ಕೊಡವರು ಗೋಮಾಂಸ ತಿಂತಾರೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲು

| Updated By: shruti hegde

Updated on: Jan 08, 2021 | 3:52 PM

ಕೆಲ ವಾರಗಳ ಹಿಂದೆ ಮೈಸೂರಿನಲ್ಲಿ ಸಿದ್ದರಾಮಯ್ಯ, ಕೊಡವರು ಗೋಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಟೀಕೆ, ಆಕ್ರೋಶಕ್ಕೆ ಗುರಿಯಾಗಿತ್ತು. ಆದ್ರೆ ಈಗ ರವಿ ಕುಶಾಲಪ್ಪ ಎಂಬುವವರು ಸಿದ್ದರಾಮಯ್ಯನ ವಿರುದ್ಧ ಕೊಡವರ ಭಾವನೆಗೆ ಧಕ್ಕೆಯಾಗಿದೆ ಎಂದು ದೂರು ದಾಖಲಿಸಿದ್ದಾರೆ.

ಕೊಡವರು ಗೋಮಾಂಸ ತಿಂತಾರೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲು
ಸ್ನೇಹಿತನ ಮನೆಯಲ್ಲಿ ಬಾಡೂಟ ಸವಿದ ಸಿದ್ದರಾಮಯ್ಯ
Follow us on

ಮಡಿಕೇರಿ: ಕೊಡವರು ಗೋಮಾಂಸ ತಿನ್ನುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ ಎಂಬುವವರು ದೂರು ದಾಖಲಿಸಿದ್ದಾರೆ.

ಕೆಲ ವಾರಗಳ ಹಿಂದೆ ಮೈಸೂರಿನಲ್ಲಿ ಸಿದ್ದರಾಮಯ್ಯ, ಕೊಡವರು ಗೋಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಟೀಕೆ, ಆಕ್ರೋಶಕ್ಕೆ ಗುರಿಯಾಗಿತ್ತು. ಆದ್ರೆ ಈಗ ರವಿ ಕುಶಾಲಪ್ಪ ಎಂಬುವವರು ಸಿದ್ದರಾಮಯ್ಯನ ವಿರುದ್ಧ ಕೊಡವರ ಭಾವನೆಗೆ ಧಕ್ಕೆಯಾಗಿದೆ ಎಂದು ದೂರು ದಾಖಲಿಸಿದ್ದಾರೆ.

ದೂರು ಆಧರಿಸಿ ಕಲಂ ಐಪಿಸಿ 153 ಅನ್ವಯ FIR ದಾಖಲಾಗಿದೆ. ಆದ್ರೆ ಇನ್ನೂ ಕಠಿಣವಾದ ಸೆಕ್ಷನ್ ಅಡಿ FIR ದಾಖಲಿಸಲು ಆಗ್ರಹಿಸಿದ್ದಾರೆ. ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ಬಹಿರಂಗ ಕ್ಷಮೆ ಕೇಳಿದರೂ ನಾವು ಕ್ಷಮಿಸಲ್ಲ ಎಂದು ಮಡಿಕೇರಿಯಲ್ಲಿ ರವಿ ಕುಶಾಲಪ್ಪ ಹೇಳಿದ್ದಾರೆ.

‘ಮಾಂಸ ತಿಂದ್ರೆ ಏನು? ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ?.. ನನ್ನ ವಿರುದ್ಧ ಏನು ವ್ಯಾಖ್ಯಾನಗಳು !’

Published On - 2:32 pm, Fri, 8 January 21