AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಷ್ಠಿತ ಮೈಮುಲ್ ಚುನಾವಣೆ: ಮಾಜಿ ಸಿಎಂ HDKಗೆ ಮುಖಭಂಗ; GTD ಬಣಕ್ಕೆ ಭರ್ಜರಿ ಜಯ

ಪ್ರತಿಷ್ಠಿತ ಮೈಮುಲ್ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಮುಖಭಂಗ ಎದುರಾಗಿದೆ. ಎಲೆಕ್ಷನ್​ನಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಣ ಜಯಭೇರಿ ಬಾರಿಸಿದೆ. ಹುಣಸೂರು ಉಪವಿಭಾಗದ ಎಲ್ಲಾ 8 ಸ್ಥಾನಗಳಲ್ಲಿ ಜಿ.ಟಿ.ದೇವೇಗೌಡರ ಬಣ ಗೆಲುವು ಸಾಧಿಸಿದೆ.

ಪ್ರತಿಷ್ಠಿತ ಮೈಮುಲ್ ಚುನಾವಣೆ: ಮಾಜಿ ಸಿಎಂ HDKಗೆ ಮುಖಭಂಗ; GTD ಬಣಕ್ಕೆ ಭರ್ಜರಿ ಜಯ
ಜಿ.ಟಿ.ದೇವೇಗೌಡ (ಎಡ) ; ಹೆಚ್​.ಡಿ. ಕುಮಾರಸ್ವಾಮಿ (ಬಲ)
KUSHAL V
|

Updated on:Mar 16, 2021 | 7:11 PM

Share

ಮೈಸೂರು: ಪ್ರತಿಷ್ಠಿತ ಮೈಮುಲ್ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಮುಖಭಂಗ ಎದುರಾಗಿದೆ. ಎಲೆಕ್ಷನ್​ನಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಣ ಜಯಭೇರಿ ಬಾರಿಸಿದೆ. ಹುಣಸೂರು ಉಪವಿಭಾಗದ ಎಲ್ಲಾ 8 ಸ್ಥಾನಗಳಲ್ಲಿ ಜಿ.ಟಿ.ದೇವೇಗೌಡರ ಬಣ ಗೆಲುವು ಸಾಧಿಸಿದೆ. ಇದಲ್ಲದೆ, ಚುನಾವಣೆಯಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಬಾಮೈದ ಸಹ ಪರಾಜಯಗೊಂಡಿದ್ದಾರೆ. ಇದಲ್ಲದೆ, ಪಿರಿಯಾಪಟ್ಟಣ ಶಾಸಕ ಮಹದೇವು ಪುತ್ರ ಪ್ರಸನ್ನಗೆ ಗೆಲುವು ಸಾಧಿಸಿದ್ದಾರೆ.

MYMUL ELECTION 2

ಮತ ಎಣಿಕೆ ಕೇಂದ್ರದ ಬಳಿ ಸಂಭ್ರಮಾಚರಣೆ

ಮೈಸೂರು ಮೈಮುಲ್‌ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 8ಕ್ಕೆ 8 ಸ್ಥಾನಗಳನ್ನು ಜಿ. ಟಿ. ದೇವೇಗೌಡರ ಬಣದ ಅಭ್ಯರ್ಥಿಗಳು ಗೆದ್ದಿದ್ದಾರೆ. ಹೀಗಾಗಿ, ಹುಣಸೂರು ಉಪ ವಿಭಾಗದಲ್ಲಿ ಜಿಟಿಡಿ ಟೀಂ ಕ್ಲೀನ್ ಸ್ವೀಪ್ ಮಾಡಿದೆ. ಗೆದ್ದ ಅಭ್ಯರ್ಥಿಗಳ ಪಟ್ಟಿ ಹೀಗಿದೆ. 1. ಪ್ರಸನ್ನ 2. ಈರೇಗೌಡ ಕೆ. 3. ಕುಮಾರ ಕೆ. ಎಸ್ 4. ಎ. ಟಿ. ಸೋಮಶೇಖರ್ 5. ಜಗದೀಶ್ ಉ. ಬಸಪ್ಪ 6. ರಾಜೇಂದ್ರ ಹೆಚ್. ಡಿ 7. ಶಿವಗಾಮಿ ಎ 8. ದ್ರಾಕ್ಷಯಿನಿ

ಎಲೆಕ್ಷನ್​ನಲ್ಲಿ 1,052 ಮತದಾರರ ಪೈಕಿ 1,051 ಸದಸ್ಯರು ಮತದಾನ ಮಾಡಿದ್ದರು. ಮೈಮುಲ್ ಚುನಾವಣೆಯಲ್ಲಿ ಶೇಕಡಾ 99ರಷ್ಟು ಮತದಾನ ನಡೆದಿತ್ತು. ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುವ ಕದನ ಇದಾಗಿತ್ತು. ಜಿಟಿಡಿ ಹಾಗೂ ಮಾಜಿ ಸಿಎಂ ಹೆಚ್‌ಡಿಕೆಗೆ ಪ್ರತಿಷ್ಠೆಯ ಚುನಾವಣೆ ಇದಾಗಿತ್ತು.

