AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಾಪ್ ಭಾನು ಮೆಹ್ತಾ, ಅರವಿಂದ್ ಸುಬ್ರಮಣಿಯನ್ ರಾಜೀನಾಮೆಗೆ ಅಶೋಕ ವಿಶ್ವವಿದ್ಯಾಲಯ ಬೇಸರ

ಪ್ರತಾಪ್ ಭಾನು ಮೆಹ್ತಾ ಸಂಸ್ಥೆಯ ಉಪಕುಲಪತಿಗಳಾಗಿ ವಿಶ್ವವಿದ್ಯಾಲಯವನ್ನು ಮುನ್ನಡೆಸಿದ್ದಾರೆ, ಮಾರ್ಗದರ್ಶನ ನೀಡಿದ್ದಾರೆ. ಸುಬ್ರಮಣಿಯನ್ ಅವರು ಸಂಸ್ಥೆಗೆ ಶ್ರೇಷ್ಠತೆ, ಹೊಸ ಹೊಳಹುಗಳು ಹಾಗೂ ಶಕ್ತಿಯನ್ನು ತುಂಬಿದ್ದಾರೆ. ಇಬ್ಬರ ನಿರ್ಗಮನವು ವಿಶ್ವವಿದ್ಯಾಲಯಕ್ಕೆ ತುಂಬಲಾದ ನಷ್ಟವಾಗಿದೆ ಎಂದು ಅಶೋಕ ವಿಶ್ವವಿದ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತಾಪ್ ಭಾನು ಮೆಹ್ತಾ, ಅರವಿಂದ್ ಸುಬ್ರಮಣಿಯನ್ ರಾಜೀನಾಮೆಗೆ ಅಶೋಕ ವಿಶ್ವವಿದ್ಯಾಲಯ ಬೇಸರ
ಅರವಿಂದ್ ಸುಬ್ರಮಣಿಯನ್ ಹಾಗೂ ಪ್ರತಾಪ್ ಭಾನು ಮೆಹ್ತಾ
TV9 Web
| Updated By: ganapathi bhat|

Updated on:Apr 06, 2022 | 6:54 PM

Share

ದೆಹಲಿ: ಪ್ರಾಧ್ಯಾಪಕ ಹಾಗೂ ರಾಜಕೀಯ ಅಂಕಣಕಾರ ಪ್ರತಾಪ್ ಭಾನು ಮೆಹ್ತಾ ಹರ್ಯಾಣದ ಸೋಣಿಪತ್ ವಿಶ್ವವಿದ್ಯಾಲಯಕ್ಕೆ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯದ ಕುಲಪತಿಗಳು, ಉಪಕುಲಪತಿಗಳು ಹಾಗೂ ಟ್ರಸ್ಟೀ ಬೋರ್ಡ್​ನ ಮುಖ್ಯಸ್ಥರು ಇಂದು (ಮಾರ್ಚ್ 21) ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಾಪ್ ಭಾನು ಮೆಹ್ತಾ ಹಾಗೂ ಆರ್ಥಿಕ ತಜ್ಞ ಅರವಿಂದ್ ಸುಬ್ರಮಣಿಯನ್ ಅವರ ರಾಜೀನಾಮೆಯು ಸಾಂಸ್ಥಿಕ ಕೆಲಸಗಳಿಗೆ ಹಿನ್ನಡೆ ಉಂಟುಮಾಡಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

