AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಟ್​ ಹಿಡಿದು ಸಕ್ರಿಯ ರಾಜಕೀಯಕ್ಕೆ ರೀಎಂಟ್ರಿ ಕೊಟ್ರ ಸಂತೋಷ್ ಲಾಡ್! ಕಾಂಗ್ರೆಸ್ಸಿಗೋ ಫುಲ್ ಕನ್ಫ್ಯೂಶನ್

ಕಲಘಟಗಿ ವ್ಯಾಪ್ತಿಯಲ್ಲಿ ಬರುವ ಗ್ರಾಮವೊಂದರ ಚಿಕ್ಕ ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ನೋಡಿದ ಸಂತೋಷ್ ಲಾಡ್ ಕಾರನ್ನು ನಿಲ್ಲಿಸಿ ಮೈದಾನಕ್ಕಿಳಿದರು. ಸಂತೋಷ್ ಲಾಡ್ ಬರುವುದನ್ನು ನೋಡಿದ ಯುವಕರು ಜೋರಾಗಿ ಸಿಳ್ಳೆ ಕೇಕೆ ಹೊಡೆದು ಬರಮಾಡಿಕೊಂಡರು.

ಬ್ಯಾಟ್​ ಹಿಡಿದು ಸಕ್ರಿಯ ರಾಜಕೀಯಕ್ಕೆ ರೀಎಂಟ್ರಿ ಕೊಟ್ರ ಸಂತೋಷ್ ಲಾಡ್! ಕಾಂಗ್ರೆಸ್ಸಿಗೋ ಫುಲ್ ಕನ್ಫ್ಯೂಶನ್
ಮಾಜಿ ಸಚಿವ ಸಂತೋಷ್ ಲಾಡ್
sandhya thejappa
| Edited By: |

Updated on: Jan 08, 2021 | 4:53 PM

Share

ಹುಬ್ಬಳ್ಳಿ: 2018ರ ಅಸೆಂಬ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಿಂದ ಸೋತ ಮೇಲೆ ದೂರವಾಗಿದ್ದ ಮಾಜಿ ಸಚಿವ ಸಂತೋಷ್ ಲಾಡ್ ಮತ್ತೆ ಕ್ಷೇತ್ರಕ್ಕೆ ಹತ್ತಿರವಾಗುತ್ತಿದ್ದಾರೆ. ಆಗಿದಾಂಗ್ಗೆ ಕ್ಷೇತ್ರದ ಪ್ರವಾಸ ಕೈಗೊಳ್ಳುವ ಸಂತೋಷ ಲಾಡ್ ಕ್ಷೇತ್ರದ ಜನರೊಂದಿಗೆ ಬೆರೆಯುತ್ತಿದ್ದಾರೆ. ಕಲಘಟಗಿ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುನ್ನ ದಾರಿ ಮಧ್ಯದಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಡುವ ಮೂಲಕವೂ ಗಮನ ಸೆಳೆದಿದ್ದಾರೆ.

ಕಲಘಟಗಿ ವ್ಯಾಪ್ತಿಯಲ್ಲಿ ಬರುವ ಗ್ರಾಮವೊಂದರ ಚಿಕ್ಕ ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ನೋಡಿದ ಸಂತೋಷ್ ಲಾಡ್ ಕಾರನ್ನು ನಿಲ್ಲಿಸಿ ಮೈದಾನಕ್ಕಿಳಿದರು. ಸಂತೋಷ್ ಲಾಡ್ ಬರುವುದನ್ನು ನೋಡಿದ ಯುವಕರು ಜೋರಾಗಿ ಸಿಳ್ಳೆ ಕೇಕೆ ಹೊಡೆದು ಬರಮಾಡಿಕೊಂಡರು. ಬರುತ್ತಿದ್ದಂತೆ ಬ್ಯಾಟ್ ಹಿಡಿದ ಸಂತೋಷ್ ಲಾಡ್ ಸಖತ್ ಬ್ಯಾಟಿಂಗ್ ಮಾಡಿದರು. ನಂತರ ಯುವಕರಿಗೆ ಥ್ಯಾಂಕ್ಸ್ ಕೊಟ್ಟು ಅಲ್ಲಿಂದ ಮುಂದೆ ಬೇರೆ ಕಾರ್ಯಕ್ರಮಕ್ಕೆ ತೆರಳಿದರು.

