ಬೆಳಗಾವಿ: ನನ್ನ ಮಗಳನ್ನು ಕಿಡ್ನ್ಯಾಪ್ ಮಾಡಿದ್ದರು ಎಂದು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆಯ ತಂದೆ ಠಾಣೆಗೆ ದೂರು ದಾಖಲಿಸಿದ್ದಾರೆ. ಸಿಡಿ ದೃಶ್ಯದಲ್ಲಿದ್ದ ತನ್ನ ಮಗಳು ಕಿಡ್ನ್ಯಾಪ್ ಆಗಿದ್ದರು ಎಂದು ಸಂತ್ರಸ್ತೆಯ ತಂದೆ ನಗರದ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಹಾಸ್ಟೆಲ್‌ನಲ್ಲಿದ್ದಾಗ ನನ್ನ ಪುತ್ರಿಯನ್ನು ಕಿಡ್ನ್ಯಾಪ್ ಮಾಡಿದ್ದರು ಎಂದು ಆಕಯೆ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.
‘ನನ್ನ ಪುತ್ರಿ ಅಪಹರಿಸಿ, ಬೆದರಿಸಿ ಅಶ್ಲೀಲ ದೃಶ್ಯ ಶೂಟ್ ಮಾಡಲಾಗಿದೆ’
ನನ್ನ ಪುತ್ರಿ ಅಪಹರಿಸಿ, ಬೆದರಿಸಿ ಅಶ್ಲೀಲ ದೃಶ್ಯ ಶೂಟ್ ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಲ್ಲಿ ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ನನ್ನ ಪುತ್ರಿ ವಿಡಿಯೋ ಸಿಡಿ ನಕಲಿ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ. ಮಾರ್ಚ್ 2ರಿಂದೇ ಮಗಳನ್ನು ಕಿಡ್ನ್ಯಾಪ್ ಮಾಡಲಾಗಿದೆ. ನಮ್ಮ ಮಗಳನ್ನು ಹುಡುಕಿ ಕೊಡಿ, ನಮಗೆ ರಕ್ಷಣೆ ಕೊಡಿ ಎಂದು ಬೆಳಗಾವಿ ಎಪಿಎಂಸಿ ಠಾಣೆಗೆ ಯುವತಿ ತಂದೆಯ ದೂರು ನೀಡಿದ್ದಾರೆ.
ಮಗಳನ್ನು ಯಾರೋ ಬೆದರಿಸಿ ವಿಡಿಯೋ ಮಾಡಿಸಿದ್ದಾರೆ. ಕಳೆದ 7 ದಿನಗಳಿಂದ ನನ್ನ ಮಗಳ ಜೊತೆ ಸಂಪರ್ಕ ಆಗಿಲ್ಲ. ವಿಡಿಯೋ ರಿಲೀಸ್ ಆದ ಕೆಲ ದಿನ ಮಾತನಾಡಿದ್ದ ನನ್ನ ಪುತ್ರಿ ಮಾತನಾಡಿದ್ದಳು ಎಂದು ದೂರಿನಲ್ಲಿ ಹೇಳಿದ್ದಾರೆ.
‘ಸಿಡಿಯಲ್ಲಿರುವಳು ನಾನಲ್ಲ ಎಂದಿದ್ದಳು’
‘ಸಿಡಿ’ಯಲ್ಲಿರುವಳು ನಾನಲ್ಲ ಎಂದಿದ್ದಳು ಎಂದು ಪೊಲೀಸರಿಗೆ ಕೊಟ್ಟ ದೂರಲ್ಲಿ ಸಂತ್ರಸ್ತೆ ತಂದೆ ಉಲ್ಲೇಖಿಸಿದ್ದಾರೆ. ನನ್ನಂತೆ ಕಾಣುವ ಹುಡುಗಿ ದೃಶ್ಯ ಎಡಿಟ್ ಮಾಡಿದ್ದಾರೆ. ಅದು ನಕಲಿ ಸಿಡಿ, ಆ ಸಿಡಿಯಲ್ಲಿ ನನ್ನ ಪಾತ್ರವೇ ಇಲ್ಲ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಿಡಿ ವೈರಲ್ ಆದಾಗ ಕೇಳಿದ್ದಕ್ಕೆ ನನ್ನ ಪುತ್ರಿ ಹೇಳಿದ್ದಳು. ನೀನು ಮನೆಗೆ ವಾಪಸ್ ಬಂದಾಗ ಬರುವೆ ಎಂದಿದ್ದಳು ಎಂದು ಸಿಡಿಯಲ್ಲಿರುವ ಸಂತ್ರಸ್ತೆ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯಕ್ಕೆ ಏನೂ ಹೇಳುವ ಸ್ಥಿತಿಯಲ್ಲಿಲ್ಲ. ನಾನೆಲ್ಲಿದ್ದೀನಿ ಎನ್ನುವುದೂ ಗೊತ್ತಿಲ್ಲ ಎಂದು ಹೇಳಿದ್ದಳು. ಹಾಗಾಗಿ, ಮಗಳನ್ನು ಯಾರೋ ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ನನ್ನ ಮಗಳ ಜೀವಕ್ಕೆ ಅಪಾಯ ಇದೆ ಎಂದು ಆಕೆ ತಂದೆ ನೀಡಿರುವ ದೂರಿನಲ್ಲಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ನನ್ನ ಪುತ್ರಿಯನ್ನು ಹೆದರಿಸಿ, ಕಿರುಕುಳ ನೀಡಿ ಅಶ್ಲೀಲ ವಿಡಿಯೋ ತೆಗೆದಿದ್ದಾರೆ. ಬಳಿಕ ಅದನ್ನು ಸಿಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ, IPC ಸೆಕ್ಷನ್ 363, 368, 343, 346, 354, 506ರಡಿಯಲ್ಲಿ ಕೇಸ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತಂದೆಯಿಂದ ದೂರು ನೀಡಲಾಗಿದೆ.
ಇದನ್ನೋ ಓದಿ: ರಮೇಶ್ ಜಾರಕಿಹೊಳಿ CD ಪ್ರಕರಣ: SITಯಿಂದ ಮಾಜಿ ಪತ್ರಕರ್ತನ ಪತ್ನಿ, ತಾಯಿಯ ವಿಚಾರಣೆ
Published On - 7:40 pm, Tue, 16 March 21