋಷ್ ಕುಟುಂಬದ ಹತ್ತು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು. ಡಿ.31 ರಂದು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.
ಸಂತೋಷ್ ಸಹೋದರ ರವಿ ಮತ್ತು ಆತನ ಪತ್ನಿ ಕೂಡಾ ಜೈಲು ಪಾಲಾಗಿದ್ದರು. ಹೀಗಾಗಿ ಹೆತ್ತವರ ಜೊತೆ ಜೈಲಿಗೆ ಹೋಗಿದ್ದ ನಾಲ್ಕು ವರ್ಷದ ಬಾಲಕಿ ಭಾರತಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಪೊಲೀಸರು ತಮ್ಮ ಮೇಲೆ ಮತ್ತು ಬಾಲಕಿ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಯಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಹೆತ್ತವರು ಆರೋಪಿಸಿ ಕಲಬುರಗಿ ನಗರದ ಜಿಲ್ಲಾ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಜೇವರ್ಗಿ ಪೊಲೀಸರ ವಿರುದ್ಧ ಕ್ರಮಕ್ಕೆ ವಿವಿಧ ಮುಖಂಡರು ಆಗ್ರಹ ಮಾಡುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಬಾಗಿಯಾದ ಶಾಸಕ ಡಾ.ಅಜಯಸಿಂಗ್
ಜೇವರ್ಗಿ PSI ಮಂಜುನಾಥ ಹೂಗಾರ್ ಅವರನ್ನು ಅಮಾನತು ಮಾಡುವಂತೆ ಆಗ್ರಹ ಮಾಡಿ ಕಳೆದ ನಾಲ್ಕು ಗಂಟೆಯಿಂದ ರಸ್ತೆ ಮೇಲೆ ಕುಳಿತು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಶಾಸಕ ಡಾ.ಅಜಯಸಿಂಗ್ ಕೂಡಾ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದಾರೆ
ಗ್ರಾಮ ಪಂಚಾಯತಿ ಗಲಾಟೆ: ಹೆತ್ತವರ ಜೊತೆ ಜೈಲು ಸೇರಿದ್ದ 3 ವರ್ಷದ ಬಾಲಕಿ ಸಾವು
Published On - 6:12 pm, Sun, 3 January 21