Former PM HD Deve Gowda:ಎಚ್.ಡಿ.ದೇವೇಗೌಡ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಹಿಂದಿನ ದಿನ ಅವರ ಜತೆಗೇ ಇದ್ದರು ಎಸ್.ಎಂ ಕೃಷ್ಣ!

Former CM SM Krishna: ಕರ್ನಾಟಕದ ಮಣ್ಣಿನ ಮಗ ದೇಶದ ಪ್ರಧಾನಿಯಾದದ್ದು ಕಡಿಮೆ ಸಾಧನೆಯಲ್ಲ. ಮುತ್ಸದ್ದಿ ಎಚ್.ಡಿ.ದೇವೇಗೌಡರು ಮುಂದಿನ ದಿನಗಳಲ್ಲಿಯೂ ಉತ್ತಮ ಆರೋಗ್ಯದಿಂದ ಬಾಳುವಂತಾಗಲಿ ಎಂದು ಎಸ್.ಎಂ ಕೃಷ್ಣ ಹಾರೈಸಿದರು.

Former PM HD Deve Gowda:ಎಚ್.ಡಿ.ದೇವೇಗೌಡ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಹಿಂದಿನ ದಿನ ಅವರ ಜತೆಗೇ ಇದ್ದರು ಎಸ್.ಎಂ ಕೃಷ್ಣ!
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಎಸ್.ಎಂ.ಕೃಷ್ಣ
Follow us
TV9 Web
| Updated By: ಆಯೇಷಾ ಬಾನು

Updated on: Jun 06, 2021 | 10:30 AM

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿ 25 ವರ್ಷ ಸಂದ ಹಿನ್ನೆಲೆಯಲ್ಲಿ 25 ದಿನಗಳ ಕಾಲ ವಿವಿಧ ಕ್ಷೇತ್ರಗಳ ದಿಗ್ಗಜರಿಂದ ಸ್ಮರಣ ಮಾಲಿಕೆಯನ್ನು ಸತತ 25 ದಿನಗಳ ಕಾಲ ಜೆಡಿಎಸ್​ ಬಿಡುಗಡೆ ಮಾಡುತ್ತಿದೆ. ಈ ಸರಣಿಯಲ್ಲಿ ನಿನ್ನೆ (ಮೇ 5) ಕರ್ನಾಟಕದ ರಾಜಕೀಯ ಮುತ್ಸದ್ದಿಯೋರ್ವರು ಇನ್ನೋರ್ವ ರಾಜಕೀಯ ಮುತ್ಸದ್ದಿಯ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು. ಕರ್ನಾಟಕ ಕಂಡ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಓರ್ವರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ದಕ್ಷಿಣ ಭಾರತದಿಂದ ಪ್ರಧಾನಿ ಪಟ್ಟವೇರಿದ ಏಕೈಕ ನಾಯಕ ಎಚ್.ಡಿ. ದೇವೇಗೌಡರ ಕುರಿತು ತಮ್ಮ ರಾಜಕೀಯ ಜೀವನದ ನೆನಪುಗಳನ್ನು ಹಂಚಿಕೊಂಡರು.

ಎಚ್.ಡಿ.ದೇವೇಗೌಡರು ಪ್ರಧಾನಿ ಪಟ್ಟವೇರಿದ್ದು ಕನ್ನಡದ ಜನರಿಗೆ, ವ್ಯವಸಾಯ ಮಾಡುವ ಎಲ್ಲ ಜನರಿಗೂ ಹೆಮ್ಮೆಯ ವಿಷಯ. ದೇವೇಗೌಡರು ಪ್ರಧಾನ ಮಂತ್ರಿಯಾದ ನಂತರ ಬಹಳ ಶಿಸ್ತು, ಸಂಯಮ ಮತ್ತು ಗೌರವದಿಂದ ಆಡಳಿತ ನಡೆಸಿದರು. ಯಾವ ಅಪಸ್ವರವೂ ಇಲ್ಲದಂತೆ ಕೇಂದ್ರ ಸರ್ಕಾರದ ನೇತೃತ್ವ ವಹಿಸಿದ್ದರು. ಅಂದು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿ ಮತ್ತು ಎಚ್.ಡಿ.ದೇವೇಗೌಡರಿಗೆ ಉತ್ತಮ ಸಂಬಂಧವಿದ್ದರೂ ಕೂಡ ಸೀತಾರಾಂ ಕೇಸರಿ ಅವರಿಗೆ ಎಚ್.ಡಿ.ದೇವೇಗೌಡರ ಬಗ್ಗೆ ಕೊಂಚ ಅನುಮಾನ ಹುಟ್ಟಿಕೊಂಡಿತು. ಮತ್ತು ಆಗ ಕರ್ನಾಟಕದ ಕಾಂಗ್ರೆಸ್ ನಾಯಕರೂ ಸಹ ಎಚ್.ಡಿ.ದೇವೇಗೌಡರಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆಯಬೇಕು ಎಂಬ ಸಂದೇಶವನ್ನು ಆಗಾಗ ರವಾನಿಸುತ್ತಲೇ ಇದ್ದರು. ಇಂತಹ ಕೆಲವು ಒತ್ತಡಕ್ಕೆ ದೇವೇಗೌಡರು ಬಲಿಯಾಗಬೇಕಾಯಿತು ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ದೇವೇಗೌಡರು ಪ್ರಧಾನಿ ಪಟ್ಟದಿಂದ ಕೆಳಗಿಳಿಯಲು ಕಾರಣವಾದ ಘಟನೆಗಳನ್ನು ಸ್ಮರಿಸಿಕೊಂಡರು.

ಎಚ್.ಡಿ.ದೇವೇಗೌಡರು ಪ್ರಧಾನಿ ಪಟ್ಟದಿಂದ ಕೆಳಗಿಳಿಯುವ ಹಿಂದಿನ ದಿನ ನಾನು ಅವರ ಮನೆಗೆ ತೆರಳಿದ್ದೆ ಎಂದು ಅಂದಿನ ದಿನದ ಮೆಲಕು ಹಾಕಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ, ದೇವೇಗೌಡರ ಸರ್ಕಾರವನ್ನು ಉಳಿಸಲು ಇನ್ನೋರ್ವ ಕಾಂಗ್ರೆಸ್ ನಾಯಕರು ನೀಡಿದ ಭರವಸೆಯನ್ನು ಉಲ್ಲೇಖಿಸಿದರು. ಎಸ್.ಎಂ.ಕೃಷ್ಣ ಮತ್ತು ಇನ್ನೋರ್ವ ಕಾಂಗ್ರೆಸ್ ನಾಯಕನೋರ್ವರು ಎಚ್.ಡಿ.ದೇವೇಗೌಡರು ಪ್ರಧಾನಿ ಪಟ್ಟದಿಂದ ಕೆಳಗಿಳಿಯುವ ಹಿಂದಿನ ದಿನ ದೇವೇಗೌಡರ ಮನೆಯಲ್ಲಿ ಊಟ ಮಾಡುತ್ತಿದ್ದರು. ಆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ದೇವೇಗೌಡರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಮರಳಿ ಪಡೆಯಲು ನಿರ್ಣಯಿಸಿದ ಸುದ್ದಿ ಬಂತು. ಆಗ ಊಟ ಮಾಡುತ್ತಿದ್ದ ಎಸ್.ಎಂ.ಕೃಷ್ಣ ಅವರ ಜತೆಗೆ ಬಂದಿದ್ದ ಹಿರಿಯ ಕಾಂಗ್ರೆಸ್ ನಾಯಕರು, ಮರುದಿನವೇ ದೆಹಲಿಗೆ ತೆರಳಿ ಸೀತಾರಾಂ ಕೆಸರಿಯವರ ಮನವೊಲಿಸಿ ಬೆಂಬಲ ಹಿಂಪಡೆಯದಂತೆ ಮಾಡುವೆ ಎಂದು ಭರವಸೆ ನೀಡಿದರು.

ಆದರೆ ಮಾರನೇ ದಿನ, ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರು ಯಾರ ಕೈಗೂ ಸಿಗದೇ ರಾಷ್ಟ್ರಪತಿಯವರಿಗೆ ಕೇಂದ್ರದ ಸಂಯುಕ್ತ ಸರ್ಕಾರಕ್ಕೆ ಕಾಂಗ್ರೆಸ್ ನೀಡಿದ್ದ ಬೆಂಬಲ ಹಿಂಪಡೆಯುವುದಾಗಿ ತಿಳಿಸಿಬಿಡುತ್ತಾರೆ. ಪರಿಸ್ಥಿತಿ ಕೈಮೀರಿ ಯಾವ ನಾಯಕರ ಬಳಿಯೂ ದೇವೇಗೌಡರ ಸರ್ಕಾರ ಉಳಿಸುವ ಪ್ರಯತ್ನ ನಡೆಸಲಾಗುವುದಿಲ್ಲ. ರಾಷ್ಟ್ರಪತಿಯವರ ಸೂಚನೆಯಂತೆ ಲೋಕಸಭೆಯಲ್ಲಿ ವಿಶ್ವಾಸಮತ ಯಾಚಿಸುತ್ತಾರೆ. ಆದರೆ ಕಾಂಗ್ರೆಸ್ ಬೆಂಬಲವಿಲ್ಲದೇ ದೇವೇಗೌಡರ ಸರ್ಕಾರಕ್ಕೆ ವಿಶ್ವಾಸಮತ ದೊರೆಯುವುದಿಲ್ಲ. ಸರ್ಕಾರ ಪತನಗೊಂಡಿತು. ದೇವೇಗೌಡರ ರಾಜಕೀಯ ಜೀವನವನ್ನು ಬಹಳ ಹತ್ತಿರದಿಂದ ನೋಡಿದ ಮಾಜಿ ವಿದೇಶಾಂಗ ಸಚಿವರೂ ಆದ ಎಸ್ ಎಂ ಕೃಷ್ಣ ಅಂದಿನ ದಿನಗಳನ್ನು ಹೀಗೆ ಮೆಲುಕು ಹಾಕಿದರು.

ಜತೆಗೆ ಕರ್ನಾಟಕದ ಮಣ್ಣಿನ ಮಗ ದೇಶದ ಪ್ರಧಾನಿಯಾದದ್ದು ಕಡಿಮೆ ಸಾಧನೆಯಲ್ಲ. ಮುತ್ಸದ್ದಿ ಎಚ್.ಡಿ.ದೇವೇಗೌಡರು ಮುಂದಿನ ದಿನಗಳಲ್ಲಿಯೂ ಉತ್ತಮ ಆರೋಗ್ಯದಿಂದ ಬಾಳುವಂತಾಗಲಿ ಎಂದು ಎಸ್.ಎಂ ಕೃಷ್ಣ ಹಾರೈಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನ ಸಿಎಂ ಮಾಡದೇ ಇರೋಕ್ಕೆ ಕಾರಣ ಹೇಳಿದ ದೇವೇಗೌಡ್ರು

Former PM HD Deve Gowda: ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ ಪ್ರಧಾನಿಯಾಗಿ 25 ವರ್ಷ: ಜೆಡಿಎಸ್‌ನಿಂದ ಸಾಧನೆ ಸ್ಮರಣೆ ಅಭಿಯಾನ

(SM Krishna remembers Former PM HD Deve Gowda political career and his 25th anniversary as prime minister of India)