ಚಿಂತಾಮಣಿ: ಬ್ರಾಹ್ಮಣರಹಳ್ಳಿಯಲ್ಲಿ 9 ತಿಂಗಳ ಮಗುವಿನೊಂದಿಗೆ ತಂದೆ ಆತ್ಮಹತ್ಯೆ, 3 ತಿಂಗಳ ಹಿಂದೆ ಪತ್ನಿಯ ಸಾವು

3 ತಿಂಗಳ ಹಿಂದೆ ಅನಾರೋಗ್ಯದಿಂದ ರವಿ ಎಂಬುವವರ ಹೆಂಡತಿ ಮೃತಪಟ್ಟಿದ್ದರು. 15 ದಿನಗಳ ಹಿಂದೆ ಬೇರೆ ಮದುವೆ ಸಹ ಆಗಿದ್ದ ರವಿ ಕಳೆದ ರಾತ್ರಿಯಿಂದ ಮಗುವಿನೊಂದಿಗೆ ನಾಪತ್ತೆಯಾಗಿದ್ದರು. ಹೊಂಡದ ಬಳಿ ಕಾರು ಕಂಡುಬಂದ ಕಾರಣ ಮೃತದೇಹಗಳು ಪತ್ತೆಯಾಗಿವೆ. ರವಿ ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕೆ ವ್ಯಕ್ತವಾಗಿದೆ.

ಚಿಂತಾಮಣಿ: ಬ್ರಾಹ್ಮಣರಹಳ್ಳಿಯಲ್ಲಿ 9 ತಿಂಗಳ ಮಗುವಿನೊಂದಿಗೆ ತಂದೆ ಆತ್ಮಹತ್ಯೆ, 3 ತಿಂಗಳ ಹಿಂದೆ ಪತ್ನಿಯ ಸಾವು
9 ತಿಂಗಳ ಮಗು ಸುಷ್ಮಗಂಗಾ ಮತ್ತು ತಂದೆ ರವಿ
Follow us
sandhya thejappa
| Updated By: preethi shettigar

Updated on:Feb 27, 2021 | 5:55 PM

ಚಿಕ್ಕಬಳ್ಳಾಪುರ: 9 ತಿಂಗಳ ಮಗುವಿನೊಂದಿಗೆ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ತಾಲೂಕಿನ ಬ್ರಾಹ್ಮಣರ ಹಳ್ಳಿಯಲ್ಲಿ ನಡೆದಿದೆ. ರವಿ (35), 9 ತಿಂಗಳ ಮಗು ಸುಷ್ಮಗಂಗಾ ಮೃತ ದುರ್ದೈವಿಗಳು. ಇಂದು (ಫೆಬ್ರವರಿ 27)‌ ಬೆಳಗ್ಗೆ ಕೃಷಿ ಹೊಂಡದ ಬಳಿ ಕಾರು ಕಂಡುಬಂದ ಹಿನ್ನೆಲೆ ಅನುಮಾನದಿಂದ ನೋಡಿದಾಗ ಮೃತದೇಹಗಳು ಪತ್ತೆ‌ಯಾಗಿವೆ.

3 ತಿಂಗಳ ಹಿಂದೆ ಅನಾರೋಗ್ಯದಿಂದ ರವಿ ಎಂಬುವವರ ಹೆಂಡತಿ ಮೃತಪಟ್ಟಿದ್ದರು. 15 ದಿನಗಳ ಹಿಂದೆ ಬೇರೆ ಮದುವೆ ಸಹ ಆಗಿದ್ದ ರವಿ ಕಳೆದ ರಾತ್ರಿಯಿಂದ ಮಗುವಿನೊಂದಿಗೆ ನಾಪತ್ತೆಯಾಗಿದ್ದರು. ಹೊಂಡದ ಬಳಿ ಕಾರು ಕಂಡುಬಂದ ಕಾರಣ ಮೃತದೇಹಗಳು ಪತ್ತೆಯಾಗಿವೆ. ರವಿ ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕೆ ವ್ಯಕ್ತವಾಗಿದೆ.

ಬಂಧನಕ್ಕೊಳಗಾದ ಆರೋಪಿ ಆತ್ಮಹತ್ಯೆ 16 ಲಕ್ಷ ರೂ. ಹಣ ವಂಚಿಸಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸಿದ್ದಲಿಂಗಸ್ವಾಮಿ ಎಂಬಾತ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಲಿಂಗಸ್ವಾಮಿ ಬಿಡಿಎ ನಿವೇಶನ ಕೊಡಿಸುವುದಾಗಿ ಹೇಳಿ ಜನರಿಗೆ ವಂಚಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ದಿದ್ದ ವೇಳೆ ಪತ್ನಿ ಮುಖ ನೋಡಿ ಮುಜುಗರಕ್ಕೊಳಗಾಗಿದ್ದ ಸಿದ್ದಲಿಂಗಸ್ವಾಮಿ ಮನೆಯ ಕಿಚನ್ ಮೂಲಕ ತೆರಳಿ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ವಿಷಯ ತಿಳಿದ ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಸಿದ್ದಲಿಂಗಸ್ವಾಮಿ ಕೊನೆಯುಸಿರು ಎಳೆದಿದ್ದಾರೆ.

ನಿವೇಶನ ಕೊಡಿಸುವುದಾಗಿ ಹೇಳಿ ವಂಚನೆ ಎಸಗಿದ ಆರೋಪಿಯ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಅಡುಗೆ ಕೋಣೆಯಲ್ಲಿ ಇನ್ನೂ ಕೆಲವು ದಾಖಲೆಗಳು ಇದೆ ಎಂದು ಹೇಳಿ ದಾಖಲೆಗಳನ್ನ ತರುವ ನೆಪದಲ್ಲಿ ಹೋಗಿ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಸಿಸಿಬಿ ವಶದಲ್ಲಿದ್ದ ಜಾಗ್ವಾರ್ ಕಾರು ಮಾರಿದ ಇಬ್ಬರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್​

ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಉದ್ಯಮಿಗಳನ್ನ ಸಿಲುಕಿಸಿ ಲಕ್ಷ ಲಕ್ಷ ಹಣ ಸುಲಿಗೆ: ಮಂಗಳೂರು ಸಿಸಿಬಿ ಪೊಲೀಸರ ವಿರುದ್ಧ ಗಂಭೀರ ಆರೋಪ

Published On - 5:51 pm, Sat, 27 February 21