AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಚಯಸ್ಥರು, ಬ್ರೋಕರ್​ಗಳಿಗೆ ಪ್ರಾಪರ್ಟಿ ಪತ್ರ ಕೊಡುವವರೇ ಎಚ್ಚರ! ನಿಮಗೆ ತಿಳಿಯದಂತೆಯೇ ನಿಮ್ಮ ಸೈಟ್ ಸೇಲ್ ಆಗುತ್ತೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಂಚನೆಯ ಗ್ಯಾಂಗ್ ಪತ್ತೆಯಾಗಿದೆ. ನಿಮಗೆ ಅರಿವಿಲ್ಲದಂತೆ ನಿಮ್ಮ ಪ್ರಾಪರ್ಟಿಯನ್ನ ಮಾರಾಟ ಮಾಡಿ ವಂಚನೆ ಮಾಡ್ತಾರೆ.

ಪರಿಚಯಸ್ಥರು, ಬ್ರೋಕರ್​ಗಳಿಗೆ ಪ್ರಾಪರ್ಟಿ ಪತ್ರ ಕೊಡುವವರೇ ಎಚ್ಚರ! ನಿಮಗೆ ತಿಳಿಯದಂತೆಯೇ ನಿಮ್ಮ ಸೈಟ್ ಸೇಲ್ ಆಗುತ್ತೆ
ಕೃಷ್ಣಾ ರೆಡ್ಡಿ
TV9 Web
| Updated By: ಆಯೇಷಾ ಬಾನು|

Updated on:Sep 24, 2022 | 9:12 AM

Share

ಬೆಂಗಳೂರು: ಪರಿಚಯಸ್ಥರು, ಬ್ರೋಕರ್ ಗಳಿಗೆ ನಿಮ್ಮ ಪ್ರಾಪರ್ಟಿ ಪತ್ರ ಕೊಡುವವರೇ ಎಚ್ಚರ. ಜೆರಾಕ್ಸ್ ಡಾಕ್ಯುಮೆಂಟ್ಸ್ ಕೊಟ್ರೂ ನಿಮ್ಮನ್ನ ಠಾಣೆ ಮೆಟ್ಟಿಲು ಹತ್ತಿಸುತ್ತಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಂಚನೆಯ ಗ್ಯಾಂಗ್ ಪತ್ತೆಯಾಗಿದೆ. ನಿಮಗೆ ಅರಿವಿಲ್ಲದಂತೆ ನಿಮ್ಮ ಪ್ರಾಪರ್ಟಿಯನ್ನ ಮಾರಾಟ ಮಾಡಿ ವಂಚನೆ ಮಾಡ್ತಾರೆ.

ಹೆಚ್​ಎಸ್​ಆರ್ ಲೇಔಟ್ ನಲ್ಲಿ ಪ್ರಾಪರ್ಟಿ ಹೊಂದಿದ್ದ 76 ವರ್ಷದ ಕೃಷ್ಣಾರೆಡ್ಡಿ ಎಂಬುವವರು ವಂಚನೆಗೆ ಒಳಗಾಗಿದ್ದಾರೆ. ಮಾಲೀಕನಾ ಹೆಸರು ವಂಚಕನ ಹೆಸರು ಒಂದೇ ಇದಿದ್ದರಿಂದ ವಂಚನೆ ಮಾಡೋದಕ್ಕೆ ಮತ್ತಷ್ಟು ಸುಲಭವಾಗಿದೆ. ಸದ್ಯ ಈಗ ವಂಚನೆಗೆ ಒಳಗಾದ ಕೃಷ್ಣಾರೆಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ನ್ಯೂ ಯಾರ್ಕ್ ನಗರದ ಅಂಗಡಿಯೊಂದರಲ್ಲಿ ಥ್ಯಾಂಕ್ಸ್ ಯಾಕೆ ಹೇಳಲಿಲ್ಲ ಕೇಳಿದ್ದಕ್ಕೆ ನಡೆಯಿತೊಂದು ಕೊಲೆ!

