ಕೊರೊನಾ ವಾರಿಯರ್ಸ್​ಗಿಲ್ಲ ಅನುಕೂಲ, ಕಷ್ಟ ಹೇಳಿಕೊಂಡು ಕಣ್ಣೀರಾದ ನರ್ಸ್

ಸಾಧು ಶ್ರೀನಾಥ್​

|

Updated on:May 15, 2020 | 12:22 PM

ಬೆಂಗಳೂರು: ಕೊರೊನಾ ವೈರಸ್​ನ ಕಟ್ಟಿ ಹಾಕಲು ಮೆಡಿಕಲ್ ವಾರಿಯರ್ಸ್​ ಸತತ ಪ್ರಯತ್ನದಲ್ಲಿದ್ದಾರೆ. ತಮ್ಮ ಮನೆ-ಮಠ ಏನನ್ನೂ ಚಿಂತಿಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅಂತಹ ಮೆಡಿಕಲ್ ವಾರಿಯರ್ಸ್​ಗೆ ಸರ್ಕಾರ ಯಾವುದೇ ರೀತಿಯ ಅನುಕೂಲಗಳನ್ನು ನೀಡುತ್ತಿಲ್ಲ. ಕೊರೊನಾ ಸೇನಾನಿಗಳ ಈ ದುಃಸ್ಥಿತಿ ಬಯಲಿಗೆ ಬಂದಿದೆ. ಆರೋಗ್ಯ ಇಲಾಖೆಯ ಲೋಪ ಬಿಚ್ಚಿಟ್ಟ ನರ್ಸ್, ಟಿವಿ9 ವಾಹಿನಿಯ ವಾಹನದಲ್ಲೇ ಡ್ರಾಪ್: ಮಂಗಮ್ಮನಪಾಳ್ಯದ ಮದೀನಾ ನಗರದಲ್ಲಿ ಕೆಲಸ ಮಾಡುವ ನರ್ಸ್ ಒಬ್ಬರು ಆರೋಗ್ಯ ಇಲಾಖೆ ಅವ್ಯವಸ್ಥೆ ನೆನೆದು ಕಣ್ಣೀರಾಕಿದ್ದಾರೆ. ನಮಗೆ ಕಿಟ್ ಇಲ್ಲ. […]

ಕೊರೊನಾ ವಾರಿಯರ್ಸ್​ಗಿಲ್ಲ ಅನುಕೂಲ, ಕಷ್ಟ ಹೇಳಿಕೊಂಡು ಕಣ್ಣೀರಾದ ನರ್ಸ್

ಬೆಂಗಳೂರು: ಕೊರೊನಾ ವೈರಸ್​ನ ಕಟ್ಟಿ ಹಾಕಲು ಮೆಡಿಕಲ್ ವಾರಿಯರ್ಸ್​ ಸತತ ಪ್ರಯತ್ನದಲ್ಲಿದ್ದಾರೆ. ತಮ್ಮ ಮನೆ-ಮಠ ಏನನ್ನೂ ಚಿಂತಿಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅಂತಹ ಮೆಡಿಕಲ್ ವಾರಿಯರ್ಸ್​ಗೆ ಸರ್ಕಾರ ಯಾವುದೇ ರೀತಿಯ ಅನುಕೂಲಗಳನ್ನು ನೀಡುತ್ತಿಲ್ಲ. ಕೊರೊನಾ ಸೇನಾನಿಗಳ ಈ ದುಃಸ್ಥಿತಿ ಬಯಲಿಗೆ ಬಂದಿದೆ.

