ನೆರೆ ಬರೆಯಲ್ಲಿ ನರಳುತ್ತಿರೋರಿಗೆ ಮತ್ತೊಂದು ಬರೆ, ಸಾಲ ಕಟ್ಟುವಂತೆ ರೈತರಿಗೆ ವಾರ್ನಿಂಗ್
ಬೆಳಗಾವಿ: ಅದು ಅಂತಿಂಥ ಜಲಪ್ರಳಯವಲ್ಲ.. ದಶಕಗಳಿಂದಲೂ ಕಟ್ಟಿದ್ದ ಕನಸಿನ ಸೂರೇ ಕೊಚ್ಚಿಹೋದ ಗಳಿಗೆ.. ಜಮೀನೇ ಮರೆಯಾದ ಸಂದರ್ಭ.. ಜೀವ ಉಳಿಸಿಕೊಂಡಿದ್ದೇ ಸವಾಲು ಅಂತಾ ಅವ್ರೆಲ್ಲಾ ಕಣ್ಣೀರಲ್ಲೇ ಬದುಕ್ತಿದ್ರೆ ಬ್ಯಾಂಕ್ ಸಾಲ ಅವ್ರನ್ನ ಮತ್ತಷ್ಟು ಕಾಡುತ್ತಿದೆ.. ನಗು ಮರೆಯಾಗಿದೆ.. ದೇಹ ಸೊರಗಿದೆ.. ಇಷ್ಟಾದ್ರೂ ಬದುಕಲು ಬಿಡ್ತಿಲ್ವಲ್ಲಾ ಅನ್ನೋ ನೋವು ಇವ್ರನ್ನ ಕಾಡ್ತಿದೆ.. ಅದೇ ನೋವು ಕಿಚ್ಚಾಗಿ ಬೀದಿಗಿಳಿಯುವಂತೆ ಮಾಡಿದೆ.. ಕೈಯಲ್ಲಿ ಪಾಸ್ಬುಕ್ ಹಿಡಿದು ಬದುಕಲು ಬಿಡಿ ಅಂತಾ ಆಕ್ರೋಶ ಹೊರ ಹಾಕ್ತಿದ್ದಾರೆ.. ನೆರೆ ಬರೆಯಲ್ಲಿ ನರಳ್ತಿದ್ರೂ ಬ್ಯಾಂಕ್ ಅಧಿಕಾರಿಗಳ […]
ಬೆಳಗಾವಿ: ಅದು ಅಂತಿಂಥ ಜಲಪ್ರಳಯವಲ್ಲ.. ದಶಕಗಳಿಂದಲೂ ಕಟ್ಟಿದ್ದ ಕನಸಿನ ಸೂರೇ ಕೊಚ್ಚಿಹೋದ ಗಳಿಗೆ.. ಜಮೀನೇ ಮರೆಯಾದ ಸಂದರ್ಭ.. ಜೀವ ಉಳಿಸಿಕೊಂಡಿದ್ದೇ ಸವಾಲು ಅಂತಾ ಅವ್ರೆಲ್ಲಾ ಕಣ್ಣೀರಲ್ಲೇ ಬದುಕ್ತಿದ್ರೆ ಬ್ಯಾಂಕ್ ಸಾಲ ಅವ್ರನ್ನ ಮತ್ತಷ್ಟು ಕಾಡುತ್ತಿದೆ..
ನಗು ಮರೆಯಾಗಿದೆ.. ದೇಹ ಸೊರಗಿದೆ.. ಇಷ್ಟಾದ್ರೂ ಬದುಕಲು ಬಿಡ್ತಿಲ್ವಲ್ಲಾ ಅನ್ನೋ ನೋವು ಇವ್ರನ್ನ ಕಾಡ್ತಿದೆ.. ಅದೇ ನೋವು ಕಿಚ್ಚಾಗಿ ಬೀದಿಗಿಳಿಯುವಂತೆ ಮಾಡಿದೆ.. ಕೈಯಲ್ಲಿ ಪಾಸ್ಬುಕ್ ಹಿಡಿದು ಬದುಕಲು ಬಿಡಿ ಅಂತಾ ಆಕ್ರೋಶ ಹೊರ ಹಾಕ್ತಿದ್ದಾರೆ..
