ಯಾದಗಿರಿ: ಹೊಲಕ್ಕೆ ದೃಷ್ಟಿಯಾಗಬಾರದೆಂದು ಸನ್ನಿ ಲಿಯೋನ್ ಫೋಟೋ ಇಟ್ಟ ರೈತ!

Updated By: ಪ್ರಸನ್ನ ಹೆಗಡೆ

Updated on: Nov 28, 2025 | 12:47 PM

ಕಷ್ಟಪಟ್ಟು ಉತ್ತು, ಬಿತ್ತಿ ಬೆಳೆದ ಬೆಳೆಯನ್ನ ಉಳಿಸಿಕೊಳ್ಳಲು ರೈತರು ಇನ್ನಿಲ್ಲದ ಸರ್ಕಸ್​​ ಮಾಡುತ್ತಾರೆ. ಆದರೆ ಯಾದಗಿರಿಯಲ್ಲಿ ರೈತನೊಬ್ಬ ಮಾಡಿರುವ ಪ್ಲ್ಯಾನ್​​ ಸದ್ಯ ವೈರಲ್​​ ಆಗಿದೆ. ತನ್ನ ಹೊಲಕ್ಕೆ ಯಾರ ದೃಷ್ಟಿಯೂ ಬೀಳಬಾರದು ಎಂದು ಆತ ದೃಷ್ಟಿಬೊಂಬೆ ಹಾಕೋ ಬದಲು, ಮಾದಕ ತಾರೆ ಸನ್ನಿ ಲಿಯೋನ್​​ ಫೋಟೋ ಹಾಕಿದ್ದಾನೆ. ಇದರಿಂದ ಜನರ ದೃಷ್ಟಿ ಹೊಲದತ್ತ ಹೋಗದೆ ಭಾವಚಿತ್ರದ ಕಡೆ ಇರುತ್ತೆ ಎಂಬುದು ಆತನ ನಂಬಿಕೆ.

ಯಾದಗಿರಿ, ನವೆಂಬರ್​​ 28: ಬೆಳೆದ ಬೆಳೆ ಕಾಪಾಡಿಕೊಳ್ಳಲು ರೈತರು ನಾನಾ ಪ್ರಯತ್ನ ಮಾಡೋದನ್ನ ನಾವು ಕಂಡಿದ್ದೇವೆ, ಕೇಳಿದ್ದೇವೆ. ಆದರೆ, ಯಾದಗಿರಿಯ ಮುದನೂರ ಗ್ರಾಮದ ರೈತನೊಬ್ಬ ತಾನು ಬೆಳೆದ ಹತ್ತಿ ಬೆಳೆಗೆ ಯಾರ ದೃಷ್ಟಿಯಾಗದಿರಲಿ ಎಂದು ಹೊಲದ ಬಳಿ ಮಾದಕ ತಾರೆ ಸನ್ನಿ ಲಿಯೋನ್ ಫೋಟೋ ಇಟ್ಟಿದ್ದಾನೆ. ಫಸಲೊಡೆದ ಹತ್ತಿ ಬೆಳೆಗೆ ಜನರ ದೃಷ್ಟಿ ಬೀಳಬಾರದು. ಹೀಗಾಗಿ ಸನ್ನಿ ಲಿಯೋನ್ ಫೋಟೋ ಹಾಕಿದ್ದೇನೆ. ಇದರಿಂದಾಗಿ ಜನರ ಗಮನ ಹೊಲದತ್ತ ಹೋಗೋ ಬದಲು ಫೋಟೋ ಕಡೆ ಹೋಗುತ್ತೆ ಎಂದು ರೈತ ತಿಳಿಸಿದ್ದಾನೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.