ಅಡ್ಡ ಬಂದ ಎತ್ತಿಗೆ ಬೈಕ್​ ಡಿಕ್ಕಿ: FDA ಪರೀಕ್ಷೆ ಬರೆದು ಮನೆಯತ್ತ ಹೊರಟ ಯುವಕ ತಲುಪಿದ್ದು ಮಾತ್ರ ಮಸಣಕ್ಕೆ

|

Updated on: Feb 28, 2021 | 10:38 PM

ಹೊಲದಿಂದ ಅಡ್ಡ ಬಂದ ಎತ್ತಿಗೆ ಬೈಕ್​ ಡಿಕ್ಕಿಯಾದ ಪರಿಣಾಮ FDA ಪರೀಕ್ಷಾರ್ಥಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ನಡೆದಿದೆ. ಅಪಘಾತದಲ್ಲಿ ತೇರದಾಳ ಪಟ್ಟಣದ ನಿವಾಸಿಯಾದ FDA ಪರೀಕ್ಷಾರ್ಥಿ ಅಕ್ಷಯಕುಮಾರ ಸಾವನ್ನಪ್ಪಿದ್ದಾರೆ.

ಅಡ್ಡ ಬಂದ ಎತ್ತಿಗೆ ಬೈಕ್​ ಡಿಕ್ಕಿ: FDA ಪರೀಕ್ಷೆ ಬರೆದು ಮನೆಯತ್ತ ಹೊರಟ ಯುವಕ ತಲುಪಿದ್ದು ಮಾತ್ರ ಮಸಣಕ್ಕೆ
ಅಪಘಾತದ ಭೀಕರ ದೃಶ್ಯ
Follow us on

ಬಾಗಲಕೋಟೆ: ಹೊಲದಿಂದ ಅಡ್ಡ ಬಂದ ಎತ್ತಿಗೆ ಬೈಕ್​ ಡಿಕ್ಕಿಯಾದ ಪರಿಣಾಮ FDA ಪರೀಕ್ಷಾರ್ಥಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ನಡೆದಿದೆ. ಅಪಘಾತದಲ್ಲಿ ತೇರದಾಳ ಪಟ್ಟಣದ ನಿವಾಸಿಯಾದ FDA ಪರೀಕ್ಷಾರ್ಥಿ ಅಕ್ಷಯಕುಮಾರ ಸಾವನ್ನಪ್ಪಿದ್ದಾರೆ. ಅಂದ ಹಾಗೆ, ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ಎತ್ತು ಕೂಡ ಮೃತಪಟ್ಟಿದೆ.

ಅಕ್ಷಯಕುಮಾರ FDA ಪರೀಕ್ಷೆ ಬರೆದು ವಾಪಸ್​ ಆಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಲೋಕಾಪುರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

FDA ಸಾಮಾನ್ಯ ಪರೀಕ್ಷೆ ವೇಳೆ ಅಕ್ರಮ: ಇಬ್ಬರು ಅರೆಸ್ಟ್​
ಇತ್ತ, FDA ಸಾಮಾನ್ಯ ಪರೀಕ್ಷೆಯ ಕೀ ಆನ್ಸರ್ ಸೋರಿಕೆ ಆರೋಪದಡಿ ಜವಾನನೊಬ್ಬನ ಬಂಧನವಾಗಿರುವ ಘಟನೆ ವರದಿಯಾಗಿದೆ. ಕೀ ಆನ್ಸರ್ ನೀಡಿದ ಆರೋಪದಡಿ ವಿಜಯಪುರ ನಗರದ JSS ಕಾಲೇಜಿನ ಜವಾನನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಜವಾನನ ಜೊತೆಗೆ ನಕಲು ಮಾಡಿದ್ದ ಅಭ್ಯರ್ಥಿಯೂ ಅರೆಸ್ಟ್​ ಆಗಿದ್ದಾನೆ. ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ. ಗಾಂಧಿಚೌಕ್​ ಠಾಣೆಯ ಪೊಲೀಸರಿಂದ ಇಬ್ಬರ ವಿಚಾರಣೆ ನಡೆಯುತ್ತಿದೆ. ಅತ್ತ, ಬೆಳಗ್ಗೆ ನಡೆದ ಪರೀಕ್ಷೆಯಲ್ಲಿ ನಕಲು ಮಾಡಿದ್ದ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ ನಡೆಯಿತು. ಕ್ರಮಕ್ಕೆ ಆಗ್ರಹಿಸಿ ಇತರೆ ಪರೀಕ್ಷಾರ್ಥಿಗಳು ಧರಣಿ ನಡೆಸಿದ್ದರು.