ನೆರೆ ಬರೆಯಲ್ಲಿ ನರಳ್ತಿದ್ರೂ ಬ್ಯಾಂಕ್ ಅಧಿಕಾರಿಗಳ ಟಾರ್ಚರ್: ಅಷ್ಟಕ್ಕೂ ಈ ಕಿಚ್ಚು ಹತ್ತಿದ್ದು ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಮುಂಭಾಗ.. ಐದು ತಿಂಗಳ ಹಿಂದಷ್ಟೇ ಮಹಾಪ್ರವಾಹಕ್ಕೆ ಬೆಳಗಾವಿ ಜಿಲ್ಲೆ ಮಂದಿ ಮನೆ, ಜಮೀನು, ಜಾನುವಾರು ಎಲ್ಲವನ್ನೂ ಕಳ್ಕೊಂಡಿದ್ರು.. ಅಳಿದುಳಿದ ಮನೆಯಲ್ಲೇ ಹೇಗೋ ಬದುಕು ದೂಡ್ತಿದ್ರು. ಹೀಗಾಗಿ ಸರ್ಕಾರ ಕೂಡ ಬ್ಯಾಂಕ್ನವ್ರು ಬೆಳೆ ಸಾಲ ಸೇರಿದಂತೆ ಟ್ರ್ಯಾಕ್ಟರ್ ಸಾಲ ಪಡೆದಿದ್ದ ನೆರೆ ಸಂತ್ರಸ್ತರು ಸಾಲ ಮರಳಿಸಲು ಕಾಲಾವಕಾಶ ನೀಡಬೇಕೆಂದು ಸೂಚಿಸಿತ್ತು.. ಇಷ್ಟಾದ್ರೂ ಬ್ಯಾಂಕ್ನವರು ನೆರೆ ಸಂತ್ರಸ್ತರಿಗೆ ನೋಟಿಸ್ ನೀಡಿದ್ರು. ಸಾಲ್ದು ಅಂತಾ ಸ್ವತಃ ಅಧಿಕಾರಿಗಳೇ ಫೀಲ್ಡಿಗಿಳಿದು ಸಾಲ ಕಟ್ಟಲು ವಾರ್ನ್ ಮಾಡುತ್ತಿದ್ದಾರೆ. ಹೀಗಾಗಿ ಸಾಲ ಮರುಪಾವತಿಗೆ ಕಾಲಾವಕಾಶ ನೀಡದಿದ್ರೆ ಆತ್ಮಹತ್ಯೆಯೊಂದೇ ದಾರಿ ಅಂತಿದ್ದಾರೆ ರೈತರು.
ಮತ್ತೊಂದೆಡೆ ರೈತರ ಅಕೌಂಟ್ಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎರಡನೇ ಕಂತಿನ 2ಸಾವಿರ ರೂಪಾಯಿ ಹಣವನ್ನ ಕೇಂದ್ರ ಸರ್ಕಾರ ಜಮೆ ಮಾಡಿತ್ತು. ಇತ್ತ ಕೆಲ ರೈತರಿಗೆ ಫಸಲ್ ಭೀಮಾ ಯೋಜನೆ ಹಣವು ಕೂಡ ಜಮಾವಣೆಯಾಗಿತ್ತು. ಆದ್ರೆ ಬ್ಯಾಂಕ್ಗೆ ಹೋಗಿ ಈ ಬಗ್ಗೆ ವಿಚಾರಿಸಿದ್ರೆ ನಿಮ್ಮ ಸಾಲದ ಖಾತೆಗೆ ಹಣ ಜಮಾ ಮಾಡಿಕೊಂಡಿದ್ದೇವೆ. ಹಣ ಕೊಡಲ್ಲ ಅಂದಿದ್ದಾರೆ. ಈ ಕಾರಣಕ್ಕೆ ಕೆಲ ರೈತರು ಬೆಳಗಾವಿ ನಗರದಲ್ಲಿರುವ ಲೀಡ್ ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡಿ ಲೀಡ್ ಬ್ಯಾಂಕ್ ಮ್ಯಾನೇಜರ್ಗೆ ಮನವಿ ಸಲ್ಲಿಸಿದ್ರು. ಇಷ್ಟಾದ್ರೂ ಹಣ ಮಾತ್ರ ರೈತರಿಗೆ ಕೊಡದೆ ಸಾಲಕ್ಕೆ ಜಮಾ ಮಾಡ್ತಿದ್ದಾರೆ. ಈ ಬಗ್ಗೆ ಕಿತ್ತೂರ ತಹಶೀಲ್ದಾರ್ರನ್ನ ಕೇಳಿದ್ರೆ ಬ್ಯಾಂಕ್ಗಳಿಗೆ ಲಿಖಿತ ಆದೇಶ ಕೊಡ್ತೀವಿ ಅಂತಿದ್ದಾರೆ.
ಒಂದು ಕಡೆ ಸರ್ಕಾರ ಸದ್ಯಕ್ಕೆ ಸಾಲ ವಸೂಲಿ ಮಾಡಬೇಡಿ ಅಂತಿದ್ರೆ ಅಧಿಕಾರಿಗಳೆಲ್ಲ ಅಖಾಡಕ್ಕಿಳಿದು ವಸೂಲಿಗೆ ಮುಂದಾಗಿದ್ದಾರೆ. ಇತ್ತ ಭವಿಷ್ಯದ ದಿಕ್ಕೇ ತೋಚದೆ ಕುಂತಿರೋ ರೈತರು ಮತ್ತಷ್ಟು ದಿಗಿಲಿಗೆ ಬಿದ್ದಿದ್ದಾರೆ.