ಮಂಗಳೂರು: ಪುತ್ರನನ್ನು ಮನೆಯಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ ತಂದೆ

ಅಪ್ಪ, ಮಗನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆಯಿತು. ಪುತ್ರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ತಂದೆ ಹಲ್ಲೆಗೈದಿದ್ದಾನೆ. ಮಗನನ್ನು ಮನೆಯೊಳಗೆ ಕೂಡಿ ಹಾಕಿ ಚಿಲಕ ಹಾಕಿದ್ದ ತಂದೆ, ಪುತ್ರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಮಂಗಳೂರು: ಪುತ್ರನನ್ನು ಮನೆಯಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ ತಂದೆ
ವಿಶ್ವನಾಥ ಶೆಟ್ಟಿ
Updated By: sandhya thejappa

Updated on: Jun 22, 2021 | 2:43 PM

ಮಂಗಳೂರು: ತಂದೆ ಪುತ್ರನನ್ನು ಮನೆಯೊಳಗೆ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಂಗಳೂರು ತಾಲೂಕಿನ ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆಗುತ್ತು ಪ್ರದೇಶದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ತಂದೆ ವಿಶ್ವನಾಥ ಶೆಟ್ಟಿ ಎಂಬುವವರು ಮಗ ಸ್ವಾಮಿತ್ ಶೆಟ್ಟಿ (25)ಗೆ ಬೆಂಕಿ ಹಚ್ಚಿದ್ದಾರೆ. ಸ್ವಾಮಿತ್ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ಹೈನುಗಾರಿಕೆ ನಡೆಸುತ್ತಿದ್ದರು. ದನಗಳನ್ನು ಹೊರಗಡೆ ಕಟ್ಟಿಹಾಕಿದ್ದ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು.

ಅಪ್ಪ, ಮಗನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆಯಿತು. ಪುತ್ರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ತಂದೆ ಹಲ್ಲೆಗೈದಿದ್ದಾನೆ. ಮಗನನ್ನು ಮನೆಯೊಳಗೆ ಕೂಡಿ ಹಾಕಿ ಚಿಲಕ ಹಾಕಿದ್ದ ತಂದೆ, ಪುತ್ರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸುಟ್ಟಗಾಯಗಳಿಂದ ಬಳಲುತ್ತಿರುವ ಸ್ವಾಮಿತ್ ಶೆಟ್ಟಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಕನಾಡಿ ನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಕತ್ತು ಕೊಯ್ದು ಪತ್ನಿ ಹತ್ಯೆಗೈದ ಪತಿ
ಆನೇಕಲ್: ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಪತಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಈ ಘಟನೆ ಬೆಂಗಳೂರಿನ ಅರಕೆರೆಯ ಬಿಟಿಎಸ್ ಲೇಔಟ್​​ನಲ್ಲಿ ನಡೆದಿದೆ. ತಮಿಳು ನಾಡು ಮೂಲದ ಮಣಿ(36) ಮತ್ತು ಆಶಾ(32) ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. 16 ವರ್ಷಗಳ ಹಿಂದೆ ಮದುವೆಯಾಗಿದ್ದರು. ವಿಪರೀತ ಕುಡಿಯುತ್ತಿದ್ದ ಪತಿ ಮಣಿಯಿಂದ ಪತ್ನಿ ದೂರಾಗಿದ್ದಳು. ಆಗಾಗ ಮನೆಗೆ ಬಂದು ಪತಿ ಗಲಾಟೆ ಮಾಡುತ್ತಿದ್ದ. ಇಂದು (ಜೂನ್ 22) ಬೆಳಗಿನ ಜಾವ ಇದೆ ವಿಚಾರವಾಗಿ ಗಲಾಟೆಯಾಗಿ, ಮಣಿ ತನ್ನ ಪತ್ನಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಹುಳಿಮಾವು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಚಾಕುವಿನಿಂದ ಇರಿದು, ಕುತ್ತಿಗೆ ಸೀಳಿ ಬರ್ಬರ ಹತ್ಯೆ
ರಶೀದ್ ಮಲಬಾರಿ ಗ್ಯಾಂಗ್​ನಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ. ಗೋವಿಂದಪುರದಲ್ಲಿ ಸೈಯದ್ ಕರೀಂ ಅಲಿ ಬರ್ಬರವಾಗಿ ಕೊಲೆಯಾಗಿದ್ದಾನೆ. ರೌಡಿ ಅನೀಸ್ ಪತ್ನಿ ಜೊತೆ ಅಕ್ರಮ ಸಂಬಂಧವಿರುವ ಕಾರಣ ಶಂಕೆ ಜೈಲಿನಲ್ಲಿರುವ ಅನೀಸ್​ ಸಹಚರರು ಹತ್ಯೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗೋವಿಂದ ಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ

ಮಂಗಳೂರಿನ ಭೂಗತ ಪಾತಕಿ ರಶೀದ್ ಮಲಬಾರಿ ಗ್ಯಾಂಗ್​​ನಲ್ಲಿ ಗುರುತಿಸಿಕೊಂಡಿದ್ದವ ಬೆಂಗಳೂರಿನಲ್ಲಿ ಹತ್ಯೆ…

​ಸಂಚಾರಿ ವಿಜಯ್​ ಬಗ್ಗೆ ಸುಳ್ಳುಗಳ ಸರಮಾಲೆ? ತಪ್ಪು ಮಾಹಿತಿ ಹಬ್ಬಿಸುವವರಿಗೆ ಲಿಂಗದೇವರು ಧಿಕ್ಕಾರ

(father set fire to his son in mangalore and injured son is being treated at hospital)