ಬೆಂಗಳೂರು: ಫೀಸ್ ಕಟ್ಟದ್ದಕ್ಕೆ ಆನ್ಲೈನ್ ಕ್ಲಾಸ್ ಬಂದ್ ಮಾಡಿದ ಹಿನ್ನೆಲೆಯಲ್ಲಿ ಕೆಂಪೇಗೌಡನಗರ ಬಳಿಯಿರುವ ನಾರಾಯಣ E ಟೆಕ್ನೋ ಶಾಲೆ ಬಳಿ ಪೋಷಕರ ಪ್ರತಿಭಟನೆ ನಡೆಸಿದರು. ಈ ಮಧ್ಯೆ, ಪ್ರತಿಭಟನೆ ವೇಳೆ ಶಿಕ್ಷಕರ ಮೇಲೆ ಪೋಷಕರೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ಶಾಲಾ ಸಿಬ್ಬಂದಿ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಮಹಾಲಕ್ಷ್ಮೀ ಲೇಔಟ್ ಠಾಣೆಗೆ ಶಾಲಾ ಸಿಬ್ಬಂದಿ ದೂರು ಸಲ್ಲಿಸಿದ್ದಾರೆ. ತ್ರಿಲೋಕೇಶ್ ಎಂಬ ಪೋಷಕರು ಶಿಕ್ಷಕರನ್ನ ಥಳಿಸಿದ್ದಾರೆ ಎಂದು ಶಾಲಾ ಸಿಬ್ಬಂದಿ ತಮ್ಮ ದೂರಿನಲ್ಲಿ ಆರೋಪ ಮಾಡಿದ್ದಾರೆ. ಹಾಗಾಗಿ, ತ್ರಿಲೋಕೇಶ್ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ FIR ದಾಖಲಾಗಿದೆ.
ಬ್ರಿಟನ್‌ನಿಂದ ಬಂದಿದ್ದ 121 ಜನರು ಇನ್ನೂ ಪತ್ತೆಯಾಗಿಲ್ಲ -BBMPಯಿಂದ ಕಳವಳಕಾರಿ ಮಾಹಿತಿ ಬಿಡುಗಡೆ