ಕೇಂದ್ರ ಸರ್ಕಾರದಿಂದ ನಿರ್ಮಲ ಭಾರತ್ ಅಭಿಯಾನ ಅನುದಾನ ಏರಿಕೆ: ಕೆ.ಎಸ್. ಈಶ್ವರಪ್ಪ
ನಿರ್ಮಲ ಭಾರತ್ ಅಭಿಯಾನದಲ್ಲಿ 4 ಸಾವಿರ ಇದ್ದ ಅನುದಾನವನ್ನು 12 ಸಾವಿರಕ್ಕೆ ಕೇಂದ್ರ ಸರ್ಕಾರ ಏರಿಕೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಂಗಳೂರು: ಕೇಂದ್ರ ಸರ್ಕಾರ 2012 ರಲ್ಲಿ ನಿರ್ಮಲ ಭಾರತ್ ಅಭಿಯಾನದಲ್ಲಿ 4 ಸಾವಿರ ಇದ್ದ ಅನುದಾನವನ್ನು 12 ಸಾವಿರಕ್ಕೆ ಏರಿಕೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಈಗಾಗಲೇ, 685 ಗ್ರಾಮಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಆರಂಭವಾಗಿದೆ. 5 ಏಜೆನ್ಸಿ ಮೂಲಕ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಸೋಲಾರ್ ಮೂಲಕ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದ್ದು, ಒಂದು ವರ್ಷದೊಳಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಗಡುವು ನೀಡಲಾಗಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2,169 ಕೋಟಿ ಮೊತ್ತದ ಕಾಮಗಾರಿ ಆರಂಭವಾಗಿದೆ. ಎರಡು ಹಂತದಲ್ಲಿ ಅನುಷ್ಠಾನವಾಗುವ ಯೋಜನೆಗೆ 1,271 ಕೋಟಿ ರೂ. ಅನುದಾನ ದೊರೆತಿದೆ. 5,427 ಕೀ.ಮೀಟರ್ಗೆ 3,671 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಜೊತೆಗೆ, 1ಕೋಟಿ 10ಲಕ್ಷ ಮಾನವ ದಿನವನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬಳಸಿಕೊಳ್ಳಲು ಹೆಚ್ಚುವರಿ ಅವಕಾಶ ನೀಡಲಾಗಿದೆ. ಇದು 104 ತಾಲೂಕಿಗೆ ಅನ್ವಯ ಆಗುತ್ತದೆ ಎಂದು ಈಶ್ವರಪ್ಪ ವಿವರಿಸಿದ್ದಾರೆ.
ಈಶ್ವರಪ್ಪ ಮುಖ್ಯಮಂತ್ರಿ ಆಗಬೇಕು ಎಂದು ಜೈಕಾರ ಹಾಕಿದ ಕಾಂಗ್ರೆಸ್ ಶಾಸಕ! ಯಾರು? ಎಲ್ಲಿ?