FDA ಸಾಮಾನ್ಯ ಪರೀಕ್ಷೆಯ ಕೀ ಆನ್ಸರ್ ಸೋರಿಕೆ

FDA ಸಾಮಾನ್ಯ ಪರೀಕ್ಷೆಯ ಕೀ ಆನ್ಸರ್ ಸೋರಿಕೆ ಪ್ರಕರಣದ ಬಗ್ಗೆ ವಿಜಯಪುರ ಅಪರ ಜಿಲ್ಲಾಧಿಕಾರಿ ರಮೇಶ್​ ಕಳಸದ್ ಸ್ಪಷ್ಟನೆ ಕೊಟ್ಟಿದ್ದಾರೆ.
ಘಟನೆ ಕುರಿತು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಂವೀಕ್ಷಕರು, ಸ್ಥಾನಿಕ ನಿರೀಕ್ಷಣಾಧಿಕಾರಿಯ ವಿಚಾರಣೆ ನಡೆಸಲಾಗುತ್ತಿದೆ.  JSS ಕಾಲೇಜಿನ ಜವಾನ ಆಯೂಬ್​ ಮುಜಾವರ್ ಜವಾನ‌ ಪರೀಕ್ಷಾರ್ಥಿಗೆ ಸಹಾಯ ಮಾಡಲು ಯತ್ನಿಸಿದ್ದಾನೆ. ಪರೀಕ್ಷೆ ಮುಗಿಯುವ 5 ನಿಮಿಷ ಮೊದಲೇ ಕೀ ಆನ್ಸರ್ ನೀಡಲು ಯತ್ನಿಸಿದ್ದಾನೆ. ಇದನ್ನ ಕಂಡ ಪರೀಕ್ಷಾ ಸಿಬ್ಬಂದಿ ಚೀಟಿ ವಶಕ್ಕೆ ಪಡೆದಿದ್ದಾರೆ. ಪರೀಕ್ಷಾರ್ಥಿ ಒಎಂಆರ್​ ಶೀಟ್​​ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪರೀಕ್ಷಾರ್ಥಿ 35 ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ. ಕೀ ಆನ್ಸರ್​ ಚೀಟಿಯಲ್ಲಿನ ಉತ್ತರ ಬರೆಯಲು ಬಿಟ್ಟಿಲ್ಲ ಎಂದು ಹೇಳಿದರು.

