AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಣ್ಣ ಮನೆ ಮುಂದೆ ಟೈಟ್ ಸೆಕ್ಯೂರಿಟಿ; ಶಿವರಾಜ್ ಕುಮಾರ್, ಬಿ.ಟಿ. ಲಲಿತಾ ನಾಯಕ್ ಸೇರಿ ನಾಲ್ವರಿಗೆ ಕೊಲೆ ಬೆದರಿಕೆ..

ಲಲಿತಾ ನಾಯಕ್ ಅವರಿಗೆ ಬಂದ ಪತ್ರದಲ್ಲಿ ನಾಲ್ಕು ಗಣ್ಯರನ್ನು ಮೇ 1ರಂದು ಕೊಲೆ ಮಾಡುವುದಾಗಿ ತಿಳಿಸಲಾಗಿದೆಯಂತೆ. ಹೀಗಾಗಿ ಸೂಕ್ತ ರಕ್ಷಣೆ ಹಾಗೂ ತನಿಖೆಗೆ ಆಗ್ರಹಿಸಿ ಲಲಿತಾ ನಾಯಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಿವಣ್ಣ ಮನೆ ಮುಂದೆ ಟೈಟ್ ಸೆಕ್ಯೂರಿಟಿ; ಶಿವರಾಜ್ ಕುಮಾರ್, ಬಿ.ಟಿ. ಲಲಿತಾ ನಾಯಕ್ ಸೇರಿ ನಾಲ್ವರಿಗೆ ಕೊಲೆ ಬೆದರಿಕೆ..
ನಟ ಶಿವರಾಜ್ ಕುಮಾರ್
Follow us
ಆಯೇಷಾ ಬಾನು
|

Updated on: Mar 22, 2021 | 11:54 AM

ಬೆಂಗಳೂರು: ಸಾಮಾಜದಲ್ಲಿ ಹೆಸರು ಮಾಡಿದ ನಾಲ್ಕು ಗಣ್ಯರನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಪತ್ರ ಬಂದಿದೆ ಎಂದು ಮಾಜಿ ಸಚಿವೆ ಹಾಗೂ ಚಿಂತಕರಾದ ಬಿ.ಟಿ. ಲಲಿತಾ ನಾಯಕ್ ಸಮಾರಂಭವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪತ್ರಕರ್ತ ಹೆಚ್.ಆರ್. ರಂಗನಾಥ್, ನಟ ಶಿವರಾಜ್ ಕುಮಾರ್ ಹಾಗೂ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಲಲಿತಾ ನಾಯಕ್ ತಿಳಿಸಿದ್ದಾರೆ.

ಮಾಜಿ ಸಚಿವ ಹೆಚ್.ಎಂ. ರೇವಣ್ಣ ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೆಚ್.ಎಂ. ರೇವಣ್ಣ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ವೇದಿಕೆಯಲ್ಲಿ ತಮಗೂ ಹಾಗೂ ಮೂವರು ಗಣ್ಯರಿಗೆ ಕೊಲೆ ಬೆದರಿಕೆ ಇರುವ ಬಗ್ಗೆ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇನ್ನು ಲಲಿತಾ ನಾಯಕ್ ಅವರಿಗೆ ಬಂದ ಪತ್ರದಲ್ಲಿ ನಾಲ್ಕು ಗಣ್ಯರನ್ನು ಮೇ 1ರಂದು ಕೊಲೆ ಮಾಡುವುದಾಗಿ ತಿಳಿಸಲಾಗಿದೆಯಂತೆ. ಹೀಗಾಗಿ ಸೂಕ್ತ ರಕ್ಷಣೆ ಹಾಗೂ ತನಿಖೆಗೆ ಆಗ್ರಹಿಸಿ ಲಲಿತಾ ನಾಯಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಲಿತಾ ಅವರಿಗೆ ಇಂತಹ ಬೆದರಿಕೆ ಪತ್ರಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಬಾರಿ ಈ ರೀತಿಯ ಬೆದರಿಕೆ ಪತ್ರಗಳು ಅವರ ಮನೆಯ ವಿಳಾಸಕ್ಕೆ ಬರುತ್ತಲೇ ಇರುತ್ತವೆ.

ಶಿವರಾಜ್‌ಕುಮಾರ್ ಮನೆಯ ಬಳಿ ಪೊಲೀಸ್ ಭದ್ರತೆ ನಟ ಶಿವರಾಜ್‌ಕುಮಾರ್‌ಗೆ ಜೀವಬೆದರಿಕೆ ಇರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ರಾಜ್ಯ ಸರ್ಕಾರ ನಾಲ್ವರು ಪೊಲೀಸರು ಮತ್ತು ಗನ್‌ಮ್ಯಾನ್ ನಿಯೋಜನೆ ಮಾಡಿದೆ. ಹಾಗೂ ಶಿವರಾಜ್‌ಕುಮಾರ್ ಮನೆಯ ಬಳಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಆದ್ರೆ ಈ ಸುದ್ದಿಗೆ ಹೆಚ್ಚು ಒತ್ತು ನೀಡ ಬೇಡಿ ಎಂದು ಶಿವರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. BT Lalitha nayak letter

ಇದನ್ನೂ ಓದಿ: Mallikarjuna Kharge Threat call ಪ್ರಧಾನಿ ಮೋದಿ ವಿರುದ್ಧ ಮಾತನಾಡಿದರೆ ನಿಮ್ಮನ್ನು ಬಿಡಲ್ಲ -ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