ಆಡಳಿತಾತ್ಮಕವಾಗಿ ಮೈಸೂರು ಪಾಲಿಕೆ ಆಯುಕ್ತೆ ಸ್ಥಾನಕ್ಕೆ ಇ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ ಶಿಲ್ಪಾ ನಾಗ್
ನಿನ್ನೆ ಮಧ್ಯಾಹ್ನ ಆಡಳಿತಾತ್ಮಕವಾಗಿ ಐಎಎಸ್ಗೆ ಶಿಲ್ಪಾ ನಾಗ್ ರಾಜೀನಾಮೆ ನೀಡಿದ್ದಾರೆ. ಸಿಎಸ್‌ಗೆ ಇ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. 2 ದಿನಗಳ ಹಿಂದೆ ನೀಡಿದ್ದ ರಾಜೀನಾಮೆ ಸ್ವೀಕರಿಸಿರಲಿಲ್ಲ. ಹೀಗಾಗಿ ನಿನ್ನೆ ಆಡಳಿತಾತ್ಮಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಅಂಗೀಕಾರವಾಗುವವರೆಗೂ ಶಿಲ್ಪಾ ನಾಗ್ ನಿಯೋಜಿತ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮೈಸೂರು: ಕಳೆದ ಮೂರು ದಿನಗಳಿಂದ ಸರ್ಕಾರಕ್ಕೆ ತಲೆನೋವಾಗಿದ್ದ ಮೈಸೂರು ಐಎಎಸ್ ಅಧಿಕಾರಿಗಳ ಜಗಳಕ್ಕೆ ಬ್ರೇಕ್ ಹಾಕಲು ಸರ್ಕಾರ ಟ್ರಾನ್ಸ್ಫರ್ ಅಸ್ತ್ರ ಬಳಸಿದೆ. ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ಇವತ್ತು ಕೊನೆಯಾಗುತ್ತೆ, ನಾಳೆಗೆ ಮುಗಿಯುತ್ತೆ ಅಂದುಕೊಂಡಿದ್ದ ಸರ್ಕಾರ ಕೊನೆಗೆ ಇಬ್ಬರನ್ನೂ ಮೈಸೂರಿನಿಂದ ವರ್ಗಾವಣೆ ಮಾಡಿದೆ. ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಆಗಿದ್ದ ಶಿಲ್ಪಾ ನಾಗ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸದ್ಯ ನಿನ್ನೆ ಮಧ್ಯಾಹ್ನ ಆಡಳಿತಾತ್ಮಕವಾಗಿ ಐಎಎಸ್ಗೆ ಶಿಲ್ಪಾ ನಾಗ್ ರಾಜೀನಾಮೆ ನೀಡಿದ್ದಾರೆ. ಸಿಎಸ್‌ಗೆ ಇ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. 2 ದಿನಗಳ ಹಿಂದೆ ನೀಡಿದ್ದ ರಾಜೀನಾಮೆ ಸ್ವೀಕರಿಸಿರಲಿಲ್ಲ. ಹೀಗಾಗಿ ನಿನ್ನೆ ಆಡಳಿತಾತ್ಮಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಅಂಗೀಕಾರವಾಗುವವರೆಗೂ ಶಿಲ್ಪಾ ನಾಗ್ ನಿಯೋಜಿತ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ನಿನ್ನೆ ರಾತ್ರಿ ಟ್ರಾನ್ಸ್ಫರ್ ಆದೇಶ ಹೊರಡಿಸಿದ ಸರ್ಕಾರ, ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿಯನ್ನ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಿದೆ. ಮತ್ತೊಂದೆಡೆ ಮೈಸೂರು ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್ರನ್ನ ಆರ್ಡಿಪಿಆರ್ ನಿರ್ದೇಶಕಿಯಾಗಿ ಟ್ರಾನ್ಸ್ಫರ್ ಮಾಡಲಾಗಿದೆ.
