ಎಸ್​.ಎಂ.ಕೃಷ್ಣ ವಿರುದ್ಧ ಅವಾಚ್ಯ ಪದ ಬಳಕೆ, ಪರಾಜಿತ ಕಾಂಗ್ರೆಸ್​ ಅಭ್ಯರ್ಥಿ ಆಂಜಿನಪ್ಪ ವಿರುದ್ಧ FIR

|

Updated on: Dec 13, 2019 | 8:39 AM

ಚಿಕ್ಕಬಳ್ಳಾಫುರ: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ. ಆಂಜಿನಪ್ಪ ವಿರುದ್ಧ ಎಪ್.ಐ.ಆರ್ ದಾಖಲಾಗಿದೆ. ಉಪ ಚುನಾವಣೆಯ ಹಿನ್ನೆಲೆ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಂಜಿನಪ್ಪ ಎಸ್ ಎಂ ಕೃಷ್ಣ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದರು. ಕಾಂಗ್ರೆಸ್‌ಗೆ ದ್ರೋಹ ಮಾಡುವುದನ್ನ ತಿಳಿಸಿದ್ದು ಎಸ್.ಎಂ ಕೃಷ್ಣ. ಅವನೊಬ್ಬ ಲೋಫರ್ ಎಂದು ಕಟುವಾಗಿ ಟೀಕಿಸಿದ್ದರು. ಹೀಗಾಗಿ ಎಸ್​ಎಂ ಕೃಷ್ಣ ಅಭಿಮಾನಿ ಶಂಕರಪ್ಪ ಎಂಬುವರರು ಆಂಜಿನಪ್ಪ ದೂರು […]

ಎಸ್​.ಎಂ.ಕೃಷ್ಣ ವಿರುದ್ಧ ಅವಾಚ್ಯ ಪದ ಬಳಕೆ, ಪರಾಜಿತ ಕಾಂಗ್ರೆಸ್​ ಅಭ್ಯರ್ಥಿ ಆಂಜಿನಪ್ಪ ವಿರುದ್ಧ FIR
Follow us on

ಚಿಕ್ಕಬಳ್ಳಾಫುರ: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ. ಆಂಜಿನಪ್ಪ ವಿರುದ್ಧ ಎಪ್.ಐ.ಆರ್ ದಾಖಲಾಗಿದೆ. ಉಪ ಚುನಾವಣೆಯ ಹಿನ್ನೆಲೆ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಂಜಿನಪ್ಪ ಎಸ್ ಎಂ ಕೃಷ್ಣ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದರು.

ಕಾಂಗ್ರೆಸ್‌ಗೆ ದ್ರೋಹ ಮಾಡುವುದನ್ನ ತಿಳಿಸಿದ್ದು ಎಸ್.ಎಂ ಕೃಷ್ಣ. ಅವನೊಬ್ಬ ಲೋಫರ್ ಎಂದು ಕಟುವಾಗಿ ಟೀಕಿಸಿದ್ದರು. ಹೀಗಾಗಿ ಎಸ್​ಎಂ ಕೃಷ್ಣ ಅಭಿಮಾನಿ ಶಂಕರಪ್ಪ ಎಂಬುವರರು ಆಂಜಿನಪ್ಪ ದೂರು ನೀಡಿದ್ದರು. ಈ ಹಿನ್ನೆಲೆ ಚಿಕ್ಕಬಳ್ಳಾಫುರ ಗ್ರಾಮಾಂತರ ಠಾಣೆಯಲ್ಲಿ ಕಲಂ. 153-504 ಐ.ಪಿ.ಸಿ ದಾಖಲಾಗಿದೆ.