ಮರುಭೂಮಿ ಹಲ್ಲಿಗಳನ್ನ ಮಾರಾಟ ಮಾಡಲು ಯತ್ನ, ಆರೋಪಿಗಳು ಪೊಲೀಸರ ಬಲೆಗೆ
ಬೆಂಗಳೂರು: ಮರುಭೂಮಿ ಹಲ್ಲಿಗಳನ್ನ ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಮಲ್ಲರಾಜ್, ಗೋಪಿ, ಕರ್ಣ, ಎ.ಶಕ್ತಿ, ಐವತ್ತರೆಡ್ಡಿ ಬಂಧಿತ ಆರೋಪಿಗಳು. ರಾಜಸ್ಥಾನದ ಮರಳುಗಾಡಿನ ಹಲ್ಲಿಗಳು: ಆರೋಪಿಗಳು ರಾಜಸ್ಥಾನದ ಮರಳುಗಾಡಿನಿಂದ ಹಲ್ಲಿಗಳನ್ನ ಹಿಡಿದು ತಂದಿದ್ದರು. ಇವು ಮರುಭೂಮಿಯಲ್ಲಿ ಮಾತ್ರ ಕಂಡುಬರುವ ವಿಶಿಷ್ಠ ಹಲ್ಲಿಗಳಾಗಿವೆ. ಈ ಹಲ್ಲಿಗಳ ಬಾಲದಿಂದ ದ್ರವ ಹೊರತೆಗೆದು ಔಷಧಿ ಪದಾರ್ಥವಾಗಿ ಬಳಸಲಾಗುತ್ತದೆ. ಬಂಧಿತರು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಆರೋಪಿಗಳಿಂದ 10 ಮರುಭೂಮಿ ಹಲ್ಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ ಹಲ್ಲಿಗಳನ್ನ […]
ಬೆಂಗಳೂರು: ಮರುಭೂಮಿ ಹಲ್ಲಿಗಳನ್ನ ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಮಲ್ಲರಾಜ್, ಗೋಪಿ, ಕರ್ಣ, ಎ.ಶಕ್ತಿ, ಐವತ್ತರೆಡ್ಡಿ ಬಂಧಿತ ಆರೋಪಿಗಳು.
ರಾಜಸ್ಥಾನದ ಮರಳುಗಾಡಿನ ಹಲ್ಲಿಗಳು: ಆರೋಪಿಗಳು ರಾಜಸ್ಥಾನದ ಮರಳುಗಾಡಿನಿಂದ ಹಲ್ಲಿಗಳನ್ನ ಹಿಡಿದು ತಂದಿದ್ದರು. ಇವು ಮರುಭೂಮಿಯಲ್ಲಿ ಮಾತ್ರ ಕಂಡುಬರುವ ವಿಶಿಷ್ಠ ಹಲ್ಲಿಗಳಾಗಿವೆ. ಈ ಹಲ್ಲಿಗಳ ಬಾಲದಿಂದ ದ್ರವ ಹೊರತೆಗೆದು ಔಷಧಿ ಪದಾರ್ಥವಾಗಿ ಬಳಸಲಾಗುತ್ತದೆ. ಬಂಧಿತರು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಆರೋಪಿಗಳಿಂದ 10 ಮರುಭೂಮಿ ಹಲ್ಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ ಹಲ್ಲಿಗಳನ್ನ ನೀಡಿದ್ದ ಮತ್ತೋರ್ವ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
Published On - 3:49 pm, Thu, 12 December 19