ನ್ಯೂ ಯಾರ್ಕ್ ನಗರದ ಅಂಗಡಿಯೊಂದರಲ್ಲಿ ಥ್ಯಾಂಕ್ಸ್ ಯಾಕೆ ಹೇಳಲಿಲ್ಲ ಕೇಳಿದ್ದಕ್ಕೆ ನಡೆಯಿತೊಂದು ಕೊಲೆ!
ಅಂಗಡಿಯಲ್ಲಿ ಉದ್ಯೋಗಿಯಾಗಿರುವ ಖಾರೆಫ್ ಅಲ್ಸೈದಿ ಹೇಳಿರುವ ಪ್ರಕಾರ ವ್ಯಕ್ತಿ ತಿವಿಸಿಕೊಂಡ ಬಳಿಕ ಅವನಿಗೆ ವಿಪರೀತ ರಕ್ತಸ್ರಾವವಾಗಿ ಅಂಗಡಿಯ ಪ್ರವೇಶದ್ವಾರದ ಬಳಿ ಕುಸಿದುಬಿದ್ದಿದ್ದಾನೆ. ನೆಲಕ್ಕೆ ಒರಗಿಯೇ, ‘ಅವನು ನನ್ನನ್ನು ತಿವಿದ, ಅವು ನನ್ನನ್ನು ತಿವಿದ’ ಅಂತ ಚೀರುತ್ತಿದ್ದನಂತೆ.
ಹಿಂಸೆಯ ಪ್ರಕರಣಗಳು ಹೆಚ್ಚುತ್ತಿರುವ ಅಮೆರಿಕದ ನ್ಯೂ ಯಾರ್ಕ್ (New York) ನಗರದಲ್ಲಿ ಒಂದು ಥ್ಯಾಂಕ್ಸ್ ಹೇಳದ್ದಕ್ಕೂ ಕೊಲೆ ನಡೆಯುತ್ತದೆ ಅಂದರೆ ನಂಬುತ್ತೀರಾ? ನಗರದ ಅಂಗಡಿಯೊಂದರಲ್ಲಿ ಒಬ್ಬ ಗ್ರಾಹಕ (shopper) ಮತ್ತೊಬ್ಬ ಗ್ರಾಹಕ ಒಳಗೆ ಪ್ರವೇಶಿಸುವಾಗ ಅವನಿಗೆ ಅನುಕೂಲವಾಗಲೆಂದು ಡೋರನ್ನು ತೆರೆದು ಹಿಡಿದು ನಿಂತಾಗ ಒಳಗೆ ಬಂದವನು ಇವನ ಮುಖವನ್ನೂ ನೋಡದೆ ಅಂಗಡಿಯೊಳಗೆ ಹೋದಾಗ, ವ್ಯಗ್ರಗೊಂಡ ಇವನು, ‘ಒಂದು ಥ್ಯಾಂಕ್ಸ್ ಹೇಳಕ್ಕಾಗಲ್ವೇನಯ್ಯ ನಿನ್ ಕೈಲಿ,’ ಅಂದಿದ್ದಾನೆ. ಅದಿಷ್ಟಕ್ಕೇ ಅವರಿಬ್ಬರ ನಡುವೆ ವಾಗ್ವಾದ ಶುರುವಾಗಿ ಬ್ರೂಕ್ಲಿನ್ ಸ್ಮೋಕ್ ಶಾಪ್ (Brooklyn smoke shop) ಹೊರಗಡೆ 37-ವರ್ಷ-ವಯಸ್ಸಿನ ವ್ಯಕ್ತಿ (ಬಾಗಿಲು ತೆರೆದು ನಿಂತವನು) ತಿವಿತಕ್ಕೊಳಗಾಗಿ ಸಾವಿಗೀಡಾಗಿದ್ದಾನೆ.
ನ್ಯೂ ಯಾರ್ಕ್ ನಗರದ ಗೊವಾನಸನಲ್ಲಿರುವ ನಾಲ್ಕನೇ ಅವೆನ್ಯೂ ಟೊಬ್ಯಾಕೊ ರೋಡ್ ಕಾರ್ಪೋರೆಶನ್ ನಲ್ಲಿ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ 10:20ಕ್ಕೆ ಸಂಭವಿಸಿದೆ.
