ರೈತರನ್ನು ನೆನೆಯೋ ದಿನ: ಧಾರವಾಡದಲ್ಲಿ ದಿನಾಚರಣೆ ಹೇಗಿತ್ತು ಗೊತ್ತಾ?
ಹೊಲದಲ್ಲಿ ಏನು ನಡೆಯುತ್ತಿದೆ ಅವರ ಪರಿಶ್ರಮ ಏನು ಈ ಎಲ್ಲಾ ಅಂಶಗಳನ್ನು ಗಮನಿಸಿ ಧಾರವಾಡ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತೆಯರು ಈ ಬಾರಿ ರಾಷ್ಟ್ರೀಯ ರೈತ ದಿನವನ್ನು ಹೊಲದಲ್ಲಿಯೇ ಕಳೆಯಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ನವಲೂರಿನ ರೈತರೊಬ್ಬರ ಹೊಲವನ್ನು ಆಯ್ಕೆ ಮಾಡಿಕೊಂಡಿದ್ದು, ಒಂದಿಡೀ ದಿನ ಹೊಲದಲ್ಲಿ ಕೆಲಸ ಮಾಡುವ ಮೂಲಕ ರೈತ ದಿನಕ್ಕೊಂದು ಅರ್ಥವನ್ನು ಕಲ್ಪಿಸಿಕೊಟ್ಟಿದ್ದಾರೆ.

ಧಾರವಾಢ: ಇವತ್ತು ರಾಷ್ಟ್ರೀಯ ರೈತರ ದಿನಾಚರಣೆ. ಅನೇಕ ಕಡೆಗಳಲ್ಲಿ ಈ ದಿನವನ್ನು ತುಂಬಾನೇ ಡಿಫರೆಂಟ್ ಆಗಿ ಆಚರಿಸಲಾಗುತ್ತದೆ. ಆದರೆ ಇದೇ ವೇಳೆ ದೆಹಲಿಯಲ್ಲಿ ರೈತರ ದೊಡ್ಡ ಹೋರಾಟವೇ ನಡೆದಿದೆ. ಈ ಹಿನ್ನೆಲೆಯಲ್ಲಿ ಇಂದಿನ ದಿನವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ ಧಾರವಾಡ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಹೊಲದಲ್ಲಿ ಕೆಲಸ ಮಾಡೋ ಮೂಲಕ ಒಂದಿಡೀ ದಿನವನ್ನು ರೈತರೊಂದಿಗೆ ಕಳೆದರು.
ಪ್ರತಿವರ್ಷ ಡಿಸೆಂಬರ್ 23 ನ್ನು ರಾಷ್ಟ್ರೀಯ ರೈತ ದಿನವೆಂದು ಆಚರಿಸಲಾಗುತ್ತದೆ. ದಿನದಂದು ಅನೇಕ ಕಡೆಗಳಲ್ಲಿ ರೈತರ ಸಮಾವೇಶಗಳು, ಸಭೆ, ಸಮಾರಂಭ ನಡೆಯುತ್ತವೆ. ಇಡೀ ದಿನ ರೈತರನ್ನು ಹೊಗಳೋ ಮೂಲಕ ದಿನವನ್ನು ಮುಕ್ತಾಯ ಮಾಡುತ್ತಾರೆ. ಆದರೆ ನಿಜವಾಗಿಯೂ ರೈತರು ಅನುಭವಿಸುತ್ತಿರುವ ಸಂಕಷ್ಟಗಳೇನು? ಎನ್ನುವುದರ ಬಗ್ಗೆ ಯಾರು ಕೂಡ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.
ಹೊಲದಲ್ಲಿ ಏನು ನಡೆಯುತ್ತಿದೆ ಅವರ ಪರಿಶ್ರಮ ಏನು ಈ ಎಲ್ಲಾ ಅಂಶಗಳನ್ನು ಗಮನಿಸಿ ಧಾರವಾಡ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತೆಯರು ಈ ಬಾರಿ ರಾಷ್ಟ್ರೀಯ ರೈತ ದಿನವನ್ನು ಹೊಲದಲ್ಲಿಯೇ ಕಳೆಯಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ನವಲೂರಿನ ರೈತರೊಬ್ಬರ ಹೊಲವನ್ನು ಆಯ್ಕೆ ಮಾಡಿಕೊಂಡಿದ್ದು, ಒಂದಿಡೀ ದಿನ ಹೊಲದಲ್ಲಿ ಕೆಲಸ ಮಾಡುವ ಮೂಲಕ ರೈತ ದಿನಕ್ಕೊಂದು ಅರ್ಥವನ್ನು ಕಲ್ಪಿಸಿಕೊಟ್ಟಿದ್ದಾರೆ.

