ಹಣಕ್ಕಾಗಿ ಸರಗಳ್ಳತನ ಮಾಡುತ್ತಿದ್ದ ಪ್ರೇಮಿಗಳ ಬಂಧನ
ಬೆಂಗಳೂರು: ಹಣಕ್ಕಾಗಿ ಸರಗಳ್ಳತನ ಮಾಡುತ್ತಿದ್ದ ಪ್ರೇಮಿಗಳನ್ನ ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕುಂಬಳ ಗೋಡಿನ ಜೋಡಿ ಹರೀಶ್ ಮತ್ತು ಪ್ರಿಯತಮೆ ಭೂಮಿಕಾ ಬಂಧಿತ ಆರೋಪಿಗಳು. ಇವರಿಬ್ಬರು ಹಣಕ್ಕಾಗಿ ಕಾಲೇಜು ಯುವತಿಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದರು. ಈಗಾಗಲೇ ನಾಗರಬಾವಿ ಸೇರಿ 2 ಕಡೆ ಸರಗಳ್ಳತನ ಮಾಡಿದ್ದಾರೆ. ಅಕ್ಕಪಕ್ಕ ಮನೆಯಲ್ಲಿದ್ದಾಗ ಇಬ್ಬರಲ್ಲಿ ಪ್ರೀತಿ ಹುಟ್ಟಿದೆ. ಹರೀಶ ಮೊದಲಿನಿಂದಲೂ ಸರಗಳ್ಳತನದಲ್ಲಿ ಭಾಗಿಯಾಗಿದ್ದ, ಬಳಿಕ ಆತನ ಕೃತ್ಯಕ್ಕೆ ಪ್ರಿಯತಮೆ ಕೂಡ ಕೈ ಜೋಡಿಸಿದ್ದಾಳೆ. ಮೊದಲು ತಮ್ಮ ಸ್ವಂತ ಊರು ಕುಂಬಳ ಗೊಡಿನಲ್ಲಿ ಕೆಲವೆಡೆ […]
ಬೆಂಗಳೂರು: ಹಣಕ್ಕಾಗಿ ಸರಗಳ್ಳತನ ಮಾಡುತ್ತಿದ್ದ ಪ್ರೇಮಿಗಳನ್ನ ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕುಂಬಳ ಗೋಡಿನ ಜೋಡಿ ಹರೀಶ್ ಮತ್ತು ಪ್ರಿಯತಮೆ ಭೂಮಿಕಾ ಬಂಧಿತ ಆರೋಪಿಗಳು. ಇವರಿಬ್ಬರು ಹಣಕ್ಕಾಗಿ ಕಾಲೇಜು ಯುವತಿಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದರು. ಈಗಾಗಲೇ ನಾಗರಬಾವಿ ಸೇರಿ 2 ಕಡೆ ಸರಗಳ್ಳತನ ಮಾಡಿದ್ದಾರೆ.
ಅಕ್ಕಪಕ್ಕ ಮನೆಯಲ್ಲಿದ್ದಾಗ ಇಬ್ಬರಲ್ಲಿ ಪ್ರೀತಿ ಹುಟ್ಟಿದೆ. ಹರೀಶ ಮೊದಲಿನಿಂದಲೂ ಸರಗಳ್ಳತನದಲ್ಲಿ ಭಾಗಿಯಾಗಿದ್ದ, ಬಳಿಕ ಆತನ ಕೃತ್ಯಕ್ಕೆ ಪ್ರಿಯತಮೆ ಕೂಡ ಕೈ ಜೋಡಿಸಿದ್ದಾಳೆ. ಮೊದಲು ತಮ್ಮ ಸ್ವಂತ ಊರು ಕುಂಬಳ ಗೊಡಿನಲ್ಲಿ ಕೆಲವೆಡೆ ಸರಗಳ್ಳನ ಮಾಡಿ ನಂತರ ಬೆಂಗಳೂರಿನಲ್ಲಿ ಕೃತ್ಯ ಎಸಗಿ ಲಾಕ್ ಆಗಿದ್ದಾರೆ. ಬಂಧಿತ ಜೋಡಿ ಬಳಿಯಿದ್ದ 44 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.