ಹೆಚ್ಚು ಪ್ರಮಾಣದಲ್ಲಿ ಪಡಿತರ ಪಡೆಯಲು 20 ಮಕ್ಕಳನ್ನು ಯಾಕೆ ಹೆರಬಾರದು: ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್  ಪ್ರಶ್ನೆ

Tirath Singh Rawat: ಕೊವಿಡ್ ಸಾಂಕ್ರಾಮಿಕದ ಹೊತ್ತಲ್ಲಿ ಬಡಕುಟುಂಬಗಳು ಆಹಾರಕ್ಕಾಗಿ ಕಷ್ಟಪಡುತ್ತಿವೆ. ಆಹಾರ ಧಾನ್ಯಗಳನ್ನು ವಿತರಿಸುವ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಹೆಚ್ಚಿನ ಪ್ರಮಾಣದ ಆಹಾರವಸ್ತುಗಳನ್ನು ಪಡೆಯಬೇಕಾದರೆ ಆ ಕುಟುಂಬಗಳು 20 ಮಕ್ಕಳನ್ನು ಹೊಂದಲಿ ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.

ಹೆಚ್ಚು ಪ್ರಮಾಣದಲ್ಲಿ ಪಡಿತರ ಪಡೆಯಲು 20 ಮಕ್ಕಳನ್ನು ಯಾಕೆ ಹೆರಬಾರದು: ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್  ಪ್ರಶ್ನೆ
ತೀರಥ್ ಸಿಂಗ್ ರಾವತ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 22, 2021 | 11:08 AM

ರಾಮ್​ನಗರ್ (ಉತ್ತರಾಖಂಡ):  ಹರಿದ ಜೀನ್ಸ್ ಧರಿಸಿದ ಮಹಿಳೆಯರು ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ ಎಂದು ಪ್ರಶ್ನಿಸಿ ಸುದ್ದಿಯಾಗಿದ್ದ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ. ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವತ್,  ಕೊವಿಡ್ ಸಾಂಕ್ರಾಮಿಕದ ಹೊತ್ತಲ್ಲಿ ಬಡಕುಟುಂಬಗಳು ಆಹಾರಕ್ಕಾಗಿ ಕಷ್ಟಪಡುತ್ತಿವೆ. ಆಹಾರ ಧಾನ್ಯಗಳನ್ನು ವಿತರಿಸುವ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಹೆಚ್ಚಿನ ಪ್ರಮಾಣದ ಆಹಾರವಸ್ತುಗಳನ್ನು ಪಡೆಯಬೇಕಾದರೆ ಆ ಕುಟುಂಬಗಳು 20 ಮಕ್ಕಳನ್ನು ಹೊಂದಲಿ. ಎಲ್ಲ ಕುಟುಂಬಗಳಿಗೆ 5 ಕೆಜಿ ಪಡಿತರ ನೀಡಲಾಗುತ್ತದೆ. ಮನೆಯಲ್ಲಿ 10 ಮಂದಿ ಇದ್ದರೆ 50 ಕೆಜಿ, 20 ಮಂದಿ ಇದ್ದರೆ ಕ್ವಿಂಟಾಲ್ ಅಕ್ಕಿ ಸಿಗುತ್ತದೆ. ಇಬ್ಬರಿದ್ದರೆ 10 ಕೆಜಿ, 20 ಮಂದಿ ಇದ್ದರೆ ಕ್ವಿಂಟಾಲ್ ಎಂದು ಕೆಲವರು ಅಸೂಯೆ ಪಡುತ್ತಾರೆ. ಯಾಕೆ? ನೀವು ಎರಡು ಮಕ್ಕಳನ್ನು ಹೆರುವ ಬದಲು 20 ಮಕ್ಕಳನ್ನು ಹೆರುವುದಿಲ್ಲವೇಕೆ? ಎಂದು ಕೇಳಿದ್ದಾರೆ.