ಧಾರವಾಡದಲ್ಲಿ ರೈತ ದಿನಾಚರಣೆ ಆಚರಿಸಿದ ಪರಿ
ಹೊಲದಲ್ಲಿ ಕಾರ್ಯಕರ್ತೆಯರು ಮಾಡಿದ್ದೇನು? ಹೊಲಕ್ಕೆ ಆಗಮಿಸಿದ ಕಾರ್ಯಕರ್ತೆಯರು ಮೊದಲಿಗೆ ರೈತರನ್ನು ಪ್ರತಿನಿಧಿಸುವ ಹಸಿರು ಟವೆಲ್ ಧರಿಸಿದರು. ಬಳಿಕ ಬುಟ್ಟಿಯನ್ನು ತೆಗೆದುಕೊಂಡು ಟೊಮೆಟೊ ಸೇರಿದಂತೆ ವಿವಿಧ ಬೆಳೆಯನ್ನು ಕಟಾವು ಮಾಡಿದರು. ಬಳಿಕ ಅವುಗಳನ್ನು ಒಂದು ಕಡೆ ಸೇರಿಸಿ, ಅಲ್ಲಿಂದ ಮಾರುಕಟ್ಟೆಗೆ ಕಳಿಸಿಕೊಟ್ಟರು. ಈ ವೇಳೆ ಕಾರ್ಯಕರ್ತೆಯರು ರೈತರಂತೆಯೇ ಕೆಲಸ ಮಾಡಿದ್ದು ಅಚ್ಚರಿ ಮೂಡಿಸಿತು. ತಲೆ ಮೇಲೆ ಬುಟ್ಟಿ ಹೊತ್ತುಕೊಂಡು ಹೊಲದಲ್ಲಿ ಗಂಟೆಗಟ್ಟಲೇ ಕೆಲಸ ಮಾಡಿದ ಕಾರ್ಯಕರ್ತೆಯರು ಆ ಮೂಲಕ ಒಂದು ದಿನದ ಮಟ್ಟಿಗೆ ರೈತರಿಗೆ ಕೆಲಸದಿಂದ ಬಿಡುವು ನೀಡಿದರು.

ರೈತರ ಹೊಲದಲ್ಲಿ ಟೊಮೆಟೊ ಕೊಯ್ಯುತ್ತಿರುವ ದೃಶ್ಯ
ರೈತರ ದೆಹಲಿ ಹೋರಾಟಕ್ಕೆ ಹೊಲದಿಂದಲೇ ಬೆಂಬಲ ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ಅನೇಕ ದಿನಗಳಿಂದ ದೊಡ್ಡಮಟ್ಟದ ಹೋರಾಟವೇ ನಡೆದಿದೆ. ದಿನದಿಂದ ದಿನಕ್ಕೆ ಇದು ಗಂಭೀರ ಸ್ವರೂಪ ಪಡೆಯುತ್ತಾ ಸಾಗಿದೆ. ಈ ವೇಳೆಯಲ್ಲಿ ರೈತರಿಗೆ ಬೆಂಬಲ ನೀಡುವುದು ಕೂಡ ತಮ್ಮ ಜವಾಬ್ದಾರಿ ಎಂದುಕೊಂಡ ಕಾರ್ಯಕರ್ತೆಯರು ಇಲ್ಲಿಂದಲೇ ಹೋರಾಟಗಾರರಿಗೆ ನೈತಿಕ ಬೆಂಬಲ ಸೂಚಿಸಿದರು. ತಲೆಗೆ ಹಸಿರು ರುಮಾಲು ಸುತ್ತಿಕೊಂಡು, ಹೊಲದ ಮಧ್ಯದಲ್ಲಿ ಕುಳಿತು ರೈತರ ಪರ ಘೋಷಣೆ ಹಾಕುವ ಮೂಲಕ ದೆಹಲಿಯಲ್ಲಿ ನಡೆದಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಬುಟ್ಟಿ ತುಂಬಾ ಟೊಮೆಟೊ
ಅಲ್ಲಿಯೇ ಅಡುಗೆ, ಅಲ್ಲಿಯೇ ಊಟ ಇನ್ನು ಹೊಲಗಳಲ್ಲಿ ಬೆಳೆದಿದ್ದ ತರಕಾರಿಯಿಂದಲೇ ಮಹಿಳೆಯರು ಅಡುಗೆ ಮಾಡಿದರು. ಹಿರಿಯ ಮಹಿಳೆಯರು ರೊಟ್ಟಿ, ಚಪಾತಿ ತಯಾರಿಸಿದರೆ, ಇನ್ನುಳಿದವರು ವಿವಿಧ ಬಗೆಯ ತಿನಿಸು ಮಾಡಿದರು. ಬಳಿಕ ಸುತ್ತಮುತ್ತಲಿನ ಎಲ್ಲ ರೈತರನ್ನು ಹೊಲಕ್ಕೆ ಕರೆಸಿಕೊಂಡು ಮೊದಲಿಗೆ ಅವರಿಗೆ ಊಟವನ್ನು ಬಡಿಸಲಾಯಿತು. ಬಳಿಕ ಅವರೊಂದಿಗೆ ತಾವು ಕೂಡ ಊಟ ಮಾಡುವ ಮೂಲಕ ರೈತ ದಿನವನ್ನು ವಿಭಿನ್ನವಾಗಿ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ, ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ನಾಗರಾಜ್, ಗೌರಿ ಸೇರಿದಂತೆ ಅನೇಕ ನಾಯಕಿಯರು ಹಾಗೂ ನೂರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಹಸಿರು ಶಾಲು ಹೊದ್ದು ಹೊಲದಲ್ಲಿ ಕೆಲಸ ಮಅಡಿದ ಕಾರ್ಯಕರ್ತೆಯರು

ಹೊಲದಲ್ಲಿ ಮಹಿಳೆಯರು ಕೆಲಸದಲ್ಲಿ ನಿರತರಾದ ದೃಶ್ಯ
National Farmers Day 2020 ಹೊಸ ಹೊಸ ಪ್ರಯೋಗಗಳೊಂದಿಗೆ ಮಾದರಿಯಾದ ರೈತ.. ಯಾರದು?