ಮೃತ ವ್ಯಕ್ತಿ ಶಂಕಿತನಿಗೆ ನೀನ್ಯಾಕೆ ನನಗೆ ಥ್ಯಾಂಕ್ಸ್ ಹೇಳಲಿಲ್ಲ ಅಂಯ ಕೇಳಿದ್ದಕ್ಕೆ ಅವನಿಗೆ ಭಯಂಕರ ಕೋಪ ಬಂತಂತೆ.
ಅದಾದ ಮೇಲೆ ಅವರಿಬ್ಬರ ನಡುವೆ ಮಾತಿನ ಚಿಕಮಕಿ ಶುರುವಾಗಿದೆ. ಶಂಕಿತ ಅಲ್ಲಿಂದ ಹೊರಡಲು ಮುಂದಾದಾಗ ಬಲಿಯಾದ ವ್ಯಕ್ತಿ ಅವನಿಗೆ ಒಂದೇಟು ಹಾಕಿದ್ದಾನೆ.
ಮತ್ತಷ್ಟು ಕೋಪಗೊಂಡ ಶಂಕಿತ ಅವನಿಗೆ ಚಾಕುನಿಂದ ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ತಿವಿದಿದ್ದಾನೆ.
ಅಂಗಡಿಯಲ್ಲಿ ಉದ್ಯೋಗಿಯಾಗಿರುವ ಖಾರೆಫ್ ಅಲ್ಸೈದಿ ಹೇಳಿರುವ ಪ್ರಕಾರ ವ್ಯಕ್ತಿ ತಿವಿಸಿಕೊಂಡ ಬಳಿಕ ಅವನಿಗೆ ವಿಪರೀತ ರಕ್ತಸ್ರಾವವಾಗಿ ಅಂಗಡಿಯ ಪ್ರವೇಶದ್ವಾರದ ಬಳಿ ಕುಸಿದುಬಿದ್ದಿದ್ದಾನೆ. ನೆಲಕ್ಕೆ ಒರಗಿಯೇ, ‘ಅವನು ನನ್ನನ್ನು ತಿವಿದ, ಅವು ನನ್ನನ್ನು ತಿವಿದ’ ಅಂತ ಚೀರುತ್ತಿದ್ದನಂತೆ.
ತಿವಿತಕ್ಕೊಳಗಾದವನನ್ನು ಬ್ರೂಕ್ಲಿನ್ ಮೆಥೋಡಿಸ್ಟ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿನ ವೈದ್ಯರು ಅವನ ಪ್ರಾಣ ಹೋಗಿಬಿಟ್ಟಿದೆ ಅಂತ ಹೇಳಿದರು.
ಸುದ್ದಿ ಮಾಧ್ಯಮವೊಂದರ ಜೊತೆ ಮಾತಾಡಿರುವ ಅಲ್ಸೈದಿ, ‘ಬಾಗಿಲು ತೆರೆದಿದ್ದುಕ್ಕೆ ಥ್ಯಾಂಕ್ಸ್ ಹೇಳದ ಕಾರಣ ಇಷ್ಟೆಲ್ಲ ನಡೆಯಿತು’ ಎಂದು ಹೇಳಿದ್ದಾನೆ.
’ನಾನು ಬಾಗಿಲು ತೆರೆದಿದ್ದಕ್ಕೆ ನೀನ್ಯಾಕೆ ಥ್ಯಾಂಕ್ಸ್ ಹೇಳಲಿಲ್ಲ, ಎಂದು ತಿವಿಸಿಕೊಂಡ ವ್ಯಕ್ತಿ ಕೇಳಿದ,’ ಎಂದು ಅಲ್ಸೈದಿ ಹೇಳಿದ್ದಾನೆ.
ಅವರ ನಡೆಯುತ್ತಿದ್ದ ಜಗಳ ಬಿಡಿಸಿ ಶಂಕಿತನಿಂದ ಆಯುಧ ಕಸಿದುಕೊಳ್ಳುವ ನನ್ನ ಪ್ರಯತ್ನ ವಿಫಲವಾಯಿತು, ಅಂತ ಅಂಗಡಿಯ ಉದ್ಯೋಗಿ ಹೇಳಿದ್ದಾನೆ.
ಪೊಲೀಸರು ಶಂಕಿತನ ಪತ್ತೆಗಾಗಿ ಜಾಲ ಬೀಸಿದ್ದಾರೆ.