ಶ್ರೀನಿವಾಸ್ ಅಲಿಯಾಸ್ ಕರಿಸೀನ ಹತ್ಯೆ ಪ್ರಕರಣ ಆರೋಪಿಯನ್ನು ಗುಂಡು ಹಾರಿಸಿ ಸೆರೆ ಹಿಡಿದ ಪೊಲೀಸರು
Police Open Fire ಶ್ರೀನಿವಾಸ್ ಅಲಿಯಾಸ್ ಕರಿಸೀನ ಹತ್ಯೆ ಪ್ರಕರಣ ಆರೋಪಿಯನ್ನು ರಾಜಗೋಪಾಲನಗರ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿಂದು ಬೆಳ್ಳಂ ಬೆಳಗ್ಗೆ ಪೊಲೀಸರಿಂದ ಗುಂಡಿನ ಸದ್ದು ಕೇಳಿ ಬಂದಿದೆ. ಕೊಲೆ ಆರೋಪಿ ಸಂತೋಷ್(21) ಕಾಲಿಗೆ ರಾಜಗೋಪಾಲನಗರ ಪೊಲೀಸರು, ಜಿಕೆಡಬ್ಲ್ಯೂ ಲೇಔಟ್ ಬಳಿ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ರಾಜಗೋಪಾಲನಗರ ವ್ಯಾಪ್ತಿಯ ರೌಡಿಶೀಟರ್ ಸಂತೋಷ್, ಶ್ರೀನಿವಾಸ್ ಅಲಿಯಾಸ್ ಕರಿಸೀನ ಹತ್ಯೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾನೆ. ಜನವರಿ 9ರಂದು ಶ್ರೀನಿವಾಸ್ ಅಲಿಯಾಸ್ ಕರಿಸೀನನ ಹತ್ಯೆಯಾಗಿತ್ತು.
ಹಾಡಹಗಲೇ ರಾಜಗೋಪಾಲನಗರದ ಕಸ್ತೂರಿ ನಗರದಲ್ಲಿ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಆರೋಪಿ ಸಂತೋಷ್ನನ್ನು ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಪೊಲೀಸರ ಮೇಲೆ ಸಂತೋಷ್ ಹಲ್ಲೆಗೆ ಮುಂದಾಗಿದ್ದ ಈ ವೇಳೆ ಆತ್ಮ ರಕ್ಷಣೆಗೆಂದು ಆರೋಪಿ ಕಾಲಿಗೆ ಪಿಎಸ್ಐ ಹನುಮಂತ ಹಾದಿಮನಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ಸಂತೋಷ್ ಜೊತೆಗಿದ್ದ ಮತ್ತೋರ್ವ ಆರೋಪಿ ಸತೀಶ್ ಕೂಡು ಸೆರೆಯಾಗಿದ್ದಾನೆ. ಸದ್ಯ ಒಬ್ಬನನ್ನು ಹಿಡಿಯಲು ಹೋಗಿ ಇಬ್ಬರು ಆರೋಪಿಗಳ ಬಂಧನವಾಗಿದೆ. ಕಾಲಿಗೆ ಗುಂಡು ತಗುಲಿರುವ ಕಾರಣ ಸಂತೋಷ್ಗೆ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಮಾಜಿ ಪ್ರೇಯಸಿಯ ಜೊತೆಗಿದ್ದ ಯುವಕನಿಗೆ ಚೂರಿ ಇರಿದ ಮಾಜಿ ಪ್ರಿಯಕರ.. ಕೃತ್ಯ CCTVಯಲ್ಲಿ ಸೆರೆ
Published On - 8:38 am, Tue, 9 February 21