ಸಾರ್ವಜನಿಕ ಪುಟಗಳಿಂದ ಲೈಕ್ ಬಟನ್ ತೆಗೆದುಹಾಕಿದ ಫೇಸ್ಬುಕ್
ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ತಮ್ಮ ಹಿಂಬಾಲಕರು ಹಾಗೂ ಅಭಿಮಾನಿಗಳನ್ನು ತಲುಪಲು ಫೇಸ್ಬುಕ್ ಬಳಕೆ ಮಾಡುತ್ತಿದ್ದಾರೆ. ಫೇಸ್ಬುಕ್ ಪೇಜ್ನಲ್ಲಿ ಈ ಮೊದಲು ಲೈಕ್ ಹಾಗೂ ಫಾಲೋವಿಂಗ್ ಆಯ್ಕೆ ಇತ್ತು. ಈಗ ಲೈಕ್ ಬಟನ್ ತೆಗೆಯಲು ಫೇಸ್ಬುಕ್ ನಿರ್ಧರಿಸಿದೆ.
ಫೇಸ್ಬುಕ್ ಸಾರ್ವಜನಿಕ ಪುಟಗಳನ್ನು (Public Pages) ಮರುವಿನ್ಯಾಸಗೊಳಿಸಿದೆ. ಇನ್ನು ಮುಂದೆ ಫೇಸ್ಬುಕ್ನ ಸಾರ್ವಜನಿಕ ಪುಟಗಳಲ್ಲಿ ಲೈಕ್ ಬಟನ್ ಇರುವುದಿಲ್ಲ ಎಂದು ಫೇಸ್ಬುಕ್ ಬುಧವಾರ ತಿಳಿಸಿದೆ.
ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ತಮ್ಮ ಹಿಂಬಾಲಕರು ಹಾಗೂ ಅಭಿಮಾನಿಗಳನ್ನು ತಲುಪಲು ಫೇಸ್ಬುಕ್ ಬಳಕೆ ಮಾಡುತ್ತಿದ್ದಾರೆ. ಫೇಸ್ಬುಕ್ ಪೇಜ್ನಲ್ಲಿ ಈ ಮೊದಲು ಲೈಕ್ ಹಾಗೂ ಫಾಲೋವಿಂಗ್ ಆಯ್ಕೆ ಇತ್ತು. ಈಗ ಲೈಕ್ ಬಟನ್ ತೆಗೆಯಲು ಫೇಸ್ಬುಕ್ ನಿರ್ಧರಿಸಿದೆ. ಜನವರಿ 6ರಿಂದಲೇ ಈ ಹೊಸ ವಿನ್ಯಾಸ ಚಾಲ್ತಿಯಲ್ಲಿದೆ.
ತಮ್ಮ ಇಷ್ಟದ ಪೇಜ್ ಗಳನ್ನು ಜನರು ಸುಲಭವಾಗಿ ಸಂಪರ್ಕಿಸಲು ನಾವು ಲೈಕ್ಸ್ನ್ನು ತೆಗೆದುಹಾಕಿದ್ದು, ಫಾಲೋವರ್ಗಳ ಬಗ್ಗೆ ಮಾತ್ರ ಕೇಂದ್ರೀಕರಿಸಿದ್ದೇವೆ ಎಂದು ಫೇಸ್ ಬುಕ್ ಹೇಳಿದೆ.
ಇನ್ನುಮುಂದೆ ವೈಯಕ್ತಿಕ ಖಾತೆ ಹಾಗೂ ಪೇಜ್ಗಳನ್ನು ಸುಲಭವಾಗಿ ಹುಡುಕಬಹುದು. ಹೊಸ ಅಡ್ಮಿನ್ ಕಂಟ್ರೋಲ್ ಮೂಲಕ ವಿಶ್ವಾಸಾರ್ಹ ಪುಟ ನಿರ್ವಹಣಾಕಾರರಿಗೆ ಸಂಪೂರ್ಣ ನಿಯಂತ್ರಣ ಅಥವಾ ಭಾಗಶಃ ನಿಯಂತ್ರಣ ಕೊಡಬಹುದು. ಇನ್ಸೈಟ್, ಜಾಹೀರಾತುಗಳು, ಸಮುದಾಯ ಚಟುವಟಿಕೆ ಮತ್ತು ಸಂದೇಶಗಳು ಸೇರಿದಂತೆ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ವಿವಿಧ ಹಂತದ ಆ್ಯಕ್ಸೆಸ್ ನೀಡಲು ಈಗ ನಿಮಗೆ ಸಾಧ್ಯವಾಗುತ್ತದೆ.
Published On - 5:35 pm, Fri, 8 January 21