ವಂಚನೆಗೆ ಒಳಗಾದ ಕೃಷ್ಣರೆಡ್ಡಿಗೆ ಪರಿಚಯವಾಗಿದ್ದ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ವಂಚಕ ಕೃಷ್ಣಾ ರೆಡ್ಡಿ ಎಂಬುವವನು ಪ್ರಾಪರ್ಟಿ ಮೇಲೆ ಲೋನ್ ತೆಗೆದುಕೊಳ್ಳುವ ಸಲುವಾಗಿ ಜೆರಾಕ್ಸ್ ದಾಖಲೆಗಳನ್ನ ನೀಡಿದ್ದ. ಆ ಎಲ್ಲಾ ದಾಖಲೆಗಳನ್ನ ಬ್ಯಾಂಕ್ ಎಂಪ್ಲಾಯ್ ಕೃಷ್ಣಾರೆಡ್ಡಿ ವಂಚಕ ನಾಗರಾಜ್ ಗೆ ನೀಡಿದ್ದ. ಬಳಿಕ ಆ ದಾಖಲೆಗಳನ್ನ ಒರಿಜಿನಲ್ ರೀತಿ ಮಾಡಿ ಆರೋಪಿ ನಾಗರಾಜ್ ಮಾರಾಟ ಮಾಡಿದ್ದಾನೆ. ಇಂಜಿನಿಯರ್ ದಿಲೀಪ್ ಕುಮಾರ್ ಎಂಬುವವರಿಗೆ ಕೃಷ್ಣಾ ರೆಡ್ಡಿಯವರ ಹೆಚ್​ಎಸ್​ಆರ್ ಲೇಔಟ್ ನ ಪ್ರಾಪರ್ಟಿ ಮಾರಿದ್ದಾನೆ. ನಾಗರಾಜ್ ನೀಡಿದ್ದ ದಾಖಲೆಗಳೆಲ್ಲವೂ ಒರಿಜಿನಲ್ ಎಂದು ತಿಳಿದು ದಿಲೀಪ್ ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ದಿಲೀಪ್ ಆ ಪ್ರಾಪರ್ಟಿಯನ್ನ ಇಳಂಗೋವನ್ ಮತ್ತು ಪ್ರೇಮ್ ಸಾಯಿಗೆ ಮಾರಾಟ ಮಾಡಿದ್ದಾರೆ. ಬಳಿಕ ಇಳಂಗೋವನ್ ಮತ್ತು ಪ್ರೇಮ್ ಸಾಯಿ ಈ ಪ್ರಾಪರ್ಟಿ ಮೇಲೆ ಎಲ್​ಐಸಿ ನಿಂದ ಲೋನ್ ತೆಗೆದು ಕೊಂಡಿದ್ದಾರೆ.

ಇಳಂಗೋವನ್ ಮತ್ತು ಪ್ರೇಮ್ ಸಾಯಿ ಲೋನ್ ಕಟ್ಟದೇ ಯಾಮಾರಿಸಿದ್ದಾರೆ. ಹೀಗಾಗಿ ಆಶೋಕ್ ನಗರ ಪೊಲೀಸ್ ಠಾಣೆಗೆ ಅಧಿಕಾರಿಗಳು ದೂರು ನೀಡಿದ್ರು. ಅಶೋಕ್ ನಗರ ಪೊಲೀಸರು 76 ವರ್ಷದ ವೃದ್ಧ ಕೃಷ್ಣಾ ರೆಡ್ಡಿಯನ್ನ ಪ್ರಕರಣ ಸಂಬಂಧ ಭೇಟಿ ಮಾಡಿದ್ರು. ಪೊಲೀಸರು ಮನೆಗೆ ಬಂದಾಗಲೇ ಕೃಷ್ಣರೆಡ್ಡಿ ವಂಚನೆಗೆ ಒಳಗಾಗಿರೋದು ಗೊತ್ತಾಗಿದೆ. ತನ್ನ ಪ್ರಾರ್ಪಟಿ ಮೇಲೆ ಲೋನ್ ತೆಗೆದು ಕೊಂಡಿದ್ದ ವಿಚಾರ ತಿಳಿದಿದೆ. ತಕ್ಷಣವೇ ಹೆಚ್​ಎಸ್​ಆರ್ ಪೊಲೀಸ್ ಠಾಣೆಗೆ ವೃದ್ಧ ಕೃಷ್ಣ ರೆಡ್ಡಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:12 am, Sat, 24 September 22