ಪರೀಕ್ಷಾರ್ಥಿಯ ಒಎಂಆರ್​ ಶೀಟ್ ಪ್ರತ್ಯೇಕಿಸಿ ಸೀಲ್​​ ಹಾಕಿ ಪರೀಕ್ಷಾ ದುರಾಚಾರವೆಂದು ವರದಿ ಮಾಡಿದ್ದೇವೆ. ಪರೀಕ್ಷಾ ನಿಯಂತ್ರಣಾಧಿಕಾರಿಗಳಿಂದ KPSCಗೆ ವರದಿ ಮಾಡಿದ್ದೇವೆ. ಜವಾನನ್ನು ಪೊಲೀಸರು ವಶಕ್ಕೆ ಪಡೆದು‌ ವಿಚಾರಿಸಿದ್ದಾರೆ. ಪರೀಕ್ಷಾರ್ಥಿ ಮಲಿಕ್​​ಷಾ ಕೊರಬು ಪರಾರಿಯಾಗಿದ್ದಾನೆ. ಪರಾರಿಯಾದ ಪರೀಕ್ಷಾರ್ಥಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ, ಸಂವಿಕ್ಷಕರು, ಗ್ರೂಪ್ ಡಿ ಸಿಬ್ಬಂದಿ ಮೇಲೆ ಕೇಸ್​ ದಾಖಲಿಸಲು ಸೂಚನೆ ನೀಡಿದ್ದಾರೆ. ಕೇಸ್​ ದಾಖಲಿಸಲು ಸ್ಥಾನಿಕ ನಿರೀಕ್ಷಣಾಧಿಕಾರಿಗೆ ಸೂಚಿಸಿದೆ ಎಂದು ವಿಜಯಪುರ ಅಪರ ಜಿಲ್ಲಾಧಿಕಾರಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಚಿನ್ನದ ನಾಡಲ್ಲಿ ಸರಗಳ್ಳರ ಹಾವಳಿ
ಅತ್ತ, ಕೋಲಾರ ಜಿಲ್ಲೆಯಲ್ಲಿ ಖದೀಮರು ಎರಡು ಕಡೆ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಒಂದೆಡೆ, ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಜಯಮಂಗಲ ಬಳಿ ಮಹಿಳೆಯ ಚಿನ್ನದ ಸರ ಕಸಿದು ಕಳ್ಳರು ಎಸ್ಕೇಪ್‌ ಆಗಿದ್ದರೆ ಮತ್ತೊಂದೆಡೆ ಗಂಗಾಪುರ ಬಳಿ ಮತ್ತೊಬ್ಬ ಮಹಿಳೆಯ ಸರ ಕಸಿದು ಪರಾರಿಯಾಗಿದ್ದಾರೆ. ಸರಗಳ್ಳರು ಎರಡೂ ಕಡೆ ಬೈಕ್‌ಗಳಲ್ಲಿ ಬಂದು ಕೃತ್ಯವೆಸಗಿದ್ದಾರೆ.

ಟ್ರ್ಯಾಕ್ಟರ್ ಪಲ್ಟಿಯಾಗಿ ಪಾದಚಾರಿ ಸ್ಥಳದಲ್ಲೇ ದುರ್ಮರಣ
ಟ್ರ್ಯಾಕ್ಟರ್ ಪಲ್ಟಿಯಾಗಿ ಪಾದಚಾರಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದಾಸೇನಹಳ್ಳಿ ಬಳಿ ನಡೆದಿದೆ. ಮಿಡಿಗೇಶಿಯ ದಾಸೇನಹಳ್ಳಿಯಲ್ಲಿ ವೀರೇಶ್ (16) ಮೃತ ಪಾದಚಾರಿ. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ದುರ್ಘಟನೆ ನಡೆದಿದೆ. ಬಡವನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸ್ಕೂಟಿಯಲ್ಲಿ ತೆರಳ್ತಿದ್ದಾಗ ಬಸ್ ಡಿಕ್ಕಿ: ಬರ್ತ್‌ಡೇ ದಿನವೇ ಮಸಣ ಸೇರಿದ ಯುವತಿ
ಬರ್ತ್‌ಡೇ ಆಚರಣೆಗೆ ಸ್ಕೂಟಿಯಲ್ಲಿ ತೆರಳ್ತಿದ್ದಾಗ ಬಸ್ ಡಿಕ್ಕಿಯಾದ ಪರಿಣಾಮ ಯುವತಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ದೇವಲಾಪೂರ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದೆ. ಅಪಘಾತದಲ್ಲಿ 15 ವರ್ಷದ ಯುವತಿ ನೇಹಾ ಮೃತಪಟ್ಟಿದ್ದರೆ, ತೇಜಸ್ವಿನಿ ಮತ್ತು ಗೌರಿ ಎಂಬುವವರಿಗೆ ಗಾಯಗಳಾಗಿದೆ.

ಗಾಯಾಳು ಯುವತಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬರ್ತ್‌ಡೇ ಆಚರಣೆಗೆ ಕಿನ್ನಾಳ ಡ್ಯಾಂಗೆ ತೆರಳ್ತಿದ್ದಾಗ ಅಪಘಾತ ಸಂಭವಿಸಿದೆ. ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಮನವೊಲಿಸಲು ವೇಣುಗೋಪಾಲ್​ರಿಂದ ‘ಜಾದೂ ಕೀ ಝಪ್ಪಿ’!.. KCV ಕಾರ್ಯತಂತ್ರ ವರ್ಕ್​ಔಟ್​ ಆಯ್ತಾ?

Published On - 7:13 pm, Sun, 28 February 21