ರಮೇಶ್ ಜಾರಕಿಹೊಳಿ CD ಪ್ರಕರಣ: SITಯಿಂದ ಮಾಜಿ ಪತ್ರಕರ್ತನ ಪತ್ನಿ, ತಾಯಿಯ ವಿಚಾರಣೆ

ರಮೇಶ್ ಜಾರಕಿಹೊಳಿ CD ಪ್ರಕರಣಕ್ಕೆ ಸಂಬಂಧಿಸಿದಂತೆ ಭುವನಹಳ್ಳಿಯಲ್ಲಿ ಎಸ್​ಐಟಿ ಅಧಿಕಾರಿಗಳಿಂದ ನಡೆಸಲಾದ ವಿಚಾರಣೆ ಅಂತ್ಯವಾಗಿದೆ. ಜಿಲ್ಲೆಯ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿ ಮಾಜಿ ಪತ್ರಕರ್ತ ನರೇಶ್ ಪತ್ನಿ ಹಾಗೂ ಮನೆಯವರ ವಿಚಾರಣೆ ಅಂತ್ಯವಾಗಿದೆ.

ರಮೇಶ್ ಜಾರಕಿಹೊಳಿ CD ಪ್ರಕರಣ: SITಯಿಂದ ಮಾಜಿ ಪತ್ರಕರ್ತನ ಪತ್ನಿ, ತಾಯಿಯ ವಿಚಾರಣೆ
SITಯಿಂದ ಮಾಜಿ ಪತ್ರಕರ್ತ ನರೇಶ್ ಪತ್ನಿ ವಿಚಾರಣೆ
Follow us
KUSHAL V
|

Updated on: Mar 16, 2021 | 6:59 PM

ತುಮಕೂರು: ರಮೇಶ್ ಜಾರಕಿಹೊಳಿ CD ಪ್ರಕರಣಕ್ಕೆ ಸಂಬಂಧಿಸಿದಂತೆ ಭುವನಹಳ್ಳಿಯಲ್ಲಿ ಎಸ್​ಐಟಿ ಅಧಿಕಾರಿಗಳಿಂದ ನಡೆಸಲಾದ ವಿಚಾರಣೆ ಅಂತ್ಯವಾಗಿದೆ. ಜಿಲ್ಲೆಯ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿ ಮಾಜಿ ಪತ್ರಕರ್ತ ನರೇಶ್ ಪತ್ನಿ ಹಾಗೂ ಮನೆಯವರ ವಿಚಾರಣೆ ಅಂತ್ಯವಾಗಿದೆ. ಇನ್​ಸ್ಪೆಕ್ಟರ್ ಅಂಜುಮಾಲಾ ನಾಯ್ಕ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಸುಮಾರು 1 ಗಂಟೆ ಕಾಲ ನರೇಶ್ ಪತ್ನಿ ಮತ್ತು ತಾಯಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಸಿದರು.

ಅಂದ ಹಾಗೆ, ಇಂದು ವಿಚಾರಣೆಗೆ ಹಾಜರಾಗಲು ನರೇಶ್ ಪತ್ನಿಗೆ ನೋಟಿಸ್​ ನೀಡಲಾಗಿತ್ತು. ಆದರೆ, 1 ವರ್ಷದ ಮಗು ಮತ್ತು ನಮ್ಮ ಅತ್ತೆಗೆ ಹುಷಾರಿಲ್ಲ ಎಂದು ಮಾಜಿ ಪತ್ರಕರ್ತನ ಪತ್ನಿ ವಿಚಾರಣೆಗೆ ಬಂದಿರಲಿಲ್ಲ. ಈ ಕುರಿತು, ವಕೀಲರ ಮೂಲಕ ಎಸ್​ಐಟಿಗೆ ಮಾಹಿತಿ ನೀಡಲಾಗಿತ್ತು. ನರೇಶ್ ಪತ್ನಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಖುದ್ದು ಅಧಿಕಾರಿಗಳೇ ಅವರ ಮನೆಗೆ ಆಗಮಿಸಿ, ವಿಚಾರಣೆ ನಡೆಸಿ, ನರೇಶ್ ಪತ್ನಿ ಹೇಳಿಕೆಯನ್ನು ವಿಡಿಯೋ ರೆಕಾರ್ಡ್​ ಮಾಡಿದರು. 3 ಕಾರುಗಳಲ್ಲಿ ಬಂದಿದ್ದ ಎಸ್​ಐಟಿ ಅಧಿಕಾರಿಗಳ ತಂಡ ಮಹಿಳಾ ಸಿಬ್ಬಂದಿಯನ್ನೂ ಕರೆತಂದಿದ್ದರು.

ನಿವಾಸದಿಂದ ತೆರಳಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇತ್ತ, ಬೆಂಗಳೂರಿನ ಸದಾಶಿವನಗರದ ಮನೆಯಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೆರಳಿದರು. ಇದಕ್ಕೂ ಮುನ್ನ ಅವರು ವಾಲ್ಮೀಕಿ ಸಮುದಾಯದ ಪ್ರಸನ್ನಾನಂದಪುರಿಶ್ರೀಗಳು ಮತ್ತು ಶಾಶಕ ರಾಜುಗೌಡರನ್ನು ಭೇಟಿಯಾದರು. ರಮೇಶ್​ ಮನೆಗೆ ಆಗಮಿಸಿ ಭೇಟಿಯಾಗಿದ್ದ ಶ್ರೀಗಳು, ಶಾಸಕರು ಮಾಜಿ ಸಚಿವರಿಗೆ ಧೈರ್ಯ ತುಂಬೋಕೆ ಮುಂದಾದರು.

ಈ ನಡುವೆ, ರಮೇಶ್ ಜಾರಕಿಹೊಳಿ ಬೆಂಬಲಿಗರನ್ನು ಸಹ ಭೇಟಿಯಾದರು. ಸದಾಶಿವನಗರಕ್ಕೆ ಬಂದಿದ್ದ ಬೆಂಬಲಿಗರನ್ನ ಭೇಟಿಯಾದರು. ಬೆಳಗಾವಿ, ಗೋಕಾಕ್‌ನಿಂದ ಬಂದಿದ್ದ ಬೆಂಬಲಿಗರು ರಮೇಶ್​ರನ್ನು ಮಾತನಾಡಿಸಿದ ಬಳಿಕ ತೆರಳಿದರು.

ಇದನ್ನೂ ಓದಿ: ಪ್ರತಿಷ್ಠಿತ ಮೈಮುಲ್ ಚುನಾವಣೆ: ಮಾಜಿ ಸಿಎಂ HDKಗೆ ಮುಖಭಂಗ; GTD ಬಣಕ್ಕೆ ಭರ್ಜರಿ ಜಯ