ಚಿತ್ರದುರ್ಗ: ಜಿಲ್ಲೆಯ ಬಸವೇಶ್ವರ ಮೆಡಿಕಲ್ ಕಾಲೇಜು & ಆಸ್ಪತ್ರೆಯಲ್ಲಿ ಕೊವಿಡ್ ಐಸಿಯು ವಾರ್ಡ್ಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದು ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿದೆ. ಘಟನೆ ಬಳಿಕ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದು ಇತ್ತ ಮಹಿಳೆಯನ್ನೂ ಉಳಿಸಿಕೊಡದೆ, ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯಸರವನ್ನು ಆಸ್ಪತ್ರೆ ಸಿಬ್ಬಂದಿ ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
3 ದಿನದ ಹಿಂದೆ ಕೊವಿಡ್ ವಾರ್ಡ್‌ಗೆ ದಾಖಲಾಗಿದ್ದ ಇಂಗಳದಾಳ್ ಗ್ರಾಮದ ಸುಮಾ(46) ಕೊರಳಿನಲ್ಲಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 4.5ಗ್ರಾಂನ ಮಾಂಗಲ್ಯಸರ ಇತ್ತಂತೆ. ಕೊವಿಡ್ ವಾರ್ಡ್ಗೆ ದಾಖಲಾಗುವಾಗ ಮಾಂಗಲ್ಯಸರ ಕತ್ತಲ್ಲೇ ಇತ್ತಂತೆ. ಆದ್ರೆ ಚಿಕಿತ್ಸೆ ಫಲಿಸದೆ ಸುಮಾ ಮೃತಪಟ್ಟಿದ್ದಾರೆ. ಆಗ ದೇಹವನ್ನು ಕುಟುಂಬಸ್ಥರಿಗೆ ನೀಡಿದ್ದಾಗ ಸರ ನಾಪತ್ತೆಯಾಗಿದೆ. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮೃತಳ ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸವೂ ಮಾಡಿಲ್ಲ. ಚಿನ್ನದ ಸರವೂ ಕಳ್ಳತನವಾಗಿದೆ.
ಈಗ ಆಸ್ಪತ್ರೆ ಬಿಲ್ ಕಟ್ಟುವುದೂ ತಪ್ಪಿಲ್ಲ. ಐಸಿಯು ವಾರ್ಡ್ನಲ್ಲೇ ಚಿನ್ನದ ಸರ ಕಳ್ಳತನ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.