ಇಬ್ಬರ ರಾಜೀನಾಮೆ ಹಾಗೂ ಆ ಬಳಿಕ ಘಟಿಸಿದ ವಿದ್ಯಮಾನಗಳಿಂದ ಬೇಸರವಾಗಿದೆ. ಈ ಬಗ್ಗೆ ನಮ್ಮ ಹೂಡಿಕೆದಾರರ ಬಳಿ ಮಾತುಕತೆ ನಡೆಸುತ್ತೇವೆ. ಅಶೋಕ ಯುನಿವರ್ಸಿಟಿ ಸಂಸ್ಥೆಯ ಮೂಲ ತತ್ವಗಳಾದ ಶಿಕ್ಷಣ ಮತ್ತು ಸ್ವಾತಂತ್ರ್ಯದ ವಿಚಾರವಾಗಿ ನಮಗಿರುವ ಬದ್ಧತೆಯನ್ನು ಪುನಸ್ಥಾಪಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರತಾಪ್ ಭಾನು ಮೆಹ್ತಾ ಸಂಸ್ಥೆಯ ಉಪಕುಲಪತಿಗಳಾಗಿ ವಿಶ್ವವಿದ್ಯಾಲಯವನ್ನು ಮುನ್ನಡೆಸಿದ್ದಾರೆ, ಮಾರ್ಗದರ್ಶನ ನೀಡಿದ್ದಾರೆ. ಸುಬ್ರಮಣಿಯನ್ ಅವರು ಸಂಸ್ಥೆಗೆ ಶ್ರೇಷ್ಠತೆ, ಹೊಸ ಹೊಳಹುಗಳು ಹಾಗೂ ಶಕ್ತಿಯನ್ನು ತುಂಬಿದ್ದಾರೆ. ಇಬ್ಬರ ನಿರ್ಗಮನವು ವಿಶ್ವವಿದ್ಯಾಲಯಕ್ಕೆ ತುಂಬಲಾದ ನಷ್ಟವಾಗಿದೆ ಎಂದು ಅಶೋಕ ವಿಶ್ವವಿದ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವವಿದ್ಯಾಲಯದ ಪರವಾಗಿ ಕುಲಪತಿ ರುದ್ರಾಂಶು ಮುಖರ್ಜಿ ಮತ್ತು ಉಪಕುಲಪತಿ ಮಾಳವಿಕಾ ಸರ್ಕಾರ್, ಟ್ರಸ್ಟ್ ಬೋರ್ಡ್​ನ ಮುಖ್ಯಸ್ಥ ಆಶಿಶ್ ಧವನ್, ಮೆಹ್ತಾ ಮತ್ತು ಸುಬ್ರಮಣಿಯನ್ ಹೀಗೆ ತಿಳಿಸಿದ್ದಾರೆ.

ಖ್ಯಾತ ರಾಜಕೀಯ ಅಂಕಣಕಾರ ಪ್ರತಾಪ್ ಭಾನು ಮೆಹ್ತಾ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ಕೆಲದಿನಗಳ ಹಿಂದಷ್ಟೇ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆ ನಿರ್ಧಾರಕ್ಕೆ ಬೇಸರಿಸಿ ವಿಶ್ವವಿದ್ಯಾಲಯದ ಹಾಲಿ, ಮಾಜಿ ವಿದ್ಯಾರ್ಥಿಗಳು ಮತ್ತು ಇತರ ಉದ್ಯೋಗಿಗಳು ರಾಜೀನಾಮೆಗೆ ಕಾರಣ ತಿಳಿಸುವಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ಪತ್ರದ ಮುಖೇನ ಪ್ರತಿಕ್ರಿಯಿಸಿರುವ ಪ್ರತಾಪ್ ಭಾನು ಮೆಹ್ತಾ, ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಮೆಹ್ತಾ ಎರಡು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅವರು ಸಂಸ್ಥೆಗೆ ರಾಜಕೀಯ ಹೊಣೆಗಾರಿಕೆ ತಂದೊಡ್ಡುತ್ತಿದ್ದಾರೆ ಎಂದು ವಿಶ್ವವಿದ್ಯಾಲಯದ ಸ್ಥಾಪಕರು ಹೇಳಿಕೆ ನೀಡಿದ್ದರು. ಹಾಗಾಗಿ, ಈ ವಾರದ ಆರಂಭದಲ್ಲಿ ಪ್ರಾಧ್ಯಾಪಕ ಸ್ಥಾನದಿಂದಲೂ ಮೆಹ್ತಾ ಕೆಳಗಿಳಿದಿದ್ದಾರೆ. ಪ್ರತಾಪ್ ಭಾನು ಮೆಹ್ತಾ ರಾಜೀನಾಮೆ ನೀಡಿರುವುದು ಹರ್ಯಾಣ ಸೋಣಿಪತ್​ನ ಅಶೋಕ ವಿಶ್ವವಿದ್ಯಾಲಯದಲ್ಲಿ ಹೊಸ ವಿವಾದದ ವಿದ್ಯಾಮಾನಗಳಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಅಶೋಕ ವಿಶ್ವವಿದ್ಯಾಲಯ ವಿವಾದ: ವಿದ್ಯಾರ್ಥಿಗಳಿಗೆ ಮಾರ್ಮಿಕ ಪತ್ರ ಬರೆದು ರಾಜೀನಾಮೆ ನಿರ್ಧಾರಕ್ಕೆ ಬದ್ಧ ಎಂದ ಪ್ರತಾಪ್ ಭಾನು ಮೆಹ್ತಾ

ರಾಜಕೀಯ ಅಂಕಣಕಾರ, ಪ್ರಾಧ್ಯಾಪಕ ಪ್ರತಾಪ್ ಭಾನು ಮೆಹ್ತಾ ರಾಜೀನಾಮೆ; ಅಶೋಕ ಯುನಿವರ್ಸಿಟಿ ಟ್ರಸ್ಟ್ ವಿರುದ್ಧ ಶಿಕ್ಷಣ ತಜ್ಞರ ಅಸಮಾಧಾನ

Published On - 9:35 pm, Sun, 21 March 21