ಕರ್ನಾಟಕ ಮೂಲ ಸೌಕರ್ಯಕ್ಕೆ ಒತ್ತು: ಕೇಂದ್ರದಿಂದ 1.16 ಲಕ್ಷ ಕೋಟಿ ರೂ. ಯೋಜನೆ- ನಿತಿನ್ ಗಡ್ಕರಿ
2019-21ನೇ ಅವಧಿಯಲ್ಲಿ 11 ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಒಳಗೊಂಡಿರುವ ರಸ್ತೆಗಳ ಉದ್ದ 275 ಕಿಮೀ ಆಗಿದೆ. ಇದಕ್ಕೆ ಸುಮಾರು 5,083 ಕೋಟಿ ರೂ ಖರ್ಚಾಗಿದೆ ಎಂದು ಗಡ್ಕರಿ ತಿಳಿಸಿದರು.
ದೆಹಲಿ: ಮುಂಬರುವ ವರ್ಷಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ 1.16 ಲಕ್ಷ ಕೋಟಿ ರೂಪಾಯಿ ಮೂಲ ಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕರ್ನಾಟಕದಲ್ಲಿನ ವಿವಿಧ ಮೂಲ ಸೌಕರ್ಯ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದ ನಂತರದಲ್ಲಿ ಮಾತನಾಡಿದ ಗಡ್ಕರಿ, ಕರ್ನಾಟಕದಲ್ಲಿ 1,200 ಕಿಮೀ ಹೆದ್ದಾರಿ ರಚನೆ ಮಾಡುವ 33 ಯೋಜನೆಗಳನ್ನು ಕೇಂದ್ರ ಸಿದ್ಧಪಡಿಸಿದೆ. ಇದಕ್ಕೆ ಸರಿ ಸುಮಾರು. 1,16,44 ಕೋಟಿ ರೂಪಾಯಿ ವೆಚ್ಚವಾಗಲಿದೆ. ಮುಂದಿನ ವರ್ಷಗಳಲ್ಲಿ ನಾವು ಈ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
2019-21ನೇ ಅವಧಿಯಲ್ಲಿ 11 ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಒಳಗೊಂಡಿರುವ ರಸ್ತೆಗಳ ಉದ್ದ 275 ಕಿಮೀ ಆಗಿದೆ. ಇದಕ್ಕೆ ಸುಮಾರು 5,083 ಕೋಟಿ ರೂ ಖರ್ಚಾಗಿದೆ ಎಂದು ಗಡ್ಕರಿ ತಿಳಿಸಿದರು.
ಇಂದಿನ ಕಾರ್ಯಕ್ರಮದಲ್ಲಿ 22 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಈ ಯೋಜನೆ ಒಟ್ಟು 1,197 ಕಿ.ಮೀ ದೂರದ ರಸ್ತೆ ಅಭಿವೃದ್ಧಿ ಕಾರ್ಯವನ್ನು ಒಳಗೊಂಡಿದೆ. ಇದಕ್ಕೆ ಸುಮಾರು 1,0,904 ಕೋಟಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಈ ಪೈಕಿ ಈಗಾಗಲೇ ಕೆಲ ಯೋಜನೆಗಳು ಪೂರ್ಣಗೊಂಡಿವೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂ ತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸದಾನಂದ ಗೌಡ, ವಿಕೆಸಿಂಗ್ ಕೂಡ ಕೂಡ ಪಾಲ್ಗೊಂಡಿದ್ದರು.
ಹುಬ್ಬಳ್ಳಿ-ಸೊಲ್ಲಾಪುರ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ನಿತಿನ್ ಗಡ್ಕರಿ ಒಪ್ಪಿಗೆ