ಕೌಟುಂಬಿಕ ಕಲಹ: ದಾವಣಗೆರೆಯಲ್ಲಿ ಟ್ರಾಕ್ಟರ್ ಹತ್ತಿಸಿ ತಾಯಿ ಮತ್ತು ಸಹೋದರಿಯನ್ನೇ ಕೊಂದ ಪಾಪಿ..
ಸರೋಜಮ್ಮ (63) ಜ್ಯೋತಿ (42) ಕೊಲೆಯಾದ ತಾಯಿ ಹಾಗೂ ಸಹೋದರಿಯಾಗಿದ್ದಾರೆ. ಆರೋಪಿ ಭರಮಗೌಡ, ಕೌಟುಂಬಿಕ ಕಲಹದ ಹಿನ್ನೆಲೆಯಿಂದಾಗಿ ಇಬ್ಬರ ಮೇಲೆ ಟ್ರಾಕ್ಟರ್ ಹತ್ತಿಸಿ ಕಬ್ಬಿಣ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾನೆ.
ದಾವಣಗೆರೆ: ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೋರ್ವ ತಾಯಿ ಮತ್ತು ಸಹೋದರಿಯ ಮೇಲೆ ಟ್ರಾಕ್ಟರ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಯಕ್ಕೆಗುಂಡಿ ಗ್ರಾಮದಲ್ಲಿ ನಡೆದಿದೆ.
ಸರೋಜಮ್ಮ (63) ಜ್ಯೋತಿ (42) ಕೊಲೆಯಾದ ತಾಯಿ ಹಾಗೂ ಸಹೋದರಿ. ಆರೋಪಿ ಭರಮಗೌಡ, ಕೌಟುಂಬಿಕ ಕಲಹದ ಹಿನ್ನೆಲೆಯಿಂದಾಗಿ ಇಬ್ಬರ ಮೇಲೆ ಟ್ರಾಕ್ಟರ್ ಹತ್ತಿಸಿ, ಕಬ್ಬಿಣ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಅವಘಡದಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಮಲೇಬೆನ್ನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಳಿಕ ಆರೋಪಿ ಭರಮಗೌಡ ಪರಾರಿಯಾಗಿದ್ದು, ಭರಮಗೌಡನಿಗಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.
ಕೋಟೆ ನಾಡಿನಲ್ಲಿ ಭೀಕರ ಘಟನೆ, ಹಳೇ ವೈಷಮ್ಯಕ್ಕೆ ಮಹಿಳೆಯನ್ನು ಕೊಚ್ಚಿ, ಕೊಚ್ಚಿ ಬರ್ಬರ ಹತ್ಯೆ
Published On - 4:10 pm, Fri, 8 January 21