ದಾವಣಗೆರೆ: ತಮ್ಮ ಸಮಸ್ಯೆಯನ್ನು ತಾವೆ ಬಗೆಹರಿಸಿಕೊಂಡ ದೇವರಳ್ಳಿ ಗ್ರಾಮದ ಜನರು; ಸುತ್ತುವರೆದ ರಾಜಕೀಯ ದ್ವೇಷ
ಚನ್ನಗಿರಿ ತಾಲೂಕಿನ ದೇವರಳ್ಳಿ ಗ್ರಾಮದ ಪಕ್ಕ ಕೆರೆಯಿದೆ. ಸದಾ ಯಾವಾಗಲೂ ತುಂಬಿರುತಿದ್ದ ಕೆರೆ ಈ ಗ್ರಾಮದ ಜೀವನಾಡಿಯಾಗಿತ್ತು. ಆದರೆ ಕಳೆದ 30 ವರ್ಷದಿಂದ ಬರಿದಾಗಿದ್ದು, ಬರಿದಾದ ಕೆರೆಯಿಂದ ಜಾನುವಾರಗಳಿಗೆ, ತೋಟಗಳಿಗೆ ಸರಿಯಾದ ನೀರಿಲ್ಲದೆ ಕಷ್ಟ ಅನುಭವಿಸುತಿದ್ದರು.
ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಳ್ಳಿ ಗ್ರಾಮದ ಜನ 30 ವರ್ಷದಿಂದ ದನಕರುಗಳಿಗೆ, ತೋಟಕ್ಕೆ ನೀರು ಇಲ್ಲದೆ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದರು. ಯಾವ ಸರ್ಕಾರ ಬಂದರು, ಯಾವುದೇ ಜನಪ್ರತಿನಿಧಿ ಬಂದರು ಕೂಡ ಇವರ ಸಮಸ್ಯೆ ಬಗೆಹರಿಸಿರಲಿಲ್ಲ. ಸರ್ಕಾರವನ್ನು, ಸರ್ಕಾರದ ಯೋಜನೆಗಳನ್ನು ನಂಬಿ ಕುಳಿತರೆ ಕೆಲಸ ಆಗುವುದಿಲ್ಲ ಎನ್ನುವ ನಿರ್ಧಾರ ಮಾಡಿದ್ದರು. ಇದರಿಂದ ಜನ ತಮ್ಮ ಸಮಸ್ಯೆಯನ್ನ ತಾವೆ ಬಗೆಹರಿಸಿಕೊಂಡಿದ್ದಾರೆ. ಅದರೂ ಕೂಡ ಸಾವಿರಾರು ಜನರಿಗೆ ಒಳಿತಾಗುವ ಕಾರ್ಯದಲ್ಲಿ ರಾಜಕೀಯ ದ್ವೇಷದ ಗಾಳಿ ಕೂಡ ಸುತ್ತುವರೆದಿದೆ.
ಚನ್ನಗಿರಿ ತಾಲೂಕಿನ ದೇವರಳ್ಳಿ ಗ್ರಾಮದ ಪಕ್ಕ ಕೆರೆಯಿದೆ. ಸದಾ ಯಾವಾಗಲೂ ತುಂಬಿರುತಿದ್ದ ಕೆರೆ ಈ ಗ್ರಾಮದ ಜೀವನಾಡಿಯಾಗಿತ್ತು. ಆದರೆ ಕಳೆದ 30 ವರ್ಷದಿಂದ ಬರಿದಾಗಿದ್ದು, ಬರಿದಾದ ಕೆರೆಯಿಂದ ಜಾನುವಾರಗಳಿಗೆ, ತೋಟಗಳಿಗೆ ಸರಿಯಾದ ನೀರಿಲ್ಲದೆ ಕಷ್ಟ ಅನುಭವಿಸುತಿದ್ದರು. ಜನರು ಗ್ರಾಮ ಪಂಚಾಯತಿ, ಶಾಸಕರಿಗೆ, ಸಚಿವರಿಗೆ ಕೆರೆ ತುಂಬಿಸಲು ಸಾಕಷ್ಟು ಮನವಿಯನ್ನ ಮಾಡಿದ್ದರು. ಆದರೆ ಇದು ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ಕೆಲವು ಏತ ನೀರಾವರಿ ಯೋಜನೆಯ ಮೂಲಕ ಕೆರೆಗೆ ನೀರು ತುಂಬಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿತ್ತು. ಕಳೆದ 30 ವರ್ಷದಿಂದ ಕೆಲಸ ಆಗದೆ ಇರುವುದಕ್ಕೆ ಜನರು ಬೇಸತ್ತು ಹೋಗಿದ್ದರು. ಈಗ ಗ್ರಾಮದ ಜನರೆ ತಮ್ಮ ಕೈಲಾದಷ್ಟು ಹಣ ಹಾಕಿ ಕಿಸಾನ್ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಬಸವರಾಜ್ ಶಿವಗಂಗಾ ಅವರಿಂದ ಕೊಂಚ ಹಣ ಪಡೆದು ಪಕ್ಕದ ಸೂಳೆ ಕೆರೆಗೆ ಹರಿಯುವ ತುಮರಿ ಹಳ್ಳದಿಂದ ತಮ್ಮ ಕೆರೆಗೆ ನೀರು ತಂದಿದ್ದಾರೆ. ಒಟ್ಟು 2 ಕಿಲೋಮೀಟರ್ ದೂರದಿಂದ 4 ಇಂಚಿನ ಎರಡು ಪೈಪ್ಗಳನ್ನ ಹಾಕಿ ನೀರು ತರಲು ಕಷ್ಟಪಟ್ಟು ವ್ಯವಸ್ಥೆ ಮಾಡಿದ್ದಾರೆ. ಆದರೆ ಇದನ್ನ ಸಹಿಸದೆ ಚನ್ನಗಿರಿ ಹಾಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಿರಂತರ ಜ್ಯೋತಿಯ ಲೈನ್ ಕಟ್ ಮಾಡಿಸಿ ನೀರು ಬರದಂತೆ ಮಾಡಿದರು. ಆದರೆ ಗ್ರಾಮದ ಜನರೆಲ್ಲ ಎದೆಗುಂದದೆ ನಾವೆ ಜನರೇಟರ್ ತಂದು ನೀರು ಬರುವಂತೆ ಮಾಡಿದ್ದೇವೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ಮಾಡದಂತೆ ಮನವಿ ಎರಡು ಕಿಲೋಮೀಟರ್ ದೂರದಿಂದ ನೀರು ತರಲು ಪಂಪ್ಗಳಿಗೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಡ್ಡಿ ಮಾಡಿದ್ದು, ನೀರಾವರಿ ಇಲಾಖೆಯವರಿಂದ ಬೆದರಿಕೆ ಹಾಕಿಸಿದ್ದಲ್ಲದೆ, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಜನರೇಟರ್ಗಳ ಮೂಲಕ ಸೂಳೆ ಕೆರೆ ಹಳ್ಳದ ನೀರನ್ನು ಕೆರೆಗೆ ತುಂಬಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಶಿವಗಂಗಾ ಬಸವರಾಜ್ ಗಂಗೆ ಪೂಜೆ ನೆರವೇರಿಸಿ ಹಾಲಿ ಶಾಸಕರ ಕೆರೆ ಅಭಿವೃದ್ಧಿ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಜನರ ಸಮಸ್ಯೆ ಆಲಿಸಿ ಅವರ ಕಷ್ಟ ಬಗೆಹರಿಸಬೇಕಾಗಿದ್ದು, ಜನಪ್ರತಿನಿಧಿಗಳ ಕೆಲಸ. ಜನರೆ ಹಣ ಹಾಕಿ ತಮ್ಮ ಕೆರೆಗೆ ನೀರು ಬರುವಂತೆ ಮಾಡಿದ್ದಾರೆ. ಈ ಕೆಲಸವನ್ನ ಶಾಸಕರು ಶ್ಲಾಘಿಸಬೇಕಿತ್ತು. ಅದನ್ನ ಬಿಟ್ಟು ಕರೆಂಟ್ ಕಟ್ ಮಾಡಿ ಅವರಿಗೆ ತೊಂದರೆ ಕೊಡುವ ಶಾಸಕರು ನಮಗೆ ಬೇಕಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ
ಹೆಚ್ಚು ಪ್ರಮಾಣದಲ್ಲಿ ಪಡಿತರ ಪಡೆಯಲು 20 ಮಕ್ಕಳನ್ನು ಯಾಕೆ ಹೆರಬಾರದು: ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಪ್ರಶ್ನೆ
ಅವನತಿಯ ಅಂಚಿನಲ್ಲಿರುವ ಹೆಬ್ಬಾಳ ಸೇತುವೆ; ಅನಾಹುತ ಸಂಭವಿಸುವ ಮೊದಲೆ ಎಚ್ಚೆತ್ತುಕೊಳ್ಳಲು ಚಿಕ್ಕಮಗಳೂರು ಜನತೆ ಆಗ್ರಹ
Published On - 11:39 am, Mon, 22 March 21