ಬಾಗಲಕೋಟೆ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ–ಬನಹಟ್ಟಿ ತಾಲ್ಲೂಕಿನ ಯರಗಟ್ಟಿ ಗ್ರಾಮದಲ್ಲಿ ನಡೆದಿದ್ದು, ಸದ್ಯ ಈ ಸಂಬಂಧ ಪ್ರಕರಣ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಯರಗಟ್ಟಿ ಗ್ರಾಮದ ವಿಠ್ಠಲ ಮಾಯಪ್ಪ ಮೀಸೆನ್ನವರ (38) ಮೃತ ರೈತ. ವಿಠ್ಠಲ ಅವರಿಗೆ 2 ಎಕರೆ ಜಮೀನು ಇದ್ದು, ಬನಹಟ್ಟಿಯ ಸ್ಟೇಟ್ ಬ್ಯಾಂಕ್ನಲ್ಲಿ ₹ 40,000, ಚಿಮ್ಮಡ ಪಿಕೆಪಿಎಸ್ನಲ್ಲಿ ₹ 50,000 ಸಾಲ ಹಾಗೂ ಇತರೆ ಕೈಗಡ ಸಾಲ ಮಾಡಿದ್ದರು. ಬೆಳೆ ಸರಿಯಾಗಿ ಬಾರದೇ ಇರುವುದರಿಂದ ನೊಂದಿದ್ದ ಅವರು ಸಾಲವನ್ನು ಹೇಗೆ ತೀರಿಸುವುದು ಎಂದು ಬೇಸರ ಮಾಡಿಕೊಂಡಿದ್ದು, ತೋಟದ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೃಷಿ ಪ್ರಧಾನ ಜಿಲ್ಲೆಯಲ್ಲೇ ಹೆಚ್ಚಾಗುತ್ತಿದೆ ರೈತರ ಆತ್ಮಹತ್ಯೆ ಪ್ರಕರಣ.. ಏನು ಕ್ರಮ ಕೈಗೊಳ್ಳುತ್ತಿದೆ ಸರ್ಕಾರ?