ಆರೋಗ್ಯ ಇಲಾಖೆಯ ಲೋಪ ಬಿಚ್ಚಿಟ್ಟ ನರ್ಸ್, ಟಿವಿ9 ವಾಹಿನಿಯ ವಾಹನದಲ್ಲೇ ಡ್ರಾಪ್: ಮಂಗಮ್ಮನಪಾಳ್ಯದ ಮದೀನಾ ನಗರದಲ್ಲಿ ಕೆಲಸ ಮಾಡುವ ನರ್ಸ್ ಒಬ್ಬರು ಆರೋಗ್ಯ ಇಲಾಖೆ ಅವ್ಯವಸ್ಥೆ ನೆನೆದು ಕಣ್ಣೀರಾಕಿದ್ದಾರೆ. ನಮಗೆ ಕಿಟ್ ಇಲ್ಲ. ಮಾಸ್ಕ್ ಕೊಟ್ಟು 4 ದಿನ ಆಗಿದೆ ಎಂದು ಆರೋಗ್ಯ ಇಲಾಖೆಯ ಲೋಪವನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ರಾತ್ರಿ ವೇಳೆಯೂ ಮಹಿಳಾ ಸಿಬ್ಬಂದಿ ಕೆಲಸ ಮಾಡ್ಬೇಕು. ಅವರಿಗೆ ಯಾವುದೇ ಭದ್ರತೆ ನೀಡಿಲ್ಲ. ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದ ನರ್ಸ್​ನನ್ನು ಅಧಿಕಾರಿಗಳು ಕರೆ ಮಾಡಿ ಮಂಗಮ್ಮನಪಾಳ್ಯದಲ್ಲಿ ಸೋಂಕಿನ ಶಂಕೆ ಇದೆ. ಹೋಗಿ ಸಂಪರ್ಕಿತರ ಮಾಹಿತಿ ತಗೊಂಡು ಬನ್ನಿ ಎಂದಿದ್ದಾರೆ. ಆದರೆ ನರ್ಸ್​ಗೆ ಯಾವುದೇ ಭದ್ರತೆ ನೀಡಿಲ್ಲ. ರಾತ್ರಿ 9 ಗಂಟೆಯಾದ್ರು ಮನೆಗೆ ಹೋಗಲು ವಾಹನ ಕೂಡ ಸಿಗದೆ ಟಿವಿ9 ವಾಹಿನಿಯ ವಾಹನದಲ್ಲೇ ಡ್ರಾಪ್ ಮಾಡಲಾಗಿದೆ.

ಸರ್ವೆ ಮಾಡುವ ಸಿಬ್ಬಂದಿಗೆ ಪಿಪಿಇ ಕಿಟ್ ಕೊಡಲ್ಲ: ಜೀವ ಉಳಿಸುವ ಕೆಲಸ ಮಾಡುತ್ತಿರುವವರ ಜೀವನದ ಜೊತೆ ಅಧಿಕಾರಿಗಳು ಆಟ ಆಡ್ತಿದ್ದಾರೆ. ಇಲ್ಲಿ ಇವರು ಕಷ್ಟಪಟ್ಟು ಡೇಟಾ ಕಲೆಕ್ಟ್ ಮಾಡಿದರೆ.. ಅಲ್ಲಿ ಎಸಿ ರೂಮಲ್ಲಿದ್ದು ಅಧಿಕಾರಿಗಳು ಮಾಹಿತಿ ಪಡೆಯುತ್ತಾರೆ. ಸರ್ಕಾರ ಪಿಪಿಇ ಕಿಟ್​ಗೆ ಕೋಟಿ ಕೋಟಿ ಖರ್ಚು ಮಾಡುತ್ತೆ. ಆದ್ರೆ ಸೋಂಕಿತರಿರೋ ಏರಿಯಾಗೆ ಹೋಗೋರಿಗೆ, ಅಲ್ಲಿ ಸರ್ವೆ ಮಾಡುವ ಸಿಬ್ಬಂದಿಗೆ ಪಿಪಿಇ ಕಿಟ್ ಕೊಡಲ್ಲ. ಇಂತಹ ಕೆಟ್ಟ ಪರಿಸ್ಥಿತಿ ಯಾರಿಗೂ ಬೇಡ. ರಾತ್ರಿ 9 ಗಂಟೆ ಆದ್ರೂ ಒಬ್ಬರೇ ಹೋಗಬೇಕು. ಸೋಂಕಿತರ ಮನೆ ಬಳಿ ಹೋಗಿ ಸಂಪರ್ಕಿತರ ಮಾಹಿತಿ ಸಂಗ್ರಹಿಸಿ ಮೇಲಧಿಕಾರಿಗಳಿಗೆ ಕೊಡಬೇಕು. ರಾತ್ರಿ ವಾಪಸ್ ಹೋಗೋಕೆ ವಾಹನ ವ್ಯವಸ್ಥೆಯೂ ಇಲ್ಲ ಎಂದು ಆರೋಗ್ಯ ಇಲಾಖೆ ವಿರುದ್ಧ ನರ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada