ಹಳೆಯ ದ್ವೇಷ: ಮಾರಕಾಸ್ತ್ರಗಳಿಂದ ಅಟ್ಯಾಕ್! ಪುಡಿ ರೌಡಿಗಳ ಪುಂಡಾಟ
ಕಲಬುರಗಿ: ಮಾರಕಾಸ್ತ್ರಗಳನ್ನ ಹಿಡಿದು ಪುಡಿ ರೌಡಿಗಳು ಪುಂಡಾಟ ನಡೆಸಿರುವ ಘಟನೆ ಕಲಬುರಗಿಯ ಶಿವಾಜಿನಗರದಲ್ಲಿ ನಡೆದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ತಲೆಕೆಡಿಸಿಕೊಂಡಿದ್ದ ಪುಂಡರು ಮಾರಕಾಸ್ತ್ರಗಳನ್ನ ಹಿಡಿದು ದಾಳಿ ನಡೆಸಿದ್ದಾರೆ. ಹೈದರಾಬಾದ್ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಂದಕುಮಾರ್ ನಾಗಭುಜಂ ಕಚೇರಿಗೆ ನುಗ್ಗಿ ನಂದಕುಮಾರ್ ಹಾಗೂ ಆತನ ಸಹೋದರನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕಚೇರಿ ಧ್ವಂಸ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಸದ್ಯ ನಂದಕುಮಾರ್ ಮತ್ತು ಆತನ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದು, ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಲಬುರಗಿ: ಮಾರಕಾಸ್ತ್ರಗಳನ್ನ ಹಿಡಿದು ಪುಡಿ ರೌಡಿಗಳು ಪುಂಡಾಟ ನಡೆಸಿರುವ ಘಟನೆ ಕಲಬುರಗಿಯ ಶಿವಾಜಿನಗರದಲ್ಲಿ ನಡೆದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ತಲೆಕೆಡಿಸಿಕೊಂಡಿದ್ದ ಪುಂಡರು ಮಾರಕಾಸ್ತ್ರಗಳನ್ನ ಹಿಡಿದು ದಾಳಿ ನಡೆಸಿದ್ದಾರೆ.
ಹೈದರಾಬಾದ್ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಂದಕುಮಾರ್ ನಾಗಭುಜಂ ಕಚೇರಿಗೆ ನುಗ್ಗಿ ನಂದಕುಮಾರ್ ಹಾಗೂ ಆತನ ಸಹೋದರನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕಚೇರಿ ಧ್ವಂಸ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಸದ್ಯ ನಂದಕುಮಾರ್ ಮತ್ತು ಆತನ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದು, ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.