MYS MYMUL ELECTION 1

ಎಲೆಕ್ಷನ್​ನಲ್ಲಿ ಗೆದ್ದು ಬೀಗಿದ GTD ಬಣ

‘ಇದು ಜೆಡಿಎಸ್ ಪಕ್ಷದ ಸೋಲಲ್ಲ. ಇದು ನನ್ನ ವೈಯಕ್ತಿಕ ಸೋಲು’ ನಾವು ಯಾವುದೇ ಪೂರ್ವಭಾವಿ ಸಿದ್ಧತೆ ನಡೆಸದೆ ಚುನಾವಣೆಗೆ ಹೋಗಿದ್ದೆವು. ಈ ಚುನಾವಣೆ ನಡೆಯುತ್ತ ಇಲ್ಲವೊ ಎಂಬ ಅನುಮಾನ ಇತ್ತು. ನಾವು ಸರಿಯಾಗಿ ಸಂಘಟನೆ ಮಾಡಿದ್ದವು. ಆದರೆ, ಜಿ.ಟಿ.ದೇವೆಗೌಡರು ಮೈಸೂರು ಸಹಕಾರಿ ಕ್ಷೇತ್ರದ ಧುರೀಣ ಎಂಬುದು ಸಾಬೀತಾಗಿದೆ ಎಂದು ಹೆಚ್.ಡಿ.ರೇವಣ್ಣ ಬಾಮೈದ ಹಾಗೂ ಪರಾಜಿತ ಅಭ್ಯರ್ಥಿ ಕೆ.ಎಸ್.‌ಮಧುಚಂದ್ರ ಹೇಳಿದ್ದಾರೆ.

KP MADHUCHANDRA 1

ಮಧುಚಂದ್ರ

ಆದರೆ, ಇದು ಜೆಡಿಎಸ್ ಪಕ್ಷದ ಸೋಲಲ್ಲ. ಇದು ನನ್ನ ವೈಯಕ್ತಿಕ ಸೋಲು. ರೇವಣ್ಣನವರು ನನ್ನ ಬಾವ ಇರಬಹುದು. ಆದರೆ, ಪಕ್ಷದ ಮುಖಂಡರಾಗಿ ನನ್ನ ಪರವಾಗಿ ಪ್ರಚಾರ ಮಾಡಿದ್ದಾರೆ‌. ಬಟ್​, ಹುಣಸೂರು ವಿಭಾಗದಲ್ಲಿ ನಮ್ಮ ಬಣದವರು ಯಾರೂ ಗೆದ್ದಿಲ್ಲ ಎಂದು ಮಧುಚಂದ್ರ ಹೇಳಿದರು.

MYMUL ELECTION 3

ಸಂಭ್ರಮಾಚರಣೆ

ಇನ್ನು, ಈ ಹಿಂದೆ ಮಾತನಾಡಿದ್ದ ಶಾಸಕ ಜಿಟಿಡಿ ಪುತ್ರ ಜಿ.ಡಿ.ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಒಳ್ಳೆಯದಲ್ಲಎಂದು ಹೇಳಿದ್ದರು. ಸಹಕಾರ ಕ್ಷೇತ್ರ ರಾಜಕೀಯ ಮುಕ್ತವಾಗಿ ಜಾತ್ಯತೀತವಾಗಿರಬೇಕು. ಕೆಲವರ ಆಗಮನದಿಂದ ಪ್ರತಿಷ್ಠೆ, ರಾಜಕೀಯ ರೂಪ ಪಡೆದಿದೆ. ಹೆಚ್​ಡಿಕೆ, ಸಾ.ರಾ.ಮಹೇಶ್​ಗೆ ಹೇಳುವಷ್ಟು ದೊಡ್ಡವನಲ್ಲ. ಎಲ್ಲಿಯವರೆಗೆ ಸಹಕಾರಿಗಳ ಸಹಕಾರ ಜಿಟಿಡಿ ಅವರಿಗಿರುತ್ತೋ ಅಲ್ಲಿಯವರೆಗೆ ಟಾರ್ಗೆಟ್ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಶಾಸಕ ಜಿಟಿಡಿ ಪುತ್ರ ಜಿ.ಡಿ.ಹರೀಶ್ ಗೌಡ ಹೇಳಿದರು.

ಇದನ್ನೂ ಓದಿ: ‘ಬಿಜೆಪಿಯವ್ರು ಹೆಣ್ಣುಮಕ್ಕಳಿಗೆ ಕಾಟ ಕೊಡ್ತಾರೆ.. ಅವರ ಕಾಟ ತಡೆಯೋಕಾಗದೆ ಹೆಣ್ಣುಮಕ್ಕಳು ಪಕ್ಷದಲ್ಲಿ ಇರಲ್ಲ’

Published On - 6:11 pm, Tue, 16 March 21

ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