ಸಂತೋಷ್ ಲಾಡ್ ಎಂಟ್ರಿ ಕಾಂಗ್ರೆಸ್​ಗೆ ಗೊಂದಲ ಕಳೆದ ಬಾರಿ ಭಾರೀ ಸೋಲಿನ ನಂತರ ಕ್ಷೇತ್ರದಿಂದ ಸಂತೋಷ ಲಾಡ್ ಬಹುತೇಕ ದೂರವೇ ಉಳಿದಿದ್ದರು. ಹೀಗಾಗಿ ಕಾಂಗ್ರೆಸ್ ಎಂಎಲ್​ಸಿ ನಾಗರಾಜ್ ಛಬ್ಬಿ ಕ್ಷೇತ್ರದಲ್ಲಿ ಸಂಚಾರ ನಡೆಸಿದ್ದರು. ಮುಂದಿನ ಭಾರಿ ತಾವೇ ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕಿಯಿಳಿಯಲು ಭರ್ಜರಿ ತಯಾರಿಸಿ ನಡೆಸಿದ್ದರು. ಅಲ್ಲದೇ ಕೊರೊನಾ ಸಮಯದಲ್ಲಿ ಬಡ ಕಾರ್ಮಿಕರಿಗೆ ಕಿಟ್ ಹಂಚಿಕೆ ಮಾಡಿದ್ದರು. ತಮ್ಮ ಮಗಳ ಮದುವೆಯನ್ನು ಕಲಘಟಗಿಯಲ್ಲಿ ಮಾಡಿ ಭರ್ಜರಿ ಆರಂಭ ನೀಡಿದ್ದರು.

ಈಗಲೂ ಛಬ್ಬಿ ಕಲಘಟಗಿ ಕ್ಷೇತ್ರದಲ್ಲೆ ಪ್ರತಿ ದಿನ ರೌಂಡ್ಸ್ ಹೊಡೆಯುತ್ತಿದ್ದಾರೆ. ಆದರೆ ಛಬ್ಬಿ ಆಗಮನದ ಸುದ್ದಿ ಕೇಳಿ ಸಂತೋಷ ಲಾಡ್ ಕಳೆದ ಎರಡು ಮೂರು ತಿಂಗನಿಳಿಂದ ಮತ್ತೆ ಕಲಘಟಗಿ ಕ್ಷೇತ್ರಕ್ಕೆ ಎಂಟ್ರಿ ನೀಡಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ.

ಕ್ಷೇತ್ರದ ಜನರ ಮದುವೆ ಕಾರ್ಯಕ್ರಮ ಹಾಗೂ ಇನ್ನಿತರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾನೂ ಕೂಡ ಮತ್ತೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎನ್ನುವ ಸಂದೇಶ ನೀಡಿದ್ದಾರೆ. ಕಳೆದ ಭಾರಿ ಬಿಜೆಪಿ ಅಭ್ಯರ್ಥಿ ಸಿ.ಎಂ. ನಿಂಬಣ್ಣವರ ಎದುರು 26 ಸಾವಿರ ಮತಗಳಿಂದ ಸೋತಿರುವ ಲಾಡ್, ಸದ್ಯ ಭರ್ಜರಿಯಾಗಿ ಪೂರ್ವ ತಯಾರಿ ನಡೆಸಲು ಮುಂದಾಗಿದ್ದಾರೆ. ಇದೇ ಕಸರತ್ತು ಜಿಲ್ಲಾ ಕಾಂಗ್ರೆಸ್​ಗೆ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ ಇಬ್ಬರೂ ನಾಯಕರು ಒಂದೇ ಕ್ಷೇತ್ರದಲ್ಲಿ ತಾಲೀಮು ನಡೆಸುತ್ತಿರುವುದರಿಂದ ಸಹಜವಾಗಿ ಯಾರಿಗೆ ಬೆಂಬಲ ನೀಡಬೇಕು ಎನ್ನುವ ಗೊಂದಲದಲ್ಲಿದೆ.

ಸುದ್ದಿ ವಿಶ್ಲೇಷಣೆ: ವಾಸ್ತವ ಒಪ್ಪಿಕೊಳ್ಳಲು ಯಡಿಯೂರಪ್ಪ ಹಿಂದೇಟು ಏಕೆ? ಮ.ಪ್ರದೇಶ ಮುಖ್ಯಮಂತ್ರಿಗೆ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಸಾಧ್ಯವಾಗುತ್ತಿಲ್ಲ ಏಕೆ?

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