ಇಬ್ಬರಿಗೂ ಮುಳುವಾಯ್ತು ಕೊವಿಡ್ ನಿರ್ವಹಣೆ ಕಿತ್ತಾಟ ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ, ಇತ್ತೀಚೆಗೆ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಸರಿಯಾಗಿ ಮೀಟಿಂಗ್ಗೆ ಹಾಜರಾಗಲ್ಲ, ಕೊವಿಡ್ ಸಂಬಂಧಿತ ಆದೇಶಗಳಿಗೆ ಸಹಿ ಮಾಡಲ್ಲ. ಜಿಲ್ಲಾಡಳಿತದ ವಿರುದ್ಧವೇ ಓಪನ್ ಸ್ಟೇಟ್ಮೆಂಟ್ ಕೊಡ್ತಾರೆ ಅಂತೆಲ್ಲಾ ಗಂಭೀರ ಆರೋಪ ಮಾಡಿದ್ರು. ಇದರ ಬೆನ್ನಲ್ಲೇ ಮೊನ್ನೆ ಸುದ್ದಿಗೋಷ್ಠಿ ನಡೆಸಿದ್ದ ಶಿಲ್ಪಾ ನಾಗ್, ರೋಹಿಣಿ ಸಿಂಧೂರಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ರು.
ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಜಗಳ ತಾರಕಕ್ಕೇರುತ್ತಿದ್ದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬೆಂಗಳೂರಿನಿಂದ ಜಿಲ್ಲೆಗೆ ದೌಡಾಯಿಸಿದ್ರು. ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಲು ಯತ್ನಿಸಿದ್ರು. ಇಬ್ಬರು ಐಎಎಸ್ ಅಧಿಕಾರಿಗಳು ಸುದ್ದಿಗೋಷ್ಠಿಗಳನ್ನ ನಡೆಸಿ ಆರೋಪ-ಪ್ರತ್ಯಾರೋಪ ಮಾಡ್ತಾ ಇದ್ದಿದ್ದು ಸರ್ಕಾರಕ್ಕೆ ತಲೆನೋವು ತಂದಿತ್ತು. ಅಲ್ದೆ, ವಿಪಕ್ಷಗಳ ಟೀಕೆಗೂ ಆಹಾರ ಒದಗಿಸಿತ್ತು. ಹೇಗಾದ್ರೂ ಮಾಡಿ ಇಬ್ಬರ ನಡುವಿನ ಮುನಿಸು ಕಡಿಮೆ ಮಾಡಲೇಬೇಕು ಅಂತಾ ಸ್ವತಃ ಮುಖ್ಯ ಕಾರ್ಯದರ್ಶಿ ರವಿಕುಮಾರ್ರನ್ನ ಮೈಸೂರಿಗೆ ಕಳುಹಿಸಿತ್ತು. ಕೊವಿಡ್ ನಿರ್ವಹಣೆ ಸಭೆ ನಡೆಸೋ ನೆಪದಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಸಿಎಸ್ ರವಿಕುಮಾರ್, ಇಬ್ಬರ ಜೊತೆಗೆ ಪ್ರತ್ಯೇಕವಾಗಿ ಮಾತನಾಡಿ ಮುನಿಸು ಬಗೆಹರಿಸೋ ಕೆಲಸ ಮಾಡಿದ್ರು.
ಉಸ್ತುವಾರಿ ಸಚಿವರು, ಸ್ವತಃ ರಾಜ್ಯ ಮುಖ್ಯ ಕಾರ್ಯದರ್ಶಿ ಇಬ್ಬರ ನಡುವೆ ಸಂಧಾನಕ್ಕೆ ಯತ್ನಿಸಿದ್ರೂ ಯಾವುದೇ ಫಲ ನೀಡಿರಲಿಲ್ಲ. ಇದ್ರಿಂದ ಸರ್ಕಾರಕ್ಕೆ ಮತ್ತಷ್ಟು ಮುಜುಗರ ಉಂಟಾಗಿತ್ತು. ಈ ಮುಜುಗರವನ್ನ ತಪ್ಪಿಸಿಕೊಳ್ಳಲು ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಐಎಎಸ್ ಅಧಿಕಾರಿಗಳ ನಡುವಿನ ಸಮರಕ್ಕೆ ಕೊನೆಗೂ ತೆರೆ ಎಳೆದಿದೆ.
ಇದನ್ನೂ ಓದಿ: Mysuru: ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್ ಇಬ್ಬರೂ ಮೈಸೂರಿನಿಂದ ವರ್ಗಾವಣೆ, ಹೊಸ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರ ನೇಮಕ
Published On - 9:53 am, Sun, 6 June 21