ಕಲಾಸಿಪಾಳ್ಯ: ಲಾಕ್​ಡೌನ್ ಉಲ್ಲಂಘನೆ, ಕಾರ್ಪೊರೇಟರ್ ಪತಿ ಮತ್ತು ಮಗ ಸೇರಿ ಹಲವರ ವಿರುದ್ಧ FIR

ಬೆಂಗಳೂರು: ಕಲಾಸಿಪಾಳ್ಯದಲ್ಲಿ ನಡೆದ ಪ್ರತಿಭಟನೆ ಸಂಬಂಧಿಸಿ ಕಾರ್ಪೊರೇಟರ್ ಪತಿ ಹಾಗೂ ಮಗ ಸೇರಿ ಹಲವರ ವಿರುದ್ಧ ಎನ್​ಡಿಎಂಎ ಅಡಿ ಕಲಾಸಿಪಾಳ್ಯ ಠಾಣೆಯಲ್ಲಿ FIR ದಾಖಲಾಗಿದೆ. ಕಲಾಸಿಪಾಳ್ಯದಲ್ಲಿ ತಪಾಸಣೆಗೆಂದು ಬಂದಿದ್ದ ಕಲಾಸಿಪಾಳ್ಯ ಕಾರ್ಪೊರೇಟರ್ ಪ್ರತಿಭಾ ಪತಿ ಧನರಾಜ್ ಮೇಲೆ ಕೆಲವರು ಸಗಣಿ ಎರಚಿದ್ದರು. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧನರಾಜ್ ಬೆಂಬಲಿಗರು ಗುಂಪು ಗುಂಪಾಗಿ ರಸ್ತೆ ಮಧ್ಯೆಯೇ ಪ್ರತಿಭಟನೆ ನಡೆಸಿದ್ದರು. ಧರಣಿ ವೇಳೆ ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸೆಕ್ಷನ್ 143 ಉಲ್ಲಂಘಿಸಿದ್ದಾರೆ ಎಂದು ಕಾರ್ಪೊರೇಟರ್ […]

ಕಲಾಸಿಪಾಳ್ಯ: ಲಾಕ್​ಡೌನ್ ಉಲ್ಲಂಘನೆ, ಕಾರ್ಪೊರೇಟರ್ ಪತಿ ಮತ್ತು ಮಗ ಸೇರಿ ಹಲವರ ವಿರುದ್ಧ FIR

Updated on: May 15, 2020 | 11:09 AM

ಬೆಂಗಳೂರು: ಕಲಾಸಿಪಾಳ್ಯದಲ್ಲಿ ನಡೆದ ಪ್ರತಿಭಟನೆ ಸಂಬಂಧಿಸಿ ಕಾರ್ಪೊರೇಟರ್ ಪತಿ ಹಾಗೂ ಮಗ ಸೇರಿ ಹಲವರ ವಿರುದ್ಧ ಎನ್​ಡಿಎಂಎ ಅಡಿ ಕಲಾಸಿಪಾಳ್ಯ ಠಾಣೆಯಲ್ಲಿ FIR ದಾಖಲಾಗಿದೆ.

ಕಲಾಸಿಪಾಳ್ಯದಲ್ಲಿ ತಪಾಸಣೆಗೆಂದು ಬಂದಿದ್ದ ಕಲಾಸಿಪಾಳ್ಯ ಕಾರ್ಪೊರೇಟರ್ ಪ್ರತಿಭಾ ಪತಿ ಧನರಾಜ್ ಮೇಲೆ ಕೆಲವರು ಸಗಣಿ ಎರಚಿದ್ದರು. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧನರಾಜ್ ಬೆಂಬಲಿಗರು ಗುಂಪು ಗುಂಪಾಗಿ ರಸ್ತೆ ಮಧ್ಯೆಯೇ ಪ್ರತಿಭಟನೆ ನಡೆಸಿದ್ದರು.

ಧರಣಿ ವೇಳೆ ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸೆಕ್ಷನ್ 143 ಉಲ್ಲಂಘಿಸಿದ್ದಾರೆ ಎಂದು ಕಾರ್ಪೊರೇಟರ್ ಪತಿ, ಮಗ ಸೇರಿ ಹಲವರ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ FIR ದಾಖಲಾಗಿದೆ. ಹಾಗೂ ಧನರಾಜ್ ಮೇಲೆ ಸಗಣಿ ಎಸೆದವರ ಮೇಲೂ FIR ದಾಖಲಿಸಲಾಗಿದೆ.

Published On - 9:40 am, Fri, 15 May 20