ಅತಿಥಿ ಉಪನ್ಯಾಸಕರ ಹಣ ಕಬಳಿಸಿದ ಪ್ರಾಂಶುಪಾಲ; FIR ದಾಖಲು

ಅತಿಥಿ ಉಪನ್ಯಾಸಕರ ಸಂಬಳವನ್ನ ಅಕ್ರಮವಾಗಿ ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡುವ ಜೊತೆಗೆ ಕಾಲೇಜು ಅಭಿವೃದ್ಧಿ ಹೆಸರಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆಯುವ ಮೂಲಕ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅತಿಥಿ ಉಪನ್ಯಾಸಕರ ಹಣ ಕಬಳಿಸಿದ ಪ್ರಾಂಶುಪಾಲ; FIR ದಾಖಲು
ಎಫ್​ಡಿಎ ಸುನೀಲ್ ಕೂರ್ಗಿ (ಎಡ) ಪ್ರಾಂಶುಪಾಲ ಅಲ್ಲಮಪ್ರಭು (ಬಲ)
Updated By: Lakshmi Hegde

Updated on: Dec 19, 2020 | 10:33 AM

ತುಮಕೂರು: ಅತಿಥಿ ಉಪನ್ಯಾಸಕರ ಹಣವನ್ನು ಕಬಳಿಸಿದ ಆರೋಪದಡಿ ತಿಪಟೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಅಲ್ಲಮಪ್ರಭು ವಿರುದ್ಧ ಎಫ್ಐಆರ್ ದಾಖಲಾಗಿದೆ.

ಅತಿಥಿ ಉಪನ್ಯಾಸಕರ ಸಂಬಳವನ್ನ ಅಕ್ರಮವಾಗಿ ತಮ್ಮ ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡುವ ಜೊತೆಗೆ ಕಾಲೇಜು ಅಭಿವೃದ್ಧಿ ಹೆಸರಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆಯುವ ಮೂಲಕ ಸುಮಾರು 40 ಲಕ್ಷ ರೂ.ಗೂ ಹೆಚ್ಚು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಫ್​ಡಿಎ ಸುನೀಲ್​ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ತುಮಕೂರು ಎಸಿಬಿ ಅಧಿಕಾರಿಗಳು ತನಿಖೆಗೆ ನಡೆಸುವಂತೆ ಆದೇಶ ನೀಡಿದ್ದಾರೆ..

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು:

 

ಮಾಜಿ ಕಾರ್ಪೋರೇಟರ್ ಗಾಯತ್ರಿ ವಿರುದ್ಧ FIR