ಧಾರವಾಡ: ಸಾಲ ಮರುಪಾವತಿಸಲು ಖಾಸಗಿ ಬ್ಯಾಂಕ್ನಿಂದ ಬಂದ ನೋಟಿಸ್ಗೆ ಹೆದರಿ ಜಮೀನಿನಲ್ಲಿ ವಿಷಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಮಲಾಪುರ ಬಡಾವಣೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಮಹಾರುದ್ರಪ್ಪ ಕೋಟಿ(52) ಎಂದು ಗುರುತಿಸಲಾಗಿದೆ. Suicide
ಮಹಾರುದ್ರಪ್ಪ ಬೀರೇಶ್ವರ ಸೊಸೈಟಿ ಸೇರಿದಂತೆ ವಿವಿಧೆಡೆ 5 ಲಕ್ಷ ಸಾಲ ಮಾಡಿದ್ದರಂತೆ. ಈ ನಡುವೆ, ಸಾಲ ಮರುಪಾವತಿಸುವಂತೆ ಬೀರೇಶ್ವರ ಸೊಸೈಟಿ ನೋಟಿಸ್ ಜಾರಿ ಮಾಡಿತ್ತಂತೆ. ಇದರಿಂದ ಹೆದರಿದ ರೈತ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Rape ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ ಆರೋಪ: ಮನನೊಂದು ವಿಷ ಕುಡಿದ ಮಹಿಳೆ ಆಸ್ಪತ್ರೆಯಲ್ಲಿ ಸಾವು
Published On - 10:41 pm, Mon, 8 February 21