ಲಾಕ್​ಡೌನ್​ನಿಂದಾಗಿ ರೇಷ್ಮೆಗೂಡಿನ ಬೆಲೆಯಲ್ಲಿ ಕುಸಿತ; ರಾಮನಗರದ ರೈತರಲ್ಲಿ ಹೆಚ್ಚಿದ ಆತಂಕ

| Updated By: preethi shettigar

Updated on: Jun 06, 2021 | 8:47 AM

ಲಾಕ್​ಡೌನ್​ನಿಂದಾಗಿ ರೇಷ್ಮೆಗೂಡಿನ ಬೆಲೆಯಲ್ಲಿ ಕುಸಿತ ಕಂಡಿದೆ. ರೇಷ್ಮೆನೂಲು ಹೊರರಾಜ್ಯಗಳಿಗೆ ಮಾರಾಟ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಒಂದೇಡೆ ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಇನ್ನೋಂದೆಡೆ ವರ್ತಕರು ಕೂಡ ಇದರಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿ ಕೆಜಿ ರೇಷ್ಮೆಗೂಡಿಗೆ ನೂರು ರೂಪಾಯಿ ಕಡಿಮೆ ಆಗಿದೆ. ಹೀಗಾಗಿ ರೇಷ್ಮೆಬೆಳೆಗಾರರು ಹಾಗೂ ವರ್ತಕರು ಚಿಂತೆಗೀಡಾಗಿದ್ದಾರೆ.

ಲಾಕ್​ಡೌನ್​ನಿಂದಾಗಿ ರೇಷ್ಮೆಗೂಡಿನ ಬೆಲೆಯಲ್ಲಿ ಕುಸಿತ; ರಾಮನಗರದ ರೈತರಲ್ಲಿ ಹೆಚ್ಚಿದ ಆತಂಕ
ರಾಮನಗರ ರೇಷ್ಮೆ ಮಾರುಕಟ್ಟೆ
Follow us on

ರಾಮನಗರ: ಕೊರೊನಾ ಎರಡನೇ ಅಲೆಯ ಹೆಚ್ಚಳವನ್ನು ತಗ್ಗಿಸಲು ಲಾಕ್​ಡೌನ್ ಘೋಷಿಸಲಾಗಿದೆ. ಈ ಲಾಕ್​ಡೌನ್​ನಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಏನೋ ಕಡಿಮೆಯಾಗುತ್ತಿದೆ. ಆದರೆ ರೈತರು, ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರು ಇದರಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂ ರಾಮನಗರ ರೇಷ್ಮೆ ಹಾಗೂ ಹಾಲಿನ ವ್ಯಾಪಾರಕ್ಕೆ ಜನಪ್ರೀಯವಾದದ್ದು, ಜಿಲ್ಲೆಯ ಬಹುತೇಕ ರೈತರು ರೇಷ್ಮೆ ಹಾಗೂ ಹೈನುಗಾರಿಕೆಯನ್ನು ನಂಬಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಲಾಕ್​ಡೌನ್ ಪರಿಣಾಮದಿಂದಾಗಿ ರೇಷ್ಮೆಗೂಡು ಹಾಗೂ ಹಾಲಿನ ಬೆಲೆ ಕಡಿಮೆಯಾಗಿದೆ. ಹೀಗಾಗಿ ಈ ಭಾಗದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಕ್​ಡೌನ್​ನಿಂದಾಗಿ ರೇಷ್ಮೆಗೂಡಿನ ಬೆಲೆಯಲ್ಲಿ ಕುಸಿತ ಕಂಡಿದೆ. ರೇಷ್ಮೆನೂಲು ಹೊರರಾಜ್ಯಗಳಿಗೆ ಮಾರಾಟ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಒಂದೇಡೆ ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಇನ್ನೋಂದೆಡೆ ವರ್ತಕರು ಕೂಡ ಇದರಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿ ಕೆಜಿ ರೇಷ್ಮೆಗೂಡಿಗೆ ನೂರು ರೂಪಾಯಿ ಕಡಿಮೆ ಆಗಿದೆ. ಹೀಗಾಗಿ ರೇಷ್ಮೆಬೆಳೆಗಾರರು ಹಾಗೂ ವರ್ತಕರು ಚಿಂತೆಗೀಡಾಗಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ರೇಷ್ಮೆಬೆಳೆ ಜೊತೆಗೆ ಹೈನುಗಾರಿಕೆಯಲ್ಲಿ ಬಹುತೇಕ ರೈತರು ತೊಡಗಿಕೊಂಡಿದ್ದಾರೆ. ಹೈನುಗಾರಿಕೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಸುಮಾರು ಎಂಟರಿಂದ ಎಂಟೂವರೆ ಲಕ್ಷ ಲೀಟರ್ ಹಾಲು ನಮ್ಮ ಜಿಲ್ಲೆಯಿಂದಲೇ ಬೆಂಗಳೂರು ಹಾಲು ಒಕ್ಕೂಟಕ್ಕೆ ಸರಬರಾಜು ಆಗುತ್ತದೆ. ಆದರೆ ಈಗ ಏಕಾಏಕಿ ಹಾಲಿನ ದರವನ್ನು ಪ್ರತಿ ಲೀಟರ್​ಗೆ ಒಂದೂವರೆ ರೂಪಾಯಿ ಕಡಿಮೆ ಮಾಡಲಾಗಿದೆ. ಹೀಗಾಗಿ ಹೈನುಗಾರಿಕೆಯನ್ನು ನಂಬಿದ ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಸರ್ಕಾರ ಹಾಲಿನ ದರವನ್ನು ಕಡಿಮೆ ಮಾಡದೇ, ಪ್ರತಿ ಲೀಟರ್​ಗೆ ಹೆಚ್ಚುವರಿ ಒಂದು ರೂಪಾಯಿ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಒಟ್ಟಾರೆ ಲಾಕ್​ಡೌನ್​ನಿಂದಾಗಿ ರಾಮನಗರ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಸರ್ಕಾರ ಗಮನಹರಿಸಿ ರೈತರ ನೆರವಿಗೆ ಧಾವಿಸಬೇಕಿದೆ. ಪ್ಯಾಕೆಜ್​ ಬಗ್ಗೆ ಘೋಷಿಸುವಾಗ ಈ ಬಗ್ಗೆ ಗಮನಹರಿಸಿ ರೆಷ್ಮೆ ಬೆಳೆಗಾರರು ಮತ್ತು ಹೈನುಗಾರಿಕೆ ಬಗ್ಗೆಯೂ ಗಮನಹರಿಸಬೇಕು ಎಂದು ಇಲ್ಲಿನ ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

ಚಿಕ್ಕಮಗಳೂರು ರೈತರಲ್ಲಿ ಆತಂಕ; ಲಾಕ್​ಡೌನ್ ಹಿನ್ನೆಲೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲು

ಲಾಕ್​ಡೌನ್​ ಎಫೆಕ್ಟ್: ಐದು ಎಕರೆ ಹಸಿ ಮೆಣಸಿನಕಾಯಿ ಬೆಳೆಯನ್ನು ಹಾಳು ಮಾಡಿದ ಹಾವೇರಿ ರೈತ