5ತಿಂಗಳಲ್ಲಿ 4ಕೇಸ್.. ಆ ಐವರು ಅಪ್ರಾಪ್ತ ರಾಕ್ಷಸರು ಮಾಡಿದ ಕೃತ್ಯ ತಿಳಿದ್ರೆ ಬೆಚ್ಚಿ ಬೀಳ್ತೀರಾ!

|

Updated on: Dec 20, 2020 | 7:28 AM

ನಾವು ಫೀಲ್ಡ್‌ನಲ್ಲಿ ಹೆಸರು ಮಾಡಬೇಕು, ಎಲ್ಲರಿಂದ ಗುರ್ತಿಸಿಕೊಳ್ಳಬೇಕು ಅನ್ನೋ ಕಾರಣಕ್ಕೋ ಏನೋ ಮಂಡ್ಯ ಜಿಲ್ಲೆಯ ಅಪ್ರಾಪ್ತರು ಪದೇ ಪದೆ ಕ್ರೈಮ್ ಮಾಡ್ತಾನೆ ಇದ್ರು. ಅಪ್ರಾಪ್ತರು ಅನ್ನೋ ನೆಪದಲ್ಲಿ ಬಚಾವ್ ಆಗಲು ಪ್ಲ್ಯಾನ್ ಮಾಡಿದ್ರು. ಆದ್ರೆ ಬಾಲ ನ್ಯಾಯ ಮಂಡಳಿ ಅಪ್ರಾಪ್ತ ಆರೋಪಿಗಳಿಗೆ ಸರಿಯಾಗಿಯೇ ಶಾಕ್ ನೀಡಿದೆ.

5ತಿಂಗಳಲ್ಲಿ 4ಕೇಸ್.. ಆ ಐವರು ಅಪ್ರಾಪ್ತ ರಾಕ್ಷಸರು ಮಾಡಿದ ಕೃತ್ಯ ತಿಳಿದ್ರೆ ಬೆಚ್ಚಿ ಬೀಳ್ತೀರಾ!
Follow us on

ಮಂಡ್ಯ: ಜಿಲ್ಲೆಯಲ್ಲಿ ಕಳೆದ ಐದು ತಿಂಗಳಲ್ಲಿ ಒಂದರ ಹಿಂದೆ ಒಂದು ಕ್ರೈಮ್ ನಡೆಯುತ್ತಲೇ ಇದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನ ಕಂಡು ಮಂಡ್ಯದ ಜನ ಬೆಚ್ಚಿ ಬಿದ್ದಿದ್ದಾರೆ. ಮನೆಯಿಂದ ಹೊರಗಡೆ ಕಾಲಿಡುವ ಮುನ್ನ ನೂರಾರು ಬಾರಿ ಯೋಚಿಸುವಂತೆ ಮಾಡಿದೆ ಈ ಅಪ್ರಾಪ್ತರ ಕೃತ್ಯಗಳು. ರೇಪ್, ಮರ್ಡರ್, ದರೋಡೆ ಹೀಗೆ ಸಾಲು ಸಾಲು ಘಟನೆಗಳು ಮಂಡ್ಯದ ಜನರ ನಿದ್ದೆಗೆಡಿಸಿವೆ. ಆದ್ರೆ ಇದೀಗ ಬಾಲ ನ್ಯಾಯ ಮಂಡಳಿ ನೀಡಿರುವ ಆದೇಶ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ.

ಅಪ್ರಾಪ್ತರೆಂದು ಬಿಡ್ಬೇಡಿ ಎಂದ ಬಾಲ ನ್ಯಾಯ ಮಂಡಳಿ:
ಅಂದಹಾಗೆ ಮಂಡ್ಯ ಜಿಲ್ಲೆಯಲ್ಲಿ ಕಳೆದ 5 ತಿಂಗಳಲ್ಲಿ ನಡೆದಿರುವ ನಾಲ್ಕು ಕೇಸ್‌ಗಳಲ್ಲಿ ಐವರು ಅಪ್ರಾಪ್ತರನ್ನ ಬಂಧಿಸಲಾಗಿದೆ. ಘೋರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಐವರು ಅಪ್ರಾಪ್ತರನ್ನ ವಯಸ್ಕರು ಎಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಬಾಲ ನ್ಯಾಯ ಮಂಡಳಿ ಆದೇಶ ಹೊರಡಿಸಿದೆ. ಪ್ರಕರಣದ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಅಷ್ಟಕ್ಕೂ ಈ ರಾಕ್ಷಸರು ಮಾಡಿರೋ ಘನಘೋರ ಕೃತ್ಯಗಳು ಏನು ಅಂದ್ರೆ.
ಐವರು ಅಪ್ರಾಪ್ತರ ಘನಘೋರ ಕೃತ್ಯ:
-ಬಾಲಕಿ ರೇಪ್ ಌಂಡ್ ಮರ್ಡರ್
-ರಘು ಎಂಬ ಯುವಕನ ಬರ್ಬರ ಹತ್ಯೆ
-ಸುಮಂತ್ ಎಂಬ ಯುವಕನ ಮರ್ಡರ್
-ಲಾರಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ, ದರೋಡೆ

ಹೀಗೆ ಸಾಲು ಸಾಲು ಕೃತ್ಯವೆಸಗುತ್ತಿದ್ದ ಅಪ್ರಾಪ್ತರ ವಿರುದ್ಧ ಮಂಡ್ಯದ ಜನ ಸಿಡಿದೆದ್ದಿದ್ದಾರೆ. ಅಪ್ರಾಪ್ತರು ಅನ್ನೋ ಕಾರಣಕ್ಕೆ ಕರುಣೆ ತೋರದೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದೀಗ ಬಾಲ ನ್ಯಾಯ ಮಂಡಳಿ ಅಪ್ರಾಪ್ತರಾಗಿದ್ರೂ, ಅವರು ನಡೆಸಿರುವುದು ಹೀನ ಕೃತ್ಯ. ಹಾಗಾಗಿ ಇವರನ್ನು ವಯಸ್ಕರೆಂದು ಪರಿಗಣಿಸಿ ವಿಚಾರಣೆ ಮುಂದುವರೆಸುವಂತೆ ಆದೇಶ ಹೊರಡಿಸಿದೆ. ಈ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಅಡ್ಡದಾರಿ ಹಿಡಿದಿರುವ ಅಪ್ರಾಪ್ರ ಬಾಲಕರಿಗೆ ಬಾಲ ನ್ಯಾಯ ಮಂಡಳಿಯ ಆದೇಶ ಒಂದು ಎಚ್ಚರಿಕೆಯ ಗಂಟೆಯಾಗಿದೆ.

ಫ್ರೆಂಡ್ಸ್ ಜೊತೆ ಎಣ್ಣೆ ಪಾರ್ಟಿ ಮಾಡಿ ಮನೆಗೆ ಹೋಗುತ್ತಿದ್ದವ ನಡು ರಸ್ತೆಯಲ್ಲಿ ಭೀಕರವಾಗಿ ಕೊಲೆಯಾದ..