ಹುಬ್ಬಳ್ಳಿ: ಸಾಮಾನ್ಯವಾಗಿ ಸಾಧು ಸಂತರು, ಮಠಾಧೀಶರು ತಮ್ಮ ಜೀವನದುದ್ದಕ್ಕೂ ಮಠಮಾನ್ಯಗಳಲ್ಲಿ ಜೀವನಗೈದು ತಮ್ಮ ಜೀವಿತಾವಧಿಯ ಕೊನೆಯಲ್ಲಿ ಲಿಂಗೈಕ್ಯ ಹೋಂದುವುದು ಸಾಮಾನ್ಯ. ಆದರೆ ಜೈನ ಸಮುದಾಯದ ಜೈನಮುನಿಗಳು ತಮ್ಮದೇ ಒಂದು ಸಂಪ್ರದಾಯ ಆಚಾರ ಬದ್ದವಾಗಿ ಕಠಿಣ ವ್ರತದ ಮೂಲಕ ತಮ್ಮ ಜೀವಿತಾವಧಿಯನ್ನ ಪೂರ್ಣಗೊಳಿಸುತ್ತಾರೆ. ಇಂತಹ ಕಠಿಣ ವ್ರತದ ಮೂಲಕ ಜಿಲ್ಲೆಯ ಜೈನಮುನಿಗಳು ತಮ್ಮ ದೇಹ ತ್ಯಾಗಕ್ಕಾಗಿ ಮುಂದಾಗಿದ್ದಾರೆ.
ಹುಬ್ಬಳ್ಳಿ ತಾಲೂಕಿನ ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ 88 ವರ್ಷದ ಜೈನ ಮುನಿಗಳಿಂದ ಸಲ್ಲೇಖನ ವ್ರತ ಆಚರಣೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳಿ ಗ್ರಾಮದ ಶ್ರೀ ನೇಮಿಸಾಗರ ಮಹಾರಾಜರಿಂದ ಕಳೆದ 22 ದಿನಗಳಿಂದ ಈ ಕಠಿಣ ಸಲ್ಲೇಖನ ವ್ರತ ನಡೆಯುತ್ತಿದೆ. ಈ ಮೊದಲು ಗ್ರಹಸ್ತರಾಗಿದ್ದ ನೇಮಿಸಾಗರ ಮುನಿಗಳು ಕಳೆದ 25 ವರ್ಷಗಳ ಹಿಂದೆ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದು, ಇದೀಗ ಕಠಿಣ ಸಲ್ಲೇಖನ ವ್ರತ ಆಚರಿಸುವ ಮೂಲಕ ತಮ್ಮ ದೇಹ ತ್ಯಾಗಕ್ಕೆ ಮುಂದಾಗಿದ್ದಾರೆ.
ಕಠಿಣ ವ್ರತ
ಕಳೆದ 22 ದಿನಗಳಿಂದ ಸಲ್ಲೇಖನ ವ್ರತ ಕೈಗೊಂಡಿರುವ ಜೈನ ಮುನಿಗಳು ಕಠಿಣ ರೀತಿಯ ವ್ರತಕ್ಕೆ ಮುಂದಾಗಿದ್ದಾರೆ. ಅಂದರೆ ಪ್ರತಿ ನಿತ್ಯ ಯಾವುದೇ ಆಹಾರ ಸೇವಿಸದೇ, ಹಣ್ಣು ಹಂಪಲು ಸೇವಿಸದೇ ಕೇವಲ 2 ಬೊಗಸೆ ನೀರು ಹಾಗೂ ದ್ರವರೂಪದ ಹಣ್ಣಿನ ರಸ ಸೇವಿಸುವ ಅವರು ಹಂತ ಹಂತವಾಗಿ, ದಿನದಿಂದ ದಿನಕ್ಕೆ ನೀರನ್ನೂ ಸಹ ತ್ಯಜಿಸುತ್ತಾರೆ. ಯಾವುದೇ ಸುಖಭೋಗಗಳನ್ನು ಬಯಸದೇ ಅತ್ಯಂತ ಕಠಿಣ ಪರಿಶ್ರಮ ಹಾಗೂ ಜೈನ ತೀರ್ಥಂಕರನ ಆರಾಧನೆ ಮಾಡುವ ಮೂಲಕ ತಮ್ಮ ಜೀವನದುದ್ದಕ್ಕೂ ಅತ್ಯಂತ ಕಠಿಣ ರೀತಿಯ ಸಂಪ್ರದಾಯಗಳನ್ನು ಪಾಲಿಸುವ ಮೂಲಕ ದೈವಿ ಭಕ್ತರಾಗಿ ಜೈನ ಸಮುದಾಯದವರಲ್ಲಿ ದೈವಿ ಸಂಭೂತರಾಗಿದ್ದಾರೆ. ಇನ್ನು ಕರ್ನಾಟಕದಲ್ಲೇ ಈ ಮುನಿಗಳು ಸತತ 22 ದಿನಗಳ ಕಾಲ ಸಲ್ಲೇಖನ ವ್ರತ ಕೈಗೊಂಡಿರುವ ಏಕೈಕ ಮುನಿಗಳಾಗಿದ್ದು, ಈ ರೀತಿಯ ಕಠಿಣ ವ್ರತದ ಮೂಲಕ ತಮ್ಮ ಜೀವನ ತ್ಯಾಗಕ್ಕೆ ಮುಂದಾಗಿರುವುದು ವಿಶೇಷ.
ಇದನ್ನೂ ಓದಿ
ಶಿವಣ್ಣ ಮನೆ ಮುಂದೆ ಟೈಟ್ ಸೆಕ್ಯೂರಿಟಿ; ಶಿವರಾಜ್ ಕುಮಾರ್, ಬಿ.ಟಿ. ಲಲಿತಾ ನಾಯಕ್ ಸೇರಿ ನಾಲ್ವರಿಗೆ ಕೊಲೆ ಬೆದರಿಕೆ..
ದಾವಣಗೆರೆ: ತಮ್ಮ ಸಮಸ್ಯೆಯನ್ನು ತಾವೆ ಬಗೆಹರಿಸಿಕೊಂಡ ದೇವರಳ್ಳಿ ಗ್ರಾಮದ ಜನರು; ಸುತ್ತುವರೆದ ರಾಜಕೀಯ ದ್ವೇಷ