Former PM HD Deve Gowda: ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ ಪ್ರಧಾನಿಯಾಗಿ 25 ವರ್ಷ: ಜೆಡಿಎಸ್‌ನಿಂದ ಸಾಧನೆ ಸ್ಮರಣೆ ಅಭಿಯಾನ

ನಾಳೆಯಿಂದ 25ರವರೆಗೆ 25 ದಿನ ನಡೆಯಲಿರುವ ಸ್ಮರಣಾ ಅಭಿಯಾನದಲ್ಲಿ ವಿವಿಧ ಕ್ಷೇತ್ರಗಳ 25 ಪ್ರಮುಖರು ದೇವೇಗೌಡರ ಕುರಿತು ವಿಡಿಯೊ ಮೂಲಕ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ರಾಜಕೀಯ ಯಾನ, ಸಾಧನೆ, ದೇಶಕ್ಕೆ-ರಾಜ್ಯಕ್ಕೆ ನೀಡಿದ ಕೊಡುಗೆಗಳ ಕುರಿತು ವಿವರಿಸಲಿದ್ದಾರೆ.

Former PM HD Deve Gowda: ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ ಪ್ರಧಾನಿಯಾಗಿ 25 ವರ್ಷ:  ಜೆಡಿಎಸ್‌ನಿಂದ ಸಾಧನೆ ಸ್ಮರಣೆ ಅಭಿಯಾನ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Follow us
guruganesh bhat
|

Updated on: May 31, 2021 | 9:20 PM

ಬೆಂಗಳೂರು: ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ನಾಳೆಗೆ (ಜೂನ್ 1) 25 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷವು ದೇವೇಗೌಡರ ಸಾಧನೆಗಳ ಸ್ಮರಣಾ ಅಭಿಯಾನ ಹಮ್ಮಿಕೊಂಡಿದೆ. ದೇವೇಗೌಡರ ಕುರಿತು ಹಿರಿಯ ರಾಜಕಾರಣಿಗಳು, ಹಿರಿಯ ಪತ್ರಕರ್ತರು ಈ ಕಾರ್ಯಕ್ರಮದಲ್ಲಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಜೂನ್ 1 ರಿಂದ 25ರವರೆಗೆ 25 ದಿನ ನಡೆಯಲಿರುವ ಸ್ಮರಣಾ ಅಭಿಯಾನದಲ್ಲಿ ವಿವಿಧ ಕ್ಷೇತ್ರಗಳ 25 ಪ್ರಮುಖರು ದೇವೇಗೌಡರ ಕುರಿತು ವಿಡಿಯೊ ಮೂಲಕ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ರಾಜಕೀಯ ಯಾನ, ಸಾಧನೆ, ದೇಶಕ್ಕೆ-ರಾಜ್ಯಕ್ಕೆ ನೀಡಿದ ಕೊಡುಗೆಗಳ ಕುರಿತು ವಿವರಿಸಲಿದ್ದಾರೆ.

ಪ್ರತಿದಿನ ಸಂಜೆ 5 ಗಂಟೆಗೆ ಜೆಡಿಎಸ್‌ನ ಅಧಿಕೃತ ಫೇಸ್‌ಬುಕ್‌ ಪುಟ-@JDSpartyofficial ಮತ್ತು ಟ್ವಿಟರ್‌ @JanataDal_S ಪುಟಗಳಲ್ಲಿ ಈ ವಿಡಿಯೊಗಳು ಪ್ರಸಾರವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇತ್ತೀಚಿಗಷ್ಟೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಪತ್ನಿ ಕೊವಿಡ್ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದರು.

ಇದನ್ನೂ ಓದಿ: ಯುಟ್ಯೂಬ್​ನಲ್ಲಿ ಕರ್ನಾಟಕ ಹೈಕೋರ್ಟ್​ ಕಲಾಪ ಮೊದಲ ಬಾರಿಗೆ ನೇರಪ್ರಸಾರ

5G ತಂತ್ರಜ್ಞಾನ ಭಾರತದಲ್ಲಿ ಜಾರಿ ಆಗಬಾರದೆಂದು ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ; ಆಕೆ ನೀಡಿದ ಕಾರಣಗಳು ಇಲ್ಲಿವೆ 

( 25 years for JDS Senior leader HD Deve Gowda became Prime Minister JDS arrange special program)