ಮೀನುಗಾರರ ರಕ್ಷಣೆಗೆ ಬೋಟ್ ಆ್ಯಂಬುಲೆನ್ಸ್ ತರಲು ಸರ್ಕಾರ ಚಿಂತನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

| Updated By: ರಶ್ಮಿ ಕಲ್ಲಕಟ್ಟ

Updated on: Jan 08, 2021 | 5:16 PM

ಕಡಲಿನಲ್ಲಿ ತೊಂದರೆಗೆ ಒಳಗಾಗುವ ಮೀನುಗಾರರ ರಕ್ಷಣೆಗೆಂದು ಬೋಟ್ ಆ್ಯಂಬುಲೆನ್ಸ್ ತರಲು ಚಿಂತನೆ ನಡೆಸಲಾಗಿದೆ. ಈವರೆಗೂ ಚೀನಾ ನಿರ್ಮಿತ ಯಂತ್ರಗಳನ್ನು ಬಳಸಲಾಗುತ್ತಿತ್ತು. ಇದರ ಪರ್ಯಾಯವಾಗಿ ಸ್ವದೇಶಿ ನಿರ್ಮಿತ ಯಂತ್ರ ಬಳಕೆಗೆ ಸರ್ಕಾರ ಮುಂದಾಗಿದೆ.

ಮೀನುಗಾರರ ರಕ್ಷಣೆಗೆ ಬೋಟ್ ಆ್ಯಂಬುಲೆನ್ಸ್ ತರಲು ಸರ್ಕಾರ ಚಿಂತನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ
Follow us on

ಬೆಂಗಳೂರು: ಯಾಂತ್ರಿಕೃತ ಮೀನುಗಾರಿಕಾ ಬೋಟುಗಳಲ್ಲಿ ಇದುವರೆಗೆ ಶೇ. 90ರಷ್ಟು ಚೀನಾ ನಿರ್ಮಿತ ಯಂತ್ರಗಳನ್ನು ಬಳಸಲಾಗುತ್ತಿತ್ತು. ಇದನ್ನು ತಪ್ಪಿಸಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಸ್ವದೇಶಿ ನಿರ್ಮಿತ ಯಂತ್ರಗಳ ಬಳಕೆಗೆ ಸರ್ಕಾರ ಮುಂದಾಗಿದೆ ಎಂದು ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ.

ಕಡಲಿನಲ್ಲಿ ತೊಂದರೆಗೆ ಒಳಗಾಗುವ ಮೀನುಗಾರರ ರಕ್ಷಣೆಗೆಂದು ಬೋಟ್ ಆ್ಯಂಬುಲೆನ್ಸ್ ತರಲು ಚಿಂತನೆ ನಡೆಸಲಾಗಿದೆ. ಈವರೆಗೂ ಚೀನಾ ನಿರ್ಮಿತ ಯಂತ್ರಗಳನ್ನು ಬಳಸಲಾಗುತ್ತಿತ್ತು. ಇದರ ಪರ್ಯಾಯವಾಗಿ ಸ್ವದೇಶಿ ನಿರ್ಮಿತ ಯಂತ್ರ ಬಳಕೆಗೆ ಸರ್ಕಾರ ಮುಂದಾಗಿದ್ದು ಇನ್ನುಮುಂದೆ, ಸೀಮೆ ಎಣ್ಣೆ ಬಳಸುತ್ತಿರುವ ನಾಡದೋಣಿಗಳಲ್ಲಿ ಗ್ಯಾಸ್ ಎಂಜಿನ್ ಬಳಸಲಾಗುತ್ತದೆ ಎಂದಿದ್ದಾರೆ.

ಜನವರಿಯಿಂದ ಮುಜರಾಯಿ ದೇವಸ್ಥಾನಳಲ್ಲಿ ಕಾರ್ಯಕ್ರಮಗಳಿಗೆ ಚಾಲನೆ: 

ಕೊರೊನಾ ಕಾರಣಕ್ಕೆ ಮುಜರಾಯಿ ದೇವಸ್ಥಾನಕ್ಕೆ ಶೇಕಡಾ 50ರಷ್ಟು ನಷ್ಟವಾಗಿದೆ. ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸರಳ ವಿವಾಹ ಕಾರ್ಯಕ್ರಮವೆಂದು ಪುನರ್ ನಾಮಕರಣ ಮಾಡಿ ಆಡಳಿತ ಮಂಡಳಿಗಳು ವಿವಾಹ ಕಾರ್ಯಕ್ರಮ ನೆರವೇರಿಸಲು ಜನವರಿಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಮುಜರಾಯಿ ದೇವಸ್ಥಾನಗಳಲ್ಲಿ ಇನ್ನು ಮುಂದೆ ಸರ್ಕಾರಿ ಶಾದಿ ಭಾಗ್ಯ

Published On - 5:09 pm, Fri, 8 January 21