Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1) ಕರ್ನಾಟಕ ಉಪ ಚುನಾವಣೆಗೆ ದಿನಾಂಕ ನಿಗದಿ ರಾಜ್ಯದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಏಪ್ರಿಲ್ 17 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. Link: ಏಪ್ರಿಲ್ 17ರಂದು ನಡೆಯಲಿದೆ ಕರ್ನಾಟಕ ಉಪ ಚುನಾವಣೆ
2) ಅಶ್ಲೀಲ ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋದಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದರ ವಿರುದ್ಧ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ. Link: ಕನ್ನಡಿಗರನ್ನು ನಿಂದಿಸಿದ್ದಕ್ಕಾಗಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು
3) ಎಲ್ಲಾ ಬ್ಯಾಂಕ್ಗಳ ಖಾಸಗೀಕರಣ ಮಾಡಲ್ಲ: ನಿರ್ಮಲಾ ಸೀತಾರಾಮನ್ ಬ್ಯಾಂಕ್ ವಿಲೀನದ ತೀರ್ಮಾನ ದಿಢೀರ್ ನಿರ್ಧಾರವಲ್ಲ. ಹಲವು ವರ್ಷಗಳ ಚಿಂತನೆಯ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡದಿದ್ದರೂ ಬ್ಯಾಂಕ್ಗಳ ಖಾಸಗೀಕರಣ ಪೂರ್ಣಗೊಂಡ ನಂತರ ಅಲ್ಲಿಯ ಉದ್ಯೋಗಿಗಳ ಹಿತರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು. Link: ಎಲ್ಲಾ ಬ್ಯಾಂಕ್ಗಳ ಖಾಸಗೀಕರಣ ಮಾಡಲ್ಲ; ಸ್ಪಷ್ಟನೆ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
4) ತಾಯಿಯಾದ ನಟಿ ಮಯೂರಿ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಖ್ಯಾತಿ ಪಡೆದಿರುವ ನಟಿ ಮಯೂರಿ ಅವರ ಬದುಕಿನಲ್ಲೀಗ ಹೊಸ ಅಧ್ಯಾಯ ಆರಂಭ ಆಗಿದೆ. ಲಾಕ್ಡೌನ್ನಲ್ಲಿ ಮದುವೆ ಆಗಿದ್ದ ಅವರು ಈಗ ತಾಯಿ ಆಗಿದ್ದಾರೆ. Link: ಮೊದಲ ದಿನವೇ ಮಗನಿಗೆ ಆಕರ್ಷಕ ಗಿಫ್ಟ್!
5) ಏಪ್ರಿಲ್ 1ರಿಂದ 8 ಬ್ಯಾಂಕ್ಗಳ ಚೆಕ್ಬುಕ್, ಪಾಸ್ಬುಕ್ ಚಾಲ್ತಿಯಲ್ಲಿ ಇರಲ್ಲ ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಆಂಧ್ರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅಲಹಾಬಾದ್ ಬ್ಯಾಂಕ್ನ ಗ್ರಾಹಕರ ಬ್ಯಾಂಕ್ ಖಾತೆ ಸಂಖ್ಯೆಯು ಏಪ್ರಿಲ್ 1, 2021ರಿಂದ ಬದಲಾವಣೆ ಆಗಲಿದೆ. Link: ಈ 8 ಬ್ಯಾಂಕ್ಗಳ ಚೆಕ್ಬುಕ್, ಪಾಸ್ಬುಕ್ ಏಪ್ರಿಲ್ 1ರಿಂದ ಚಾಲ್ತಿಯಲ್ಲಿ ಇರಲ್ಲ
6) ಇಮ್ರಾನ್ ಖಾನ್ ಸರ್ಕಾರವನ್ನು ಟೀಕಿಸಿದೆ ಪಾಕ್ ಸುಪ್ರೀಂ ಕೋರ್ಟ್ ಕೌನ್ಸಿಲ್ ಆಫ್ ಕಾಮನ್ ಇಂಟರೆಸ್ಟ್ (CCI) ಸಭೆಯನ್ನು ಕಳೆದ ಎರಡು ತಿಂಗಳಿನಿಂದ ನಡೆಸಲು ವಿಫಲವಾಗಿರುವುದಕ್ಕೆ ಪಾಕ್ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಕಟುವಾಗಿ ಟೀಕಿಸಿದೆ. Link: ದೇಶ ಮುನ್ನಡೆಸಲು ಇಮ್ರಾನ್ ಖಾನ್ ಅಸಮರ್ಥ
7) ಇತ್ಯರ್ಥವಾಯಿತು ರೈತರು ಮತ್ತು ಯಶ್ ಕುಟುಂಬಸ್ಥರ ನಡುವಿನ ವಿವಾದ ನಟ ಯಶ್ ಫಾರ್ಮ್‌ಹೌಸ್‌ಗೆ ರಸ್ತೆ ನಿರ್ಮಾಣ ವಿವಾದಕ್ಕೆ ಸಂಬಂಧಿಸಿ ಸೌಹಾರ್ದಯುತ ಮಾತುಕತೆ ಮೂಲಕ ಹಾಸನ ರೈತರು ಮತ್ತು ಯಶ್ ಕುಟುಂಬಸ್ಥರ ನಡುವಿನ ವಿವಾದ ಇತ್ಯರ್ಥಗೊಂಡಿದ್ದು ರೈತರು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. Link: ಹಾಸನ ರೈತರು, ನಟ ಯಶ್ ಕುಟುಂಬಸ್ಥರ ನಡುವಿನ ವಿವಾದ ಇತ್ಯರ್ಥ
8) ಪ್ರಧಾನಿ ಮುಖ್ಯ ಸಲಹೆಗಾರ ಪಿ.ಕೆ.ಸಿನ್ಹಾ ರಾಜೀನಾಮೆ ಮಾಜಿ ಕೇಂದ್ರ ಸಂಪುಟ ಕಾರ್ಯದರ್ಶಿ ಮತ್ತು ಪ್ರಧಾನಿ ಕಾರ್ಯಾಲಯದ (Prime Minister’s Office – PMO) ಮುಖ್ಯಸಲಹೆಗಾರ ಪಿ.ಕೆ.ಸಿನ್ಹಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ‘ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಸಿನ್ಹಾ ಹೇಳಿದ್ದಾರೆ. Link: ಪ್ರಧಾನಿ ಕಾರ್ಯಾಲಯದ ಮುಖ್ಯ ಸಲಹೆಗಾರ ಪಿ.ಕೆ.ಸಿನ್ಹಾ ರಾಜೀನಾಮೆ
9) ಇಂಗ್ಲೆಂಡ್ ತಂಡದ ವಿರುದ್ಧ ಐವರು ಯುವಕರ ಪ್ರತಿಭಟನೆ: ಕಾರಣವೇನು? ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿರುವ ಪುಣೆಯ ಗಹುಂಜೆ ಮೈದಾನವು ಅಭಿಮಾನಿಗಳ ಅತಿರೇಕದ ವರ್ತನೆಗೆ ಸಾಕ್ಷಿಯಾಗಿದೆ. ಅನೈತಿಕವಾಗಿ ಸ್ಟೇಡಿಯಂ ಪ್ರವೇಶಿಸಿ ಪ್ರತಿಭಟನೆ ತೋರಿದ ಕೊಲ್ಹಾಪುರದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. Link: ಕ್ರಿಕೆಟ್ ಮೈದಾನದಲ್ಲಿ ಅನುಚಿತ ವರ್ತನೆ ತೋರಲು ಇತಿಹಾಸ ಕಾರಣ!
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.
Published On - 7:08 pm, Tue, 16 March 21