ಕಳೆದ ವರ್ಷ ಕೊವಿಡ್ ಸಾಂಕ್ರಾಮಿಕದಿಂದಾಗಿ ಲಾಕ್​ಡೌನ್ ಜಾರಿಯಾಗಿತ್ತು. ಕೊವಿಡ್ ಲಾಕ್​ಡೌನ್ ನಿಂದಾಗಿ ಹಲವಾರು ಜನರು ಕೆಲಸ ಕಳೆದುಕೊಂಡರು, ಜನರು ಆಹಾರಕ್ಕಾಗಿ ಪರದಾಡುವಂತಾಗಿತ್ತು. ಹೀಗಿರುವಾಗ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ 5 ಕೆಜಿ ಆಹಾರ ಧಾನ್ಯ, ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಒಬ್ಬ ವ್ಯಕ್ತಿಗೆ 1 ಕೆಜಿ ಧಾನ್ಯ ವಿತರಣೆ ಮಾಡಿತ್ತು.  ಮಕ್ಕಳ ಸಂಖ್ಯೆ ಕಡಿಮೆ ಇರುವ ಕುಟುಂಬಗಳಿಗೆ ಕಡಿಮೆ ಪ್ರಮಾಣದ ಆಹಾರ ಧಾನ್ಯಗಳು ಸಿಗುತ್ತದೆ . ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಹೆಚ್ಚು ಮಕ್ಕಳನ್ನು ಹುಟ್ಟಿಸಿ ಎಂದು ರಾವತ್ ಹೇಳಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ರಾವತ್ ಅವರು, ‘ನಮ್ಮನ್ನು 200 ವರ್ಷಗಳ ಕಾಲ ಗುಲಾಮರನ್ನಾಗಿಸಿಕೊಂಡಿದ್ದ ಅಮೆರಿಕ ಈಗ ವಿಶ್ವವನ್ನೇ ಆಳುತ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೆಣಗಾಡುತ್ತಿದೆ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

.‘ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಕೊರೊನಾ ಪಿಡುಗನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿದೆ. ಅಮೆರಿಕ ಪರದಾಡುತ್ತಿದೆ’. ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದಲ್ಲಿ 50 ಲಕ್ಷಕ್ಕೂ ಹೆಚ್ಚ ಜನರು ಕೊವಿಡ್​ನಿಂದಾಗಿ ಮೃತಪಟ್ಟಿದ್ದಾರೆ. ಅವರು ಮತ್ತೊಮ್ಮೆ ಲಾಕ್​ಡೌನ್​ನತ್ತ ಮುನ್ನಡೆಯುತ್ತಿದ್ದಾರೆ ಎಂದು ರಾವತ್ ಟೀಕಿಸಿದ್ದಾರೆ.

‘ಈ ಕಾಲದಲ್ಲಿ ನರೇಂದ್ರ ಮೋದಿಯಲ್ಲದೆ ಬೇರೆ ಯಾರಾದರೂ ಪ್ರಧಾನಿಯಾಗಿದ್ದರೆ ಭಾರತದ ಪರಿಸ್ಥಿತಿ ಏನಾಗುತ್ತಿತ್ತೋ. ನಮ್ಮ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು. ಅವರು ನಮ್ಮನ್ನು ಕಾಪಾಡಿದರು. ನಾವು ಅವರ ಸಲಹೆಗಳನ್ನು ಪಾಲಿಸಲಿಲ್ಲ. ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಸುವುದು, ಕೈಗಳನ್ನು ಆಗಾಗ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಹಲವು ವಿಚಾರಗಳಲ್ಲಿ ಅವರ ಸಲಹೆಗಳನ್ನು ಕೆಲ ಜನರು ಮಾತ್ರ ಪಾಲಿಸಿದರು’ ಎಂದು ರಾವತ್ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ತೀರಥ್ ಸಿಂಗ್ ರಾವತ್ ಮಹಿಳೆಯರು ರಿಪ್​ಡ್ ಜೀನ್ಸ್​ ಧರಿಸುವ ಬಗ್ಗೆ ಆಕ್ಷೇಪಕಾರಿ ಹೇಳಿಕೆ ನೀಡಿದ್ದರು. ರಿಪ್​ಡ್ ಜೀನ್ಸ್ ಧರಿಸಿದ ಮಹಿಳೆಯೊಬ್ಬರು ಸರ್ಕಾರೇತರ ಸಂಸ್ಥೆ ನಡೆಸುವುದನ್ನು ಕಂಡು ಬೇಸರವಾಯಿತು. ಆಕೆ ಸಮಾಜಕ್ಕೆ ಅದೆಂಥ ಮಾದರಿಯನ್ನು ನೀಡುತ್ತಿರಬಹುದು ಎಂದು ಲೇವಡಿ ಮಾಡಿದ್ದರು.

ರಿಪ್​ಡ್ ಜೀನ್ಸ್ ಸ್ಟೈಲ್ ಅನ್ನು ‘ಕತ್ತರಿ ಸಂಸ್ಕೃತಿ’ ಎಂದು ಹೇಳಿದ್ದ ರಾವತ್, ಹರಿದ ಜೀನ್ಸ್ ಧರಿಸಿ ಮೊಣಕಾಲು ತೋರಿಸಿದರೆ ಶ್ರೀಮಂತರು ಎಂದೆನಿಸಿಕೊಳ್ಳುವುದಿಲ್ಲ ಎಂಬುದನ್ನು ನಾವು ಕಲಿಸಿಕೊಡಬೇಕಿದೆ. ಹರಿದ ಜೀನ್ಸ್ ಧರಿಸಿ ನಾನು ನನ್ನ ಮಕ್ಕಳನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದೇನೆ? ಮೊಣಕಾಲು ತೋರಿಸುವಲ್ಲಿ ಹುಡುಗಿಯರು ಕಮ್ಮಿಯೇನಿಲ್ಲ. ಇದೆಲ್ಲಾ ಸರಿಯೇ?. ಭಾರತದಲ್ಲಿರುವ ಜನರು ಹರಿದ ಜೀನ್ಸ್ ಧರಿಸುತ್ತಿದ್ದರೆ ಇತರ ದೇಶದ ಜನರು ಮೈಮುಚ್ಚಿಕೊಂಡು, ಯೋಗ ಕಲಿಯುತ್ತಿದ್ದಾರೆ ಎಂದಿದ್ದರು.

ತೀರಥ್ ಸಿಂಗ್ ರಾವತ್ ಅವರ ಈ ಹೇಳಿಕೆಯು ಮಹಿಳಾದ್ವೇಷಿ ಎಂಬ ಟೀಕೆಗೆ ಒಳಗಾಗಿತ್ತು. #RippedJeans ಹ್ಯಾಷ್​ಟ್ಯಾಗ್​ ಟ್ವಿಟರ್​ನಲ್ಲಿ ಟ್ರೆಂಡಿಂಗ್ ಆಗಿತ್ತು. ಸಾವಿರಾರು ಜನರು ಮೀಮ್​ ಮತ್ತು ಜೋಕುಗಳನ್ನು ಹಂಚಿಕೊಂಡಿದ್ದರು.

ಹಲವು ರಾಜಕಾರಿಣಿಗಳು ಮತ್ತು ನಟರು ಸಹ ಈ ಹೇಳಿಕೆಯನ್ನು ಖಂಡಿಸಿದ್ದರು. ಪ್ರತಿರೋಧದ ಒತ್ತಡಕ್ಕೆ ಮಣಿದು ತೀರಥ್ ಸಿಂಗ್ ರಾವತ್ ಕ್ಷಮೆಯಾಚಿಸಿದ್ದರು. ಅದೇ ವೇಳೆ ಮತ್ತೊಮ್ಮೆ ರಿಪ್​ಡ್ ಜೀನ್ಸ್​ ಬಳಕೆ ಬಗ್ಗೆ ಆಕ್ಷೇಪಿಸಿದ್ದರು. ‘ನನಗೆ ಜೀನ್ಸ್ ಧರಿಸುವ ಬಗ್ಗೆ ಆಕ್ಷೇಪವಿಲ್ಲ, ರಿಪ್​ಡ್ ಜೀನ್ಸ್​ ಧರಿಸುವುದಕ್ಕೆ ಆಕ್ಷೇಪವಿದೆ’ ಎಂದಿದ್ದರು.

ಇದನ್ನೂ ಓದಿ:  ಹರಿದ ಜೀನ್ಸ್ ಧರಿಸುವ ಮಹಿಳೆಯರು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಾರೆ : ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್

ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವುದು ಮಹಿಳೆಯರ ಕರ್ತವ್ಯ: ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್ ಹೇಳಿಕೆ ಸಮರ್ಥಿಸಿಕೊಂಡ ಪತ್ನಿ ರಶ್ಮಿ ತ್ಯಾಗಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