ದೇಶಾದ್ಯಂತ ಇಂದಿನಿಂದ ಫಾಸ್ಟ್ ಟ್ಯಾಗ್‌ ಕಡ್ಡಾಯ

|

Updated on: Jan 16, 2020 | 9:20 AM

ಬೆಂಗಳೂರು: ದೇಶಾದ್ಯಂತ ಇಂದಿನಿಂದ ಫಾಸ್ಟ್ ಟ್ಯಾಗ್‌ ಕಡ್ಡಾಯ ಜಾರಿ ಮಾಡಲಾಗಿದೆ. ಆದ್ರೆ ಬಹುತೇಕ ವಾಹನ ಸವಾರರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ನೆಲಮಂಗಲ್‌ಟೋಲ್ ಗೇಟ್ ಬಳಿ ವಾಹನಗಳಿಗೆ ಫಾಸ್ಟ್‌ ಟ್ಯಾಗ್ ಕಡ್ಡಾಯ ಮಾಡಲಾಗಿದ್ದು, ಫಾಸ್ಟ್ ಟ್ಯಾಗ್‌ ಇಲ್ಲದಿರುವ ವಾಹನ‌ ಸವಾರರು ಕೂ‌ಡ ಫಾಸ್ಟ್ ಟ್ಯಾಗ್‌ಲೈನ್ ನಲ್ಲಿ ಬರುತ್ತಿದ್ದಾರೆ. ಕ್ಯೂ ಸಮಸ್ಯೆ ತಡೆಯುವ ಹಿನ್ನೆಲೆ ಫಾಸ್ಟ್ ಟ್ಯಾಗ್‌ ಇಲ್ಲದೇ ಇರುವ ಸವಾರರಿಗೆ ಟೋಲ್ ಸಿಬ್ಬಂದಿ ಡಬಲ್‌ ಫೈನ್ ಹಾಕುತ್ತಿದ್ದಾರೆ. ಇನ್ನು ದುಪ್ಪಟ್ಟು ದಂಡ ಹಾಕುತ್ತಿರುವ ಹಿನ್ನೆಲೆ,ವಾಹನ ಸವಾರರು ಮತ್ತು […]

ದೇಶಾದ್ಯಂತ ಇಂದಿನಿಂದ ಫಾಸ್ಟ್ ಟ್ಯಾಗ್‌ ಕಡ್ಡಾಯ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ದೇಶಾದ್ಯಂತ ಇಂದಿನಿಂದ ಫಾಸ್ಟ್ ಟ್ಯಾಗ್‌ ಕಡ್ಡಾಯ ಜಾರಿ ಮಾಡಲಾಗಿದೆ. ಆದ್ರೆ ಬಹುತೇಕ ವಾಹನ ಸವಾರರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ನೆಲಮಂಗಲ್‌ಟೋಲ್ ಗೇಟ್ ಬಳಿ ವಾಹನಗಳಿಗೆ ಫಾಸ್ಟ್‌ ಟ್ಯಾಗ್ ಕಡ್ಡಾಯ ಮಾಡಲಾಗಿದ್ದು, ಫಾಸ್ಟ್ ಟ್ಯಾಗ್‌ ಇಲ್ಲದಿರುವ ವಾಹನ‌ ಸವಾರರು ಕೂ‌ಡ ಫಾಸ್ಟ್ ಟ್ಯಾಗ್‌ಲೈನ್ ನಲ್ಲಿ ಬರುತ್ತಿದ್ದಾರೆ. ಕ್ಯೂ ಸಮಸ್ಯೆ ತಡೆಯುವ ಹಿನ್ನೆಲೆ ಫಾಸ್ಟ್ ಟ್ಯಾಗ್‌ ಇಲ್ಲದೇ ಇರುವ ಸವಾರರಿಗೆ ಟೋಲ್ ಸಿಬ್ಬಂದಿ ಡಬಲ್‌ ಫೈನ್ ಹಾಕುತ್ತಿದ್ದಾರೆ.

ಇನ್ನು ದುಪ್ಪಟ್ಟು ದಂಡ ಹಾಕುತ್ತಿರುವ ಹಿನ್ನೆಲೆ,ವಾಹನ ಸವಾರರು ಮತ್ತು ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ವಾಹನ ಸವಾರರು ನಮಗೆ ಗೊತ್ತಿಲ್ಲ ನಮಗೆ ಒಂದು ಬಾರಿ ಆದ್ರೂ ವಾರ್ನ್ ಕೊಡಬೇಕು ಅನ್ನುತ್ತಿದ್ದಾರೆ. ಆದರೆ ಟೋಲ್ ಸಿಬ್ಬಂದಿ ಒಂದುವರೆ ತಿಂಗಳಿಂದ ಎಲ್ಲರಿಗೂ ಈ ಬಗ್ಗೆ ಮಾಹಿತಿ ಹಾಗೂ ವಾರ್ನ್ ಮಾಡಿದ್ದೇವೆ ಅನ್ನುತ್ತಿದ್ದಾರೆ. ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಮಾತಿನ ಚಕಮಕಿ ಹಿನ್ನೆಲೆ ಉಳಿದ ಸವಾರರಿಗೆ ಕೆಲಕಾಲ‌ ತೊಂದರೆ ಉಂಟಾಯಿತು.

ಇಂದಿನಿಂದ ಫಾಸ್ಟ್ ಟ್ಯಾಗ್‌ ಕಡ್ಡಾಯ ಜಾರಿಯಾಗಿದೆ ಆದ್ರೆ, ಇನ್ನು 1 ತಿಂಗಳ ಕಾಲ ನಿಯಮಾವಳಿಯಲ್ಲಿ ಸಡಿಲಿಕೆ ಇರಲಿದೆ. 1 ತಿಂಗಳ ಕಾಲ ಶೇ.25ರಷ್ಟು ಲೇನ್‌ಗಳಲ್ಲಿ ನಗದು ಪಾವತಿ ಮಾಡಬಹುದು. ಟೋಲ್‌ಗಳ ಶೇ. 75ರಷ್ಟು ಲೇನ್‌ಗಳಲ್ಲಿ ಫಾಸ್ಟ್ ಟ್ಯಾಗ್‌ ಕಡ್ಡಾಯ. ಉಳಿದ ಲೇನ್‌ಗಳು ಹೈಬ್ರಿಡ್ ಲೇನ್‌ಗಳೆಂದು ಪರಿಗಣನೆ ಮಾಡಲಾಗಿದ್ದು, ಇಲ್ಲಿ ಸಾಮಾನ್ಯ ಪದ್ಧತಿಯಲ್ಲಿ ಶುಲ್ಕವನ್ನ ಪಾವತಿಸಬಹುದು. ಆದ್ರೆ ಈ ತಾತ್ಕಾಲಿಕ ವ್ಯವಸ್ಥೆ 1 ತಿಂಗಳು ಮಾತ್ರವೇ ಲಭ್ಯ.

Published On - 7:26 am, Thu, 16 January 20