ಬೆಂಗಳೂರು: ಅಸ್ಸಾಂ ಮಾದರಿಯಂತೆ ಕರ್ನಾಟಕ ರಾಜ್ಯದಲ್ಲೂ ಮದರಸಾ ಬ್ಯಾನ್ (Madrasas Ban)ಗೆ ವಿವಿಧ ಹಿಂದೂಪರ ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿ ಮಾಡಿವೆ. ಮಕ್ಕಳಿಗೆ ಗಣಿತ, ಇತಿಹಾಸದ ಕುರಿತು ಪರಿಚಯವೇ ಮಾಡುತ್ತಿಲ್ಲ, ಮದರಸಗಳು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿವೆ. ಹೀಗಾಗಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಬ್ಯಾನ್ ಮಾಡಿದಂತೆ ನಮ್ಮ ರಾಜ್ಯದಲ್ಲೂ ಮದರಸಗಳನ್ನು ಬ್ಯಾನ್ ಮಾಡಿ ಅಲ್ಲಿ ಓದುತ್ತಿರುವ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮಾಡಬೇಕು ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ. ಆ ಮೂಲಕ ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಧರ್ಮ ವ್ಯಾಪಾರದ ನಂತರ ಮತ್ತೊಂದು ಧರ್ಮ ದಂಗಲ್ಗೆ ಕಾರಣವಾಗುವ ಸಾಧ್ಯತೆ ಇದೆ.
ಅಸ್ಸಾಂ ಹಾಗೂ ಪಶ್ಚಿಮ ಬಂಗಳ ಸರ್ಕಾರಗಳು ಮದರಸ ಬ್ಯಾನ್ ಮಾಡಿದಂತೆ ನಮ್ಮ ರಾಜ್ಯದಲ್ಲೂ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬರಲು ಆರಂಭವಾಗಿದೆ. ಮದರಸಾಗಳು ಉಗ್ರ ಚಟುವಟಿಕೆಗಳಿಗೆ ತಾಣವಾಗುತ್ತಿದೆ ಎಂದು ಆರೋಪಿಸಲಾಗುತ್ತಿದ್ದು, ಭಯೋತ್ಪಾದನೆ ಹಾಗೂ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿವೆ ಅಂತಲೂ ಹೇಳಲಾಗುತ್ತಿದೆ. ಅಲ್‌ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಬೆಂಗಳೂರಿನ ಮದರಸಾದ ಗುರು ಮೌಲನಾ ಅಂಝರ್ ಶಾ ಬಂಧನದ ಬಳಿಕ ಮದರಸ ಬ್ಯಾನ್ಗೆ ಬಲವಾದ ಕೂಗು ಕೇಳಿ ಬರಲು ಆರಂಭವಾಗಿದೆ.
ಈಗಾಗಲೇ ಅಸ್ಸಾಂ ಸರ್ಕಾರ ಮದರಸಾಗಳು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿವೆಯಂತಾ ಮದರಸಾಗಳನ್ನ ಬ್ಯಾನ್ ಮಾಡಿ ಒಡೆದು ಹಾಕಿದೆ. ಪಶ್ಚಿಮ ಬಂಗಾಳ ಸರ್ಕಾರವೂ ಬ್ಯಾನ್ ಮಾಡಿದೆ. ಹೀಗಾಗಿ ನಮ್ಮಲ್ಲಿಯೂ ಮದರಸಾಗಳನ್ನ ಬ್ಯಾನ್ ಮಾಡಿ ಅಲ್ಲಿಯ ಮಕ್ಕಳನ್ನ ಸರ್ಕಾರದ ಶಾಲೆಗೆ ಸೇರಿಸಬೇಕು. ಮದರಸಾ ಶಿಕ್ಷಕರಿಗೆ ಯಾವುದೇ ಪಾಠ ಬೋಧನೆಗೆ ಅಹರ್ತೆ ಇರುವುದಿಲ್ಲ. ಮಕ್ಕಳಿಗೆ ಗಣಿತ ಇತಿಹಾಸ ಭಾಷೆಗಳ ಪರಿಚಯವೇ ಮದರಸಾಗಳಲ್ಲಿ ಮಾಡುವುದಿಲ್ಲ. ಹೀಗಾಗಿ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಮದರಸಾಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡುವಂತೆ ಹಿಂದೂ ಪೂರ ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿ ಮಾಡಿವೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:19 am, Sat, 